Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

 ಪ್ರಧಾನಮಂತ್ರಿಗಳ ಶ್ರೀಲಂಕಾ ಭೇಟಿ: ಸಭಾ ಒಪ್ಪಂದಗಳ ಪಟ್ಟಿ


 

ಕ್ರಮ.‌ಸಂ

ಒಪ್ಪಂದ/ಒಡಂಬಡಿಕೆ

ಶ್ರೀಲಂಕಾ ಪ್ರತಿನಿಧಿ

ಭಾರತದ ಪ್ರತಿನಿಧಿ

1.

ವಿದ್ಯುತ್ ಆಮದು/ರಫ್ತುಗಾಗಿ ಹೆಚ್ ವಿ ಡಿ ಸಿ ಅಂತರ್ ಸಂಪರ್ಕ ಅನುಷ್ಠಾನಕ್ಕಾಗಿ ಭಾರತ ಗಣರಾಜ್ಯ ಸರ್ಕಾರ ಮತ್ತು ಶ್ರೀಲಂಕಾದ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ

ಪ್ರೊ.ಕೆ.ಟಿ.ಎಂ.  ಉದಯಂಗ ಹೇಮಪಾಲ, ಕಾರ್ಯದರ್ಶಿ, ಇಂಧನ ಸಚಿವಾಲಯ

ಶ್ರೀ ವಿಕ್ರಮ್ ಮಿಶ್ರಿ, ವಿದೇಶಾಂಗ ಕಾರ್ಯದರ್ಶಿ

2.

ಭಾರತ ಗಣರಾಜ್ಯದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಶ್ರೀಲಂಕಾದ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯದ ಡಿಜಿಟಲ್ ಆರ್ಥಿಕ ಸಚಿವಾಲಯದ ನಡುವಿನ ತಿಳುವಳಿಕಾ ಒಪ್ಪಂದವು ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯೆಯ ಪ್ರಮಾಣದಲ್ಲಿ ಅಳವಡಿಸಲಾದ ಯಶಸ್ವಿ ಡಿಜಿಟಲ್ ಪರಿಹಾರ ಹಂಚಿಕೆ ಕ್ಷೇತ್ರದಲ್ಲಿ ಸಹಕಾರಕ್ಕೆ ಒಡಂಬಡಿಕೆ

ಶ್ರೀ ವರುಣ ಶ್ರೀ ಧನಪಾಲ, ಹಂಗಾಮಿ ಕಾರ್ಯದರ್ಶಿ, ಡಿಜಿಟಲ್ ಆರ್ಥಿಕತೆ ಸಚಿವಾಲಯ

ಶ್ರೀ ವಿಕ್ರಮ್ ಮಿಶ್ರಿ, ವಿದೇಶಾಂಗ ಕಾರ್ಯದರ್ಶಿ

3.

ಭಾರತ ಗಣರಾಜ್ಯದ ಸರ್ಕಾರ, ಶ್ರೀಲಂಕಾದ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯ ಸರ್ಕಾರ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ನಡುವೆ ಟ್ರಿಂಕೋಮಲಿಯನ್ನು ಇಂಧನ ತಾಣವಾಗಿ  ಅಭಿವೃದ್ಧಿಪಡಿಸಲು ಸಹಕಾರ ಒಪ್ಪಂದ

ಪ್ರೊ.ಕೆ.ಟಿ.ಎಂ.  ಉದಯಂಗ ಹೇಮಪಾಲ, ಕಾರ್ಯದರ್ಶಿ, ಇಂಧನ ಸಚಿವಾಲಯ

ಶ್ರೀ ವಿಕ್ರಮ್ ಮಿಶ್ರಿ, ವಿದೇಶಾಂಗ ಕಾರ್ಯದರ್ಶಿ

4.

ಭಾರತ ಗಣರಾಜ್ಯ ಸರ್ಕಾರ ಮತ್ತು ಶ್ರೀಲಂಕಾ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯ ಸರ್ಕಾರದ ನಡುವೆ  ರಕ್ಷಣಾ ಸಹಕಾರ ತಿಳುವಳಿಕಾ ಒಪ್ಪಂದ

ಏರ್ ವೈಸ್ ಮಾರ್ಷಲ್ ಸಂಪತ್ ತುಯಕೋಂತಾ (ನಿವೃತ್ತ), ಕಾರ್ಯದರ್ಶಿ, ರಕ್ಷಣಾ ಸಚಿವಾಲಯ

ಶ್ರೀ ಸಂತೋಷ್ ಝಾ, ಶ್ರೀಲಂಕಾದ ಭಾರತೀಯ ಹೈ ಕಮಿಷನರ್

5.

ಪೂರ್ವ ಪ್ರಾಂತ್ಯಕ್ಕೆ ಬಹು-ವಲಯ ಅನುದಾನ ನೆರವಿನ ತಿಳುವಳಿಕಾ ಒಪ್ಪಂದ

ಶ್ರೀ ಕೆ.ಎಂ.ಎಂ.  ಸಿರಿವರ್ಧನ, ಕಾರ್ಯದರ್ಶಿ, ಹಣಕಾಸು, ಯೋಜನೆ ಮತ್ತು ಆರ್ಥಿಕ ಅಭಿವೃದ್ಧಿ ಸಚಿವಾಲಯ

ಶ್ರೀ ಸಂತೋಷ್ ಝಾ, ಶ್ರೀಲಂಕಾದ ಭಾರತದ ಹೈ ಕಮಿಷನರ್

6.

ಭಾರತ ಗಣರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಶ್ರೀಲಂಕಾದ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯದ ಆರೋಗ್ಯ ಮತ್ತು ಸಮೂಹ ಮಾಧ್ಯಮ ಸಚಿವಾಲಯದ ನಡುವಿನ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ ತಿಳುವಳಿಕಾ ಒಪ್ಪಂದ

ಡಾ.ಅನಿಲ್ ಜಸಿಂಗೇ, ಕಾರ್ಯದರ್ಶಿ, ಆರೋಗ್ಯ ಮತ್ತು ಸಮೂಹ ಮಾಧ್ಯಮ ಸಚಿವಾಲಯ

ಶ್ರೀ ಸಂತೋಷ್ ಝಾ, ಶ್ರೀಲಂಕಾದ ಭಾರತದ ಹೈ ಕಮಿಷನರ್

7.

ಭಾರತೀಯ ಔಷಧೀಯ ಆಯೋಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಗಣರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಔಷಧ ನಿಯಂತ್ರಕ ಪ್ರಾಧಿಕಾರ, ಶ್ರೀಲಂಕಾ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯ ಸರ್ಕಾರದ ನಡುವೆ ಔಷಧೀಯ ಸಹಕಾರದ ಒಡಂಬಡಿಕೆ

ಡಾ.ಅನಿಲ್ ಜಸಿಂಗೇ, ಕಾರ್ಯದರ್ಶಿ, ಆರೋಗ್ಯ ಮತ್ತು ಸಮೂಹ ಮಾಧ್ಯಮ ಸಚಿವಾಲಯ

ಶ್ರೀ ಸಂತೋಷ್ ಝಾ, ಶ್ರೀಲಂಕಾದ ಭಾರತದ ಹೈ ಕಮಿಷನರ್

ಕ್ರ. ಸಂ.

ಯೋಜನೆಗಳು

1.

ಮಹೋ-ಒಮಂತೈ ರೈಲು ಮಾರ್ಗದ ಮೇಲ್ದರ್ಜೀಕೃತ ರೈಲ್ವೆ ಹಳಿ ಉದ್ಘಾಟನೆ.

2.

ಮಹೋ-ಅನುರಾಧಪುರ ರೈಲು ಮಾರ್ಗಕ್ಕೆ ಸಿಗ್ನಲಿಂಗ್ ವ್ಯವಸ್ಥೆ ನಿರ್ಮಾಣಕ್ಕೆ ಚಾಲನೆ

3.

ಸಂಪುರ್ ಸೌರ ವಿದ್ಯುತ್ ಯೋಜನೆಗೆ ಶಿಲಾನ್ಯಾಸ  (ವರ್ಚುಯಲ್)

4.

ದಂಬುಲ್ಲಾದಲ್ಲಿ ತಾಪಮಾನ ನಿಯಂತ್ರಿತ ಕೃಷಿ ಗೋದಾಮಿನ ಉದ್ಘಾಟನೆ (ವರ್ಚುಯಲ್)

5.

ಶ್ರೀಲಂಕಾದಾದ್ಯಂತ 5000 ಧಾರ್ಮಿಕ ಸಂಸ್ಥೆಗಳಿಗೆ ಸೌರ ಮೇಲ್ಛಾವಣಿ ವ್ಯವಸ್ಥೆಗಳ ಪೂರೈಕೆ (ವರ್ಚುಯಲ್)

 

 

 

 

 

ಪ್ರಕಟಣೆಗಳು:

ಭೇಟಿಯ ಸಮಯದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಭಾರತದಲ್ಲಿ ವಾರ್ಷಿಕವಾಗಿ ಸುಮಾರು 700 ಶ್ರೀಲಂಕನ್ನರಿಗೆ ಸಮಗ್ರ ಸಾಮರ್ಥ್ಯವರ್ಧನೆ ಕಾರ್ಯಕ್ರಮ ಪ್ರಕಟಿಸಿದ್ದಾರೆ. ತ್ರಿಕೋನಮಲಿಯ ತಿರುಕೋನೇಶ್ವರಂ ದೇವಾಲಯ; ನುವಾರ ಎಲಿಯಾದಲ್ಲಿನ ಸೀತಾ ಎಲಿಯಾ ದೇವಾಲಯ ಮತ್ತು ಅನುರಾಧಪುರದ ಪವಿತ್ರ ನಗರ ಸಂಕೀರ್ಣ ಯೋಜನೆಗಳ ಅಭಿವೃದ್ಧಿಗೆ ಭಾರತದ ಅನುದಾನ ನೆರವನ್ನು ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ವೇಸಾಕ್ ದಿನ, 2025ರಂದು ಶ್ರೀಲಂಕಾದಲ್ಲಿ ಭಗವಾನ್ ಬುದ್ಧನ ಭೌತಿಕ ಅವಶೇಷಗಳ ಪ್ರದರ್ಶನ ಮತ್ತು ಋಣ ಪುನಾರಚನೆ ಕುರಿತು ದ್ವಿಪಕ್ಷೀಯ ತಿದ್ದುಪಡಿ ಒಪ್ಪಂದಗಳ ತೀರ್ಮಾನ. 

 

*****