Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಗಳಿಂದ ಸಿಂಗಾಪುರ ಅಧ್ಯಕ್ಷರ ಭೇಟಿ

ಪ್ರಧಾನಮಂತ್ರಿಗಳಿಂದ ಸಿಂಗಾಪುರ ಅಧ್ಯಕ್ಷರ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಂಗಾಪುರದ ಅಧ್ಯಕ್ಷ ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿಯಾದರು. “ಸಂಪೂರ್ಣ ಶ್ರೇಣಿಯ ಭಾರತ-ಸಿಂಗಾಪುರ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯ ಬಗ್ಗೆ ನಾವು ಚರ್ಚಿಸಿದೆವು. ಅರೆವಾಹಕಗಳು, ಡಿಜಿಟಲೀಕರಣ, ಕೌಶಲ್ಯ, ಸಂಪರ್ಕ ಮತ್ತಿತರ ಭವಿಷ್ಯದ ವಲಯಗಳ ಬಗ್ಗೆ ನಾವು ಮಾತನಾಡಿದೆವು” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಸಂಜೆ, ಸಿಂಗಾಪುರದ ಅಧ್ಯಕ್ಷ ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಿದೆ. ಭಾರತ-ಸಿಂಗಾಪುರ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಎಲ್ಲಾ ವಿಷಯಗಳ ಬಗ್ಗೆ ನಾವು ಚರ್ಚಿಸಿದೆವು. ಸೆಮಿಕಂಡಕ್ಟರ್‌ಗಳು, ಡಿಜಿಟಲೀಕರಣ, ಕೌಶಲ್ಯ, ಸಂಪರ್ಕ ಮತ್ತು ಇನ್ನೂ ಹಲವಾರು ಭವಿಷ್ಯದ ಕ್ಷೇತ್ರಗಳ ಬಗ್ಗೆ ನಾವು ಮಾತನಾಡಿದೆವು. ಕೈಗಾರಿಕೆ, ಮೂಲಸೌಕರ್ಯ ಮತ್ತು ಸಂಸ್ಕೃತಿ ವಲಯಗಳಲ್ಲಿ ಸಹಕಾರ ಸುಧಾರಿಸುವ ಮಾರ್ಗಗಳ ಬಗ್ಗೆಯೂ ನಾವು ಮಾತನಾಡಿದೆವು.”

@Tharman_S

 

 

*****