Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೋಷಣ್ ಪಖ್ವಾಡಾಗೆ ಯಶಸ್ಸು  ಹಾರೈಸಿದ ಪ್ರಧಾನ ಮಂತ್ರಿ


ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ಪೋಷಣ್ ಪಖ್ವಾಡಾದಲ್ಲಿ ಶ್ರೀ ಅನ್ನ (ಸಿರಿಧಾನ್ಯಗಳು) ಬಗ್ಗೆ ಗಮನ ಹರಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರಿಗೆ ಉತ್ತರವಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ:

“ಪೋಷಣ್ ಪಖ್ವಾಡಾ ಸರಿಯಾದ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಪೌಷ್ಟಿಕತೆಯ ಅಪಾಯವನ್ನು ತೊಡೆದು ಹಾಕಲು ಸಹಾಯ ಮಾಡಲಿ. ಆರೋಗ್ಯಕರ ಜೀವನವನ್ನು ವಿಸ್ತರಿಸುವಲ್ಲಿ ದೊಡ್ಡ ಪಾತ್ರ ವಹಿಸಬಲ್ಲ ಶ್ರೀ ಅನ್ನದ (ಸಿರಿಧಾನ್ಯಗಳು) ಮೇಲೆ ಗಮನ ಹರಿಸುವುದನ್ನು ನೋಡಲು ಸಂತೋಷವಾಗುತ್ತಿದೆ.” ಎಂದಿದ್ದಾರೆ.

 

***