ಪರ್ಪ್ಲೆಕ್ಸಿಟಿ ಎಐ. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ( ಸಿಇಒ) ಶ್ರೀ ಅರವಿಂದ್ ಶ್ರೀನಿವಾಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಶ್ರೀ ಅರವಿಂದ್ ಶ್ರೀನಿವಾಸ್ ಅವರು ಎಕ್ಸ್ ಖಾತೆಯಲ್ಲಿ ತಿಳಿಸಿದೆ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ :
“ನಿಮ್ಮನ್ನು ಭೇಟಿಯಾಗಲು ಮತ್ತು ‘ಎಐ’ಯ ಉಪಯೋಗಗಳು, ಅಭಿವೃದ್ಧಿ ಹಾಗೂ ಅದರ ವಿಕಾಸದ ಕುರಿತು ಚರ್ಚಿಸಲು ಸಂತೋಷವಾಯಿತು.
@perplexity_ai ಸಂಸ್ಥೆ ಜೊತೆಗೆ ಎಐ ಕ್ಷೇತ್ರದಲ್ಲಿ ನೀವು ಉತ್ತಮ ಕೆಲಸ ಮಾಡುತ್ತಿರುವುದನ್ನು ನೋಡಲು ಸಂತೋಷವಾಗಿದೆ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ”.
*****
Was great to meet you and discuss AI, its uses and its evolution.
— Narendra Modi (@narendramodi) December 28, 2024
Good to see you doing great work with @perplexity_ai. Wish you all the best for your future endeavors. https://t.co/kD8d9LMorC