ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ಯಾಲೆಸ್ಟೈನ್ ಅಧ್ಯಕ್ಷ ಶ್ರೀ ಮಹಮೂದ್ ಅಬ್ಬಾಸ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.
ಪ್ರಧಾನಿಯವರು ಮುಂಬರುವ ಪವಿತ್ರ ರಂಜಾನ್ ಮಾಸಕ್ಕಾಗಿ ಅಧ್ಯಕ್ಷರು ಮತ್ತು ಪ್ಯಾಲೆಸ್ಟೈನ್ ಜನತೆಗೆ ಶುಭಾಶಯಗಳನ್ನು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ತಮ್ಮ ದೇಶಗಳಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಸ್ಪರ ತಿಳಿಸಿದರು.
ತಮ್ಮ ಜನರನ್ನು ವೈರಸ್‌ನಿಂದ ರಕ್ಷಿಸಲು ಪ್ಯಾಲೆಸ್ಟೈನ್ ಅಧಿಕಾರಿಗಳು ಮಾಡುತ್ತಿರುವ ಪ್ರಯತ್ನಗಳನ್ನು ಪ್ರಧಾನಿಯವರು ಶ್ಲಾಘಿಸಿದರು ಮತ್ತು ಈ ಪ್ರಯತ್ನಗಳಿಗೆ ಭಾರತದಿಂದ ಸಾಧ್ಯವಿರುವ ಎಲ್ಲ ಬೆಂಬಲದ ಭರವಸೆ ನೀಡಿದರು.
ಈ ಸವಾಲಿನ ಸಮಯದಲ್ಲಿ ಸಹಕಾರದ ಮಾರ್ಗಗಳನ್ನು ಹುಡುಕಲು ಸೂಕ್ತ ಮಟ್ಟದಲ್ಲಿ ಸಂಪರ್ಕದಲ್ಲಿರಲು ಉಭಯ ನಾಯಕರು ಒಪ್ಪಿದರು.
Discussed the COVID-19 situation with Palestinian President H.E. Mahmoud Abbas. India will provide all possible support to the friendly Palestinian people in their fight against the pandemic. https://t.co/y9ZqCoGOW1
— Narendra Modi (@narendramodi) April 14, 2020