ಮಾರಿಷಸ್ ಗಣರಾಜ್ಯದ ಅಧ್ಯಕ್ಷರಾದ ಶ್ರೀ ಧರಂಬೀರ್ ಗೋಖೂಲ್ ಅವರನ್ನು ಇಂದು ಅಲ್ಲಿನ ಭವನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.
ಭಾರತ ಮತ್ತು ಮಾರಿಷಸ್ ನಡುವಿನ ವಿಶೇಷ ಮತ್ತು ನಿಕಟ ದ್ವಿಪಕ್ಷೀಯ ಸಂಬಂಧಗಳನ್ನು ಆಳವಾಗಿಸುವ ಬಗ್ಗೆ ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ, ಅವರು ಎರಡೂ ದೇಶಗಳ ನಡುವಿನ ಇತಿಹಾಸ ವಿನಿಮಯ ಮತ್ತು ಜನರ ನಡುವಿನ ಸದೃಢ ಬಾಂಧವ್ಯದ ಅಸ್ತಿತ್ವವನ್ನು ನೆನಪು ಮಾಡಿಕೊಂಡರು. ಮಾರಿಷಸ್ನ ರಾಷ್ಟ್ರೀಯ ದಿನ ಕಾರ್ಯಕ್ರಮದಲ್ಲಿ ಎರಡನೇ ಬಾರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ತಮಗೆ ಆದರದ ಸಂಗತಿ ಎಂದು ಪ್ರಧಾನಮಂತ್ರಿ ಹೇಳಿದರು. ವಿಶೇಷ ಸೂಚಕವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧ್ಯಕ್ಷ ಗೋಖೂಲ್ ಮತ್ತು ಪ್ರಥಮ ಮಹಿಳೆ ವೃಂದಾ ಗೋಖೂಲ್ ಅವರಿಗೆ ಒಸಿಐ ಕಾರ್ಡ್ಗಳನ್ನು ಹಸ್ತಾಂತರಿಸಿದರು. ಭಾರತ ಸರ್ಕಾರದ ಸಹಯೋಗದಲ್ಲಿ ಸ್ಥಾಪಿಸಲಾದ ಸ್ಟೇಟ್ ಹೌಸ್ನಲ್ಲಿರುವ ಆಯುರ್ವೇದ ಉದ್ಯಾನವನಕ್ಕೆ ಪ್ರಧಾನಮಂತ್ರಿ ಭೇಟಿ ನೀಡಿದರು. ಆಯುರ್ವೇದ ಸೇರಿದಂತೆ ಪಾರಂಪರಿಕ ಔಷಧಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಮಾರಿಷಸ್ ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾತುಕತೆಯ ಬಳಿಕ, ಪ್ರಧಾನಮಂತ್ರಿಗಳಿಗೆ ಗೌರವಾರ್ಥಕವಾಗಿ ಅಧ್ಯಕ್ಷ ಗೋಖೂಲ್ ಅವರು ಔತಣ ಕೂಟ ಏರ್ಪಡಿಸಿದ್ದರು.
*****