Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿಯ ಮೂಲಕ ಪ್ರಧಾನಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು,ಆಡಳಿತ ಪರವಾದ ಮತ್ತು ಸಕಾಲದ  ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ ಪ್ರಗತಿಯ ಮೂಲಕ ಇಪ್ಪತ್ತೆರಡನೇ ಸಂವಾದದ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿಯ ಮೊದಲ ಇಪ್ಪತ್ತೊಂದು ಸಭೆಗಳಲ್ಲಿ, ಒಟ್ಟು 8.94 ಲಕ್ಷ ಕೋಟಿ ರೂಪಾಯಿ ಹೂಡಿಕೆಯ 190 ಯೋಜನೆಗಳ ಅವಲೋಕನ ಮಾಡಲಾಗಿದೆ 17 ವಲಯಗಳ ಸಾರ್ವಜನಿಕ ಕುಂದುಕೊರತೆಯನ್ನೂ ಪರಿಹರಿಸಲಾಗಿದೆ.

ಇಂದು ನಡೆದ 22ನೇ ಸಭೆಯಲ್ಲಿ ಪ್ರಧಾನಮಂತ್ರಿಯವರು ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರ ನಿರ್ವಹಣೆಯ ಪ್ರಗತಿಯನ್ನು ಪ್ರಧಾನಮಂತ್ರಿಯವರು ಪರಿಶೀಲಿಸಿದರು.  ಪ್ರಧಾನಮಂತ್ರಿಯವರು ಹಣಕಾಸು ಸೇವೆಗಳ ಕಾರ್ಯದರ್ಶಿಯವರಿಗೆ ಜನ್ ಧನ್ ಖಾತೆದಾರರಿಗೆ ನೀಡಲಾಗುತ್ತಿರುವ ವಿಮಾ ನಿಯಮಾವಳಿಗಳ ಭಾಗವಾಗಿ   ಈ ಖಾತೆಗಳಿಗೆ ಸಂಪರ್ಕಿತವಾಗಿರುವ ರೂಪೆ ಕಾರ್ಡ್ ಬಳಕೆಯನ್ನು ಹೆಚ್ಚಿಸಲು ಮಾರ್ಗೋಪಾಯಗಳತ್ತ ಗಮನ ಹರಿಸುವಂತೆ ಸೂಚಿಸಿದರು.

ಪ್ರಧಾನಮಂತ್ರಿಯವರು ರೈಲ್ವೆ, ರಸ್ತೆ, ವಿದ್ಯುತ್, ಕಲ್ಲಿದ್ದಲು ಮತ್ತು ತೆಲಂಗಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಮಣಿಪುರ, ಮಿಜೋರಮ್, ಕೇರಳ, ತಮಿಳುನಾಡು, ಛತ್ತೀಸಗಢ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಿಸಿರುವ ಅನಿಲ ಕೊಳವೆ ಮಾರ್ಗ ವಲಯ ಒಂಬತ್ತು ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಭಾರತ ಮ್ಯಾನ್ಮಾರ್ ಸ್ನೇಹ ಸೇತುವೆಯ ಪರಾಮರ್ಶೆಯನ್ನೂ ನಡೆಸಲಾಯಿತು.  ಈ ಯೋಜನೆಗಳು ಒಟ್ಟಾರೆ 37 ಸಾವಿರ ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

ಪ್ರಧಾನಮಂತ್ರಿಯವರು ರಾಷ್ಟ್ರೀಯ ಪಾರಂಪರಿಕ ನಗರ ಅಭಿವೃದ್ಧಿ ಮತ್ತು ತ್ವರಿತಗೊಳಿಸುವ ಯೋಜನೆ (ಎಚ್.ಆರ್.ಐ.ಡಿ.ಎ.ವೈ) ಮತ್ತು ದಿವ್ಯಾಂಗದವರಿಗಾಗಿ ಸುಗಮ್ಯ ಭಾರತ್ ಅಭಿಯಾನ (ಅಕ್ಸೆಸಿಬಲ್ ಇಂಡಿಯಾ ಅಭಿಯಾನ)ದ ಪ್ರಗತಿ ಪರಿಶೀಲನೆಯನ್ನೂ ನಡೆಸಿದರು.

ಹಲವು ಕೇಂದ್ರ ಸರ್ಕಾರಿ ಇಲಾಖೆಗಳು ಸರ್ಕಾರದ ಇ –ಮಾರುಕಟ್ಟೆ ತಾಣ (ಜಿಇಎಂ)ಅನ್ನು ಪ್ರಸ್ತುತ ಬಳಸುತ್ತಿದ್ದಾಗ್ಯೂ, ಕೇವಲ 10 ರಾಜ್ಯಗಳು ಮಾತ್ರವೇ ಈವರೆಗೆ ಇದರ ಬಳಕೆಗೆ ಆಸಕ್ತಿ ತೋರಿವೆ ಎಂದು ಪ್ರಧಾನಿ ಹೇಳಿದರು. ಜಿಇಎಂ ಸ್ಥಳೀಯ ಮಟ್ಟದ ಉದ್ಯಮಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ ದಾಸ್ತಾನಿನ ವೇಗವನ್ನು ಹೆಚ್ಚಿಸುತ್ತದೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಹೇಳಿದರು. ಸೋರಿಕೆ ಮತ್ತು ವಿಳಂಬ ಕಡಿಮೆಗೊಳಿಸಲು, ಸಾಧ್ಯವಾದಷ್ಟು ಮಟ್ಟಿಗೆ ಎಷ್ಟು ಸಾಧ್ಯವೋ ಅಷ್ಟು ಇದರ ಬಳಕೆಗೆ ಅವಕಾಶ ನೀಡುವಂತೆ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಆಗ್ರಹಿಸಿದರು.

ಜಿಎಸ್ಟಿಗೆ ಸಂಬಂಧಿಸಿದಂತೆ ದೇಶಾದ್ಯಂತ ಇರುವ ವ್ಯಾಪಾರಸ್ಥರು ಸಕಾರಾತ್ಮಕವಾಗಿರುವಾಗ ಮತ್ತು ಈ ಹೊಸ ತೆರಿಗೆ ವ್ಯವಸ್ಥೆಯನ್ನು ಸ್ವೀಕರಿಸುತ್ತಿರುವಾಗ, ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಅವರ ಕೈಹಿಡಿಯುವುದು ಅಗತ್ಯವಾಗಿರುತ್ತದೆ ಎಂದು  ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತವನ್ನು ಬಳಕೆ ಮಾಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಧಾನಿ ಆಗ್ರಹಿಸಿದರು, ಇದರಿಂದ ಸಣ್ಣ ವ್ಯಾಪಾರಸ್ಥರು ಹೊಸ ಆಡಳಿತವನ್ನು ಅಳವಡಿಸಿಕೊಳ್ಳಲು ಮತ್ತು ಅದರ ಪ್ರವೇಶಕ್ಕೆ ಅವಕಾಶ ಆಗುತ್ತದೆ ಎಂದರು. ವಾಣಿಜ್ಯ ಅವಕಾಶಗಳ ಲಾಭ ಪಡೆಯಲು ಸಣ್ಣ ವ್ಯಾಪಾರಗಳನ್ನು ಕೂಡ ಜಿಎಸ್ಟಿ ಜಾಲದಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಧಾನಿ ಪುನರುಚ್ಚರಿಸಿದರು. ಶ್ರೀಸಾಮಾನ್ಯರು ಮತ್ತು ವ್ಯಾಪಾರಿಗಳು ಈ ಮಹತ್ವದ ನಿರ್ಧಾರದ ಲಾಭ ಪಡೆಯಬೇಕು ಎಂದು ಹೇಳಿದರು.  

ಡಿಜಿಟಲ್ ಪಾವತಿ ಉತ್ತೇಜಿಸಲು ಮತ್ತು ಕಡಿಮೆ ಹಣ ಸಮಾಜದತ್ತ ಶ್ರಮಿಸಲು ಸುಸ್ಥಿರ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಕರೆ ನೀಡಿದರು.