Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿಯ ಮೂಲಕ ಪ್ರಧಾನಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು,ಆಡಳಿತ ಪರವಾದ ಮತ್ತು ಸಕಾಲದ ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆಪ್ರಗತಿಯ ಮೂಲಕನಡೆದಇಪ್ಪತ್ತನೇಸಂವಾದದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಮಂತ್ರಿಯವರು ಸಭೆಯನ್ನು ಈಶಾನ್ಯ ರಾಜ್ಯಗಳಲ್ಲಿ ಪ್ರವಾಹದಿಂದ ಮತ್ತು ಇತರ ಪ್ರಕೃತಿ ವಿಕೋಪಗಳಿಂದ ತಲೆದೋರಿರುವ ಪರಿಸ್ಥಿತಿಯ ಪರಾಮರ್ಶೆಯೊಂದಿಗೆ ಆರಂಭಿಸಿದರು. ಕೇಂದ್ರದಿಂದ ರಾಜ್ಯಗಳಿಗೆ ಎಲ್ಲ ಅಗತ್ಯ ನೆರವಿನ ಭರವಸೆಯನ್ನು ಅವರು ನೀಡಿದರು.
ಎಲ್ಲ ವರ್ತಕರೂ ಜಿಎಸ್.ಟಿ. ಆಡಳಿತದಲ್ಲಿ ನೋಂದಣಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯ ಮಾಡುವಂತೆ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಧಾನಮಂತ್ರಿಯವರು ಮನವಿ ಮಾಡಿದರು ಮತ್ತು ಈ ಕಾರ್ಯವನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಪ್ರಧಾನಮಂತ್ರಿಯವರು, ಸಿಪಿಡಬ್ಲ್ಯುಡಿ ಮತ್ತು ಎಸ್ಟೇಟ್ ನಿರ್ದೇಶನಾಲಯಕ್ಕೆ ಸಂಬಂಧಿಸಿದ ಕುಂದುಕೊರತೆಗಳ ನಿರ್ವಹಣೆ ಮತ್ತು ಪರಿಹಾರ ಕುರಿತ ಪ್ರಗತಿಯನ್ನು ಪರಿಶೀಲಿಸಿದರು. ಸೂಕ್ಷ್ಮತೆಯೊಂದಿಗೆ ಸಕ್ರಿಯವಾಗಿ ಇದರ ಬಗ್ಗೆ ನಿಗಾ ವಹಿಸುವಂತೆ ಅವರು ನಗರಾಭಿವೃದ್ಧಿ ಸಚಿವಾಲಯಕ್ಕೆ ಅವರು ತಿಳಿಸಿದರು. ಎಲ್ಲ ಮಾರಾಟಗಾರರಿಗೂ ಸರ್ಕಾರದ ಇ ಮಾರುಕಟ್ಟೆ ತಾಣ (ಜಿಇಎಂ) ವೇದಿಕೆಯಡಿ ಬರುವಂತೆ ಪ್ರೋತ್ಸಾಹಿಸಲು ಸಿಪಿಡಬ್ಲ್ಯುಡಿಗೆ ಅವರು ತಿಳಿಸಿದರು.
ಪ್ರಧಾನಮಂತ್ರಿಯವರು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಮುಖ ಮತ್ತು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ರೈಲು, ರಸ್ತೆ ಮತ್ತು ಪೆಟ್ರೋಲಿಯಂ ವಲಯದ ಮೂಲಸೌಕರ್ಯ ಯೋಜನೆಗಳ ಪರಿಶೀಲನೆ ನಡೆಸಿದರು. ಇಂದು ಪರಾಮರ್ಶೆ ನಡೆಸಲಾದ ಯೋಜನೆಗಳಲ್ಲಿ ಚೆನ್ನೈ ಬೀಚ್ – ಕೊರಕ್ಕುಪೇಟ್ ಮೂರನೇ ಮಾರ್ಗ ಮತ್ತು ಚೆನ್ನೈ ಬೀಚ್ – ಅತಿಪ್ಪಟ್ಟು ನಾಲ್ಕನೇ ಮಾರ್ಗ; ಹೌರಾ –ಅಮ್ತಾ-ಚಂಪದಂಗ ಹೊಸ ಬ್ರಾಡ್ ಗೇಜ್ ಮಾರ್ಗ; ಮತ್ತು ನಾಲ್ಕು ಪಥದ ವಾರಾಣಸಿ ಬೈಪಾಸ್; ಮುಜಾಫರ್ ನಗರ –ಹರಿದ್ವಾರ್ ವಲಯದ ಎನ್.ಎಚ್. 58ರ ಚತುಷ್ಪಥ ಸೇರಿದ್ದವು. ಇಂದು ಪರಾಮರ್ಶಿಸಲಾದ ಹಲವು ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿರುವುದಾಗಿದ್ದವು. ಒಂದು ಪ್ರಕರಣದಲ್ಲಂತೂ ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಪ್ರಧಾನಿಯವರು ವೆಚ್ಚ ಹೆಚ್ಚಳಕ್ಕೆ ಕಾರಣವಾಗುವ ವಿಳಂಬವನ್ನು ತಪ್ಪಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು. ಅಂಥ ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಪ್ರತಿಪಾದಿಸಿದರು.
ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿ ವಸತಿ ಯೋಜನೆ (ನಗರ)ದ ಪ್ರಗತಿ ಪರಿಶೀಲನೆ ನಡೆಸಿದರು. ಸಂಬಂಧಿತ ಇಲಾಖೆಗಳಿಗೆ ಆದಷ್ಟು ಶೀಘ್ರ ನೂತನ ಕಟ್ಟಡ ನಿರ್ಮಾಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
                                                                           ***
AKT/NT