Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಿಸ್ ಒಲಿಂಪಿಕ್ಸ್: ಭಾರತೀಯ ಅಥ್ಲೀಟ್ ಗಳಿಗೆ ಶುಭ ಕೋರಿದ ಪ್ರಧಾನಮಂತ್ರಿ


ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ತಂಡದ ಎಲ್ಲಾ ಅಥ್ಲೀಟ್ ಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
  
ಪ್ರತಿಯೊಬ್ಬ ಕ್ರೀಡಾಪಟುವನ್ನು ಭಾರತದ ಹೆಮ್ಮೆ ಎಂದು ಸಂಬೊಧಿಸಿದ ಶ್ರೀ ಮೋದಿಯವರು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟದ 33ನೇ ಆವೃತ್ತಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲೆಂದು ಅವರಿಗೆ ಶುಭಕೋರಿ ಹಾರೈಸಿದರು.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

“ಪ್ಯಾರಿಸ್ #Olympics ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ, ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ನನ್ನ ಶುಭಾಶಯಗಳು. ಪ್ರತಿಯೊಬ್ಬ ಕ್ರೀಡಾಪಟುವೂ ಭಾರತದ ಹೆಮ್ಮೆ. ನೀವೆಲ್ಲರೂ ನಿಮ್ಮ ಅಸಾಧಾರಣ ಪ್ರದರ್ಶನಗಳಿಂದ ನಮಗೆ ಸ್ಫೂರ್ತಿ ನೀಡುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿ. #Paris2024” ಎಂದು ಶುಭ ಕೋರಿ ಹಾರೈಸಿದ್ದಾರೆ.

 

 

*****