ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ನವದೆಹಲಿಯಲ್ಲಿಆಡಳಿತ ಪರವಾದ ಮತ್ತು ಸಕಾಲದ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ನಡೆದಹದಿನೆಂಟನೇಸಂವಾದದ ಅಧ್ಯಕ್ಷತೆ ವಹಿಸಿದ್ದರು.
ರೈಲ್ವೆಗೆ ಸಂಬಂಧಿಸಿದ ಕುಂದುಕೊರತೆಯ ನಿರ್ವಹಣೆ ಮತ್ತು ಪರಿಹಾರ ಕುರಿತ ಪ್ರಗತಿಯನ್ನು ಅವರು ಪರಿಶೀಲಿಸಿದರು. ಅಧಿಕಾರಿಗಳ ಭ್ರಷ್ಟ ಅಭ್ಯಾಸಕ್ಕೆ ಸಂಬಂಧಿಸಿದ ದೂರುಗಳೇ ದೊಡ್ಡ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳ ವಿರುದ್ಧ ಸಾಧ್ಯ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದರು. ಅಪಘಾತದ ಸಂದರ್ಭದಲ್ಲಿ ಒದಗಿಸುವ ಸಹಾಯವಾಣಿ ಸೇರಿದಂತೆ ಎಲ್ಲ ಕುಂದುಕೊರತೆ ಮತ್ತು ವಿಚಾರಣೆಗೆ ಒಂದೇ ದೂರವಾಣಿ ಸಂಖ್ಯೆ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪ್ರಧಾನಿ ಸೂಚಿಸಿದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಾಸ್ತಾನ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಉತ್ತರಪ್ರದೇಶ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ವ್ಯಾಪಿಸಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯ ಪರಿಶೀಲನೆಯನ್ನೂ ಪ್ರಧಾನಿ ನಡೆಸಿದರು.
ಇಂದು ಪರಾಮರ್ಶಿಸಲಾದ ಯೋಜನೆಗಳಲ್ಲಿ ಮುಂಬೈ ಮೆಟ್ರೆ, ತಿರುಪತಿ –ಚೆನ್ನೈ ಹೆದ್ದಾರಿ, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಯೋಜನೆಗಳು ಮತ್ತು ಜಮ್ಮು ಹಾಗೂ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಪ್ರಮುಖ ವಿದ್ಯುತ್ ವಿತರಣಾ ಮಾರ್ಗವೂ ಸೇರಿತ್ತು.
ಮಕ್ಕಳಲ್ಲಿ ಸಾರ್ವತ್ರಿಕ ನಿರೋಧಕ ಶಕ್ತಿ ನೀಡುವ ಇಂದ್ರಧನುಷ್ ಅಭಿಯಾನದ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿಗಳು, ಈ ನಿಟ್ಟಿನಲ್ಲಿ 100 ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಜಿಲ್ಲೆಗಳಲ್ಲಿ ಶಿಸ್ತಿನ ಸಮಯ ಚೌಕಟ್ಟಿನೊಳಗೆ ಗುರಿಯಾಧಾರಿತ ಗಮನ ಹರಿಸುವಂತೆ ಸೂಚಿಸಿದರು. ಸೋಂಕು ರೋಗ ನಿರೋಧಕ ಸೌಲಭ್ಯದಿಂದ ಒಂದು ಮಗವೂ ವಂಚಿತವಾಗದ ರೀತಿಯಲ್ಲಿ ಅಭಿಯಾನ ತಲುಪಲು ಯುವ ಸಂಘಟನೆಗಳಾದ ಎನ್.ಸಿ.ಸಿ. ಮತ್ತು ನೆಹರೂ ಯುವಕ ಕೇಂದ್ರಗಳನ್ನು ತೊಡಗಿಸಿಕೊಳ್ಳುವಂತೆಯೂ ಸೂಚಿಸಿದರು.
ಸ್ವಚ್ಛತಾ ಕ್ರಿಯಾ ಯೋಜನೆ ಪರಾಮರ್ಶಿಸಿದ ಪ್ರಧಾನಮಂತ್ರಿಯವರು, ಸ್ವಚ್ಛತಾ ಪಾಕ್ಷಿಕಗಳನ್ನು ಶಾಶ್ವತ ಪರಿಹಾರಕ್ಕಾಗಿ ಪರಿವರ್ತಿಸುವಂತೆ ಕರೆ ನೀಡಿದರು. ಅಮೃತ ಅಭಿಯಾನ ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಗಳು ಎಲ್.ಇ.ಡಿ. ಬಲ್ಬ್ ಗಳಂಥ, ಇತ್ತೀಚಿನ ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಸಾಧನೆಯ ಕುರಿತು ಪರಿಮಾಣ ಮತ್ತು ದಾಖಲೀಕರಣ ಮಾಡುವಂತೆ ಸೂಚಿಸಿದರು, ಹೀಗಾದಾಗ ಅದರ ಲಾಭ ಪ್ರತಿಯೊಬ್ಬರಿಂದಲೂ ಉತ್ತಮವಾಗಿ ಪ್ರಶಂಸೆಗೆ ಒಳಗಾಗುತ್ತದೆ ಎಂದರು.
2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಪರಿವರ್ತನಾತ್ಮಕ ಬದಲಾವಣೆ ತರಲು ಸಮಗ್ರ ಯೋಜನೆ ಮತ್ತು ಉದ್ದೇಶ ರೂಪಿಸುವಂತೆ ಪ್ರಧಾನಮಂತ್ರಿಯವರು ಕೇಂದ್ರ ಸರ್ಕಾರದ ಎಲ್ಲ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. 2019ರಲ್ಲಿ ಮಹಾತ್ಮಾಗಾಂಧಿ ಅವರ 150ನೇ ಜಯಂತಿಯ ವೇಳೆಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಗರಿಷ್ಠ ಪ್ರಯತ್ನ ಮಾಡುವಂತೆ ಸೂಚಿಸಿದರು.
***
AKT/HS