ಎರಡು ದಿನಗಳ ಐತಿಹಾಸಿಕ ಬಾಂಗ್ಲಾದೇಶದ ಭೇಟಿಯ ವೇಳೆ ಪ್ರಧಾನಮಂತ್ರಿಯವರನ್ನು ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ. ಎ.ಕೆ. ಅಬ್ದುಲ್ ಮೊಮೆನ್ ಅವರು ಭೇಟಿ ಮಾಡಿದ್ದರು. ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಭ್ರಾತೃತ್ವದ ಬಾಂಧವ್ಯಗಳನ್ನು ಗಾಢಗೊಳಿಸುವ ಮತ್ತು ಸಾರ್ವಭೌಮತ್ವ, ಸಮಾನತೆ, ನಂಬಿಕೆ ಮತ್ತು ತಿಳಿವಳಿಕೆ ಆಧಾರದ ಮೇಲೆ ಎಲ್ಲವನ್ನೂ ಒಳಗೊಂಡ ಸಹಭಾಗಿತ್ವದ ಬಲವರ್ಧನೆ ಕುರಿತಂತೆ ಚರ್ಚಿಸಿದರು.
***