Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಇಸ್ರೇಲ್ ನ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ಘನತೆವೆತ್ತ ಲೆಫ್ಟಿನೆಂಟ್ ಜನರಲ್ (Res) ಬೆಂಜಮಿನ್ ಗ್ಯಾಂಟ್ಜ್

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಇಸ್ರೇಲ್ ನ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ಘನತೆವೆತ್ತ ಲೆಫ್ಟಿನೆಂಟ್ ಜನರಲ್ (Res) ಬೆಂಜಮಿನ್ ಗ್ಯಾಂಟ್ಜ್

ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಇಸ್ರೇಲ್ ನ ಉಪ ಪ್ರಧಾನಮಂತ್ರಿ ಮತ್ತು ರಕ್ಷಣಾ ಸಚಿವ ಘನತೆವೆತ್ತ ಲೆಫ್ಟಿನೆಂಟ್ ಜನರಲ್ (Res) ಬೆಂಜಮಿನ್ ಗ್ಯಾಂಟ್ಜ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ರಕ್ಷಣಾ ಸಹಕಾರದ ಕ್ಷಿಪ್ರ ಬೆಳವಣಿಗೆಯ ಬಗ್ಗೆ ನಾಯಕರು ಪರಾಮರ್ಶಿಸಿದರು.  ಭಾರತದಲ್ಲಿನ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಅವಕಾಶಗಳ ಪ್ರಯೋಜನ ಪಡೆಯುವಂತೆ ಇಸ್ರೇಲ್ ರಕ್ಷಣಾ ಕಂಪನಿಗಳನ್ನು ಪ್ರಧಾನಮಂತ್ರಿಯವರು ಉತ್ತೇಜಿಸಿದರು.

*****