Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿ’ ಮೂಲಕ ಪ್ರಧಾನ ಮಂತ್ರಿ ಸಮಾಲೋಚನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಐಸಿಟಿ ಆಧಾರಿತ, ಬಹುಮಾದರಿ ವೇದಿಕೆಯಾದ ’ಪ್ರಗತಿ’ (ಸಕ್ರಿಯ ಸರ್ಕಾರ ಮತ್ತು ಸಕಾಲಿಕ ಅನುಷ್ಠಾನ) ಯ 26 ನೇ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಮುನ್ನ 25 ಪ್ರಗತಿ ಸಭೆಗಳಲ್ಲಿ ಒಟ್ಟಾರೆ ಸುಮಾರು 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ೨೨೭ ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ. ವಿವಿಧ ವಲಯಗಳಲ್ಲಿ ಸಾರ್ವಜನಿಕ ಕುಂದು-ಕೊರತೆಗಳನ್ನೂ ಪರಾಮರ್ಶೆ ಮಾಡಲಾಗಿದೆ.

೨೬ನೇ ಪ್ರಗತಿ ಸಭೆಯಲ್ಲಿಂದು ಪ್ರಧಾನ ಮಂತ್ರಿಯವರು, ಅಂಚೆ ಕಚೇರಿ ಮತ್ತು ರೈಲ್ವೆ ವಲಯಗಳ ಕುಂದುಕೊರತೆ ನಿರ್ವಹಣೆ ಹಾಗೂ ಪ್ರಗತಿಯನ್ನು ಪರಾಮರ್ಶಿಸಿದರು. ಅಂಚೆ ಮತ್ತು ರೈಲ್ವೆ ಜಾಲಗಳಲ್ಲಿ ಡಿಜಿಟಲ್ ಹಣ ವಹಿವಾಟು ಅದರಲ್ಲೂ ’ಭೀಮ್’ ಮೊಬೈಲ್ ಅಪ್ಲಿಕೇಶನ್ ಬಳಕೆ ಹೆಚ್ಚಿಸುವ ಪ್ರಾಮುಖ್ಯತೆಗೆ ಸಭೆಯಲ್ಲಿ ಒತ್ತು ನೀಡಲಾಯಿತು.

ರೈಲ್ವೆ, ರಸ್ತೆ, ಪೆಟ್ರೋಲಿಯಂ ಮತ್ತು ಇಂಧನ ವಲಯಗಳಲ್ಲಿನ 9 ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನ ಮಂತ್ರಿ ಪರಾಮರ್ಶಿಸಿದರು. ಈ ಯೋಜನೆಗಳು ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಂಚಿಕೆಯಾಗಿವೆ. ಪಶ್ಚಿಮ ಸರಕು ಕಾರಿಡಾರ್, ಚಾರ್‌ಧಾಮ್ ಮಹಾಮಾರ್ಗ್ ವಿಕಾಸ್ ಪರಿಯೋಜನ ಮುಂತಾದವು ಈ ಯೋಜನೆಗಳಲ್ಲಿ ಸೇರಿವೆ.

ಇದೇ ವೇಳೆ, ’ಅಮೃತ್’ ಮಿಷನ್ ಅನುಷ್ಠಾನ ಪ್ರಗತಿ ಕುರಿತು ಸಹ ಪ್ರಧಾನ ಮಂತ್ರಿ ಪರಾಮರ್ಶೆ ನಡೆಸಿದರು. ಇದಲ್ಲದೆ ಪಿಡಿಎಸ್ ಕಾರ್ಯಚಟುವಟಿಕೆಯಲ್ಲಿ ಆರಂಭದಿಂದ ಅಂತ್ಯದವರೆಗಿನ ಗಣಕೀಕರಣ ಕಾರ್ಯಕ್ರಮ ಕುರಿತು ಸಹ ಪರಾಮರ್ಶಿಸಿದರು.

****