Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ಯಾರಾಲಿಂಪಿಕ್ ಕ್ರೀಡಾಕೂಟ: ಭಾರತೀಯ ಕ್ರೀಡಾಪಟುಗಳ ಉತ್ತಮ ಸಾಧನೆಗೆ ಪ್ರಧಾನ ಮಂತ್ರಿ ಶ್ಲಾಘನೆ


ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳ ಅತ್ಯುತ್ತಮ ಸಾಧನೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ ಗೇಮ್ಸ್ 2024 ರಲ್ಲಿ 29 ಪದಕಗಳನ್ನು ಗಳಿಸಿದ ರಾಷ್ಟ್ರದ ಪ್ಯಾರಾ-ಅಥ್ಲೀಟ್‌ಗಳ ಅಚಲವಾದ ಸಮರ್ಪಣೆ ಮತ್ತು ಅದಮ್ಯ ಮನೋಭಾವವನ್ನು ಅವರು ಕೊಂಡಾಡಿದ್ದಾರೆ. 

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:

“ಪ್ಯಾರಾಲಿಂಪಿಕ್ಸ್ 2024 ವಿಶೇಷ ಮತ್ತು ಐತಿಹಾಸಿಕವಾಗಿದೆ.

ನಮ್ಮ ಅದ್ವಿತೀಯ ಪ್ಯಾರಾ-ಅಥ್ಲೀಟ್‌ಗಳು 29 ಪದಕಗಳನ್ನು ಮನೆಗೆ ತಂದಿರುವುದು ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡುವಂತೆ ಮಾಡಿದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಚೊಚ್ಚಲ ಬಾರಿಗೆ ಪ್ರದರ್ಶನ ನೀಡಿದ ನಂತರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ ಎಂದಿದ್ದಾರೆ. 

ಈ ಸಾಧನೆಗೆ ನಮ್ಮ ಕ್ರೀಡಾಪಟುಗಳ ಅಚಲವಾದ ಸಮರ್ಪಣೆ ಮತ್ತು ಅದಮ್ಯ ಮನೋಭಾವವೇ ಕಾರಣವಾಗಿದೆ. ಅವರ ಕ್ರೀಡಾ ಪ್ರದರ್ಶನಗಳು ನಮಗೆ ನೆನಪಿಟ್ಟುಕೊಳ್ಳಲು ಹಲವು ಕ್ಷಣಗಳನ್ನು ನೀಡಿವೆ ಮುಂದಿನ ದಿನಗಳಲ್ಲಿ ಹಲವು ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ”ಎಂದು ಬರೆದುಕೊಂಡಿದ್ದಾರೆ.

#Cheer4Bharat”

 

 

*****