Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಿಸ್ ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರಾನ್ ಜೊತೆ ಮಾತುಕತೆ ನಡೆಸಿದ ಪ್ರಧಾನಿ

ಪ್ಯಾರಿಸ್ ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರಾನ್ ಜೊತೆ ಮಾತುಕತೆ ನಡೆಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರಾನ್ ಅವರನ್ನು ಪ್ಯಾರಿಸ್ ನಲ್ಲಿ ಭೇಟಿ ಮಾಡಿದರು.

ಸಭೆಯ ಬಳಿಕ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆತ್ಮೀಯ ಸ್ವಾಗತಕ್ಕೆ ಅಧ್ಯಕ್ಷ ಮ್ಯಾಕ್ರಾನ್ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಚುನಾವಣೆಯ ಗೆಲುವಿಗೆ ಅವರಿಗೆ ಅಭಿನಂದನೆ ಸಲ್ಲಿಸಿದರು.

ಹಲವು ವರ್ಷಗಳಿಂದ ಭಾರತ – ಫ್ರಾನ್ಸ್ ಬಾಂಧವ್ಯದ ಮೂಲಕ ಯಶಸ್ವಿಯಾಗಿ ಮಾನವತೆ ಮತ್ತು ಮಾನವೀಯ ಮೌಲ್ಯಗಳ ಸೇವೆ ಮಾಡುತ್ತಿರುವುದರ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು. ಬಾಂಧವ್ಯ ಇನ್ನೂ ವೇಗವಾಗಿ ಮುಂದುವರಿಯುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ, ಭಾರತ- ಫ್ರಾನ್ಸ್ ಜಂಟಿ ಪ್ರಯತ್ನವಾದ ಅಂತಾರಾಷ್ಟ್ರೀಯ ಸೌರ ಸಹಯೋಗವನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.

ಪ್ಯಾರಿಸ್ ನ ಹವಾಮಾನ ಒಪ್ಪಂದ ಇಡೀ ವಿಶ್ವದ ವಿನಿಮಯಿತ ಪರಂಪರೆಯಾಗಿದ್ದು, ಮನುಕುಲದ ಮುಂದಿನ ಪೀಳಿಗೆಗೆ ಭರವಸೆಯ ಕೊಡುಗೆಯನ್ನು ಈ ಪೀಳಿಗೆ ನೀಡುವುದಾಗಿದೆ ಎಂದರು. ಭೂ ತಾಯಿಯನ್ನು ರಕ್ಷಿಸುವುದು ನಮ್ಮೆಲ್ಲರ ಸಂಘಟಿತ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಪ್ಯಾರಿಸ್ ತಮ್ಮ ರಾಜಕೀಯ ಪಯಣದ ಮಹತ್ವದ ಭಾಗ ಎಂದು ಬಣ್ಣಿಸಿದ ಪ್ರಧಾನಿ, ಈ ಒಪ್ಪಂದಕ್ಕಾಗಿ ಭಾರತ ಮತ್ತ ಫ್ರಾನ್ಸ್ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದವು ಎಂದರು.

ಪರಿಸರ ಸಂರಕ್ಷಣೆ ಭಾರತೀಯರಿಗೆ ವಿಶ್ವಾಸದ ಸಂಗತಿಯಾಗಿದೆ ಮತ್ತು ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.

ಭಾರತವು ಒಪ್ಪಂದಕ್ಕೆ ಬದ್ಧವಾಗಿದೆ ಎಂದ ಅವರು, ಭಾರತವು ಅದರಾಚೆಯೂ, ಭವಿಷ್ಯದ ಪೀಳಿಗೆಗಾಗಿ ಉಡುಗೊರೆಯಾಗಿ ಉಳಿಸಲು ಇತರರೊಂದಿಗೆ ಒಗ್ಗೂಡಿ ನಡೆಯಲು ಮತ್ತು ಶ್ರಮಿಸಲು ಬದ್ಧ ಎಂದರು.

ಇಬ್ಬರೂ ನಾಯಕರು, ಭಯೋತ್ಪಾದನೆ ಮತ್ತು ಮೂಲಭೂತವಾದವನ್ನು ನಿಗ್ರಹಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದ್ದಾಗಿ ಪ್ರಧಾನಿ ತಿಳಿಸಿದರು. ಭಾರತವು ಪ್ರಗತಿಪರ ಐರೋಪ್ಯ ಒಕ್ಕೂಟದ ಪರವಾಗಿರುವುದಾಗಿ ಪ್ರಧಾನಿ ತಿಳಿಸಿದರು.

*****

AKT/NT