ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಪೋರ್ಚುಗಲ್, ಯು.ಎಸ್.ಎ. ಮತ್ತು ನೆದರ್ಲ್ಯಾಂಡ್ಸ್ ಪ್ರವಾಸಕ್ಕಾಗಿ ನಾಳೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಭೇಟಿಯು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವರ್ಧನೆಯ ಗುರಿ ಹೊಂದಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
“ನಾನು 2017ರ ಜೂನ್ 24ರಂದು ಪೋರ್ಚುಗಲ್ ಗೆ ಕಾರ್ಯನಿಮಿತ್ತ ಭೇಟಿ ನೀಡುತ್ತಿದ್ದೇನೆ. ಘನತೆವೆತ್ತ ಪ್ರಧಾನಮಂತ್ರಿ ಆಂಟೋನಿಯೋ ಕೋಸ್ಟಾ ಅವರು 2017 ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಬಳಿಕ ನಮ್ಮ ಆಪ್ತ ಐತಿಹಾಸಿಕ ಮತ್ತು ಸ್ನೇಹಪರ ಬಾಂಧವ್ಯಕ್ಕೆ ವೇಗ ದೊರೆತಿದೆ.
ನಾನು ಪ್ರಧಾನಿ ಕೋಸ್ಟಾ ಅವರೊಂದಿಗಿನ ಭೇಟಿಗಾಗಿ ಎದಿರು ನೋಡುತ್ತಿದ್ದೇನೆ. ನಮ್ಮ ಇತ್ತೀಚಿನ ಚರ್ಚೆಯ ಮೇಲೆ ಬಾಂಧವ್ಯ ನಿರ್ಮಾಣದ ಜೊತೆಗೆ, ನಾವು ಹಲವು ಜಂಟಿ ಉಪಕ್ರಮಗಳ ಮತ್ತು ನಿರ್ಧಾರಗಳ ಪ್ರಗತಿ ಪರಿಶೀಲಿಸಲಿದ್ದೇವೆ. ನಾವು ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಮತ್ತಷ್ಟು ಹೆಚ್ಚಿಸಲು ಮಾರ್ಗೋಪಾಯಗಳ ಬಗ್ಗೆ ಅದರಲ್ಲೂ ಆರ್ಥಿಕ ಸಹಕಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಸಹಯೋಗ ಮತ್ತು ಜನರೊಂದಿಗಿನ ಬಾಂಧವ್ಯ ಕುರಿತು ಚರ್ಚಿಸಲಿದ್ದೇವೆ. ಭಯೋತ್ಪಾದನೆ ನಿಗ್ರಹ ಸಹಕಾರ ಹೆಚ್ಚಿಸುವ ಮಾರ್ಗಗಳ ಬಗ್ಗೆ ಹಾಗೂ ಇತರ ಪರಸ್ಪರ ಹಿತದ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆಯೂ ನಾವು ಸಮಾಲೋಚಿಸಲಿದ್ದೇವೆ. ನಾನು ಗಣನೀಯ ಸಾಮರ್ಥ್ಯಕ್ಕಾಗಿ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಬಾಂಧವ್ಯವನ್ನು ಆಳಗೊಳಿಸುವತ್ತ ನೋಡುತ್ತಿದ್ದೇನೆ.
ನನ್ನ ಭೇಟಿಯ ಕಾಲದಲ್ಲಿ ಪೋರ್ಚುಗಲ್ ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲೂ ನಾನು ಕಾತರನಾಗಿದ್ದೇನೆ”, ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಧಾನಮಂತ್ರಿಯವರು ಜೂನ್ 24-26ರವರೆಗೆ ವಾಷಿಂಗ್ಟನ್ ಡಿ.ಸಿ.ಗೆ ಭೇಟಿ ನೀಡಲಿದ್ದಾರೆ
“ನಾನು ಅಧ್ಯಕ್ಷ ಡೋನಾಲ್ಡ್ ಜೆ ಟ್ರಂಪ್ ಅವರ ಆಹ್ವಾನದ ಮೇರೆಗೆ ಜೂನ್ 24ರಿಂದ 26ರವರೆಗೆ ವಾಷಿಂಗ್ಟನ್ ಡಿ.ಸಿ.ಗೆ ಭೇಟಿ ನೀಡುತ್ತಿದ್ದೇನೆ ಮತ್ತು ಇದಕ್ಕೆ ಮುನ್ನ ನಾನು ಅವರೊಂದಿಗೆ
ದೂರವಾಣಿಯಲ್ಲಿ ಮಾತನಾಡಿದ್ದೇನೆ. ನಮ್ಮ ಮಾತುಕತೆ ನಮ್ಮ ಜನರಿಗೆ ಪರಸ್ಪರ ಉಪಯುಕ್ತವಾಗುವಂಥ ಸರ್ವಾಂಗೀಣ ಫಲಪ್ರದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವ ಸಮಾನ ಉದ್ದೇಶದ ವಿಚಾರಗಳಿಗೆ ಸಂಬಂದಿಸಿದ್ದವು. ನಾನು ಭಾರತ ಮತ್ತು ಅಮೆರಿಕಾ ನಡುವಿನ ಪಾಲುದಾರಿಕೆಯನ್ನು ಹೆಚ್ಚು ಸಮಗ್ರೀಕರಿಸುವ ಮತ್ತು ಚೈತನ್ಯದಾಯಕ ಮಾಡುವ ಮತ್ತು ಆಳಗೊಳಿಸಲು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾದ ಈ ಅವಕಾಶಕ್ಕಾಗಿ ಎದಿರು ನೋಡುತ್ತಿದ್ದೇನೆ.
ಅಮೆರಿಕದೊಂದಿಗಿನ ಭಾರತದ ಪಾಲುದಾರಿಕೆಯು ಬಹು ಹಂತಗಳ ಹಾಗೂ ವೈವಿಧ್ಯತೆಯಿಂದ ಕೂಡಿದ್ದಾಗಿದ್ದು, ಇದಕ್ಕೆ ಕೇವಲ ಸರ್ಕಾರಗಳಷ್ಟೇ ಅಲ್ಲ, ಎರಡೂ ಕಡೆಗಳ ಎಲ್ಲ ಬಾಧ್ಯಸ್ಥರೂ ಇದಕ್ಕೆ ಬೆಂಬಲ ನೀಡಿದ್ದಾರೆ. ನಾನು ಟ್ರಂಪ್ ಅವರ ಅಧ್ಯಕ್ಷತೆಯ ಅಮೆರಿಕದ ನೂತನ ಆಡಳಿತದೊಂದಿಗೆ ಮುನ್ನೋಟದ ದೃಷ್ಟಿಕೋನವುಳ್ಳ ಪಾಲುದಾರಿಕೆಯನ್ನು ನಿರ್ಮಿಸಲು ಎದಿರು ನೋಡುತ್ತಿದ್ದೇನೆ.
ಅಧ್ಯಕ್ಷ ಟ್ರಂಪ್ ಹಾಗೂ ಅವರ ಸಂಪುಟ ಸಹೋದ್ಯೋಗಿಗಳೊಂದಿಗಿನ ಅಧಿಕೃತ ಸಭೆಗಳ ಹೊರತಾಗಿ, ನಾನು ಅಮೆರಿಕದ ಕೆಲವು ಪ್ರಮುಖ ಸಿ.ಇ.ಓ.ಗಳನ್ನು ಭೇಟಿ ಮಾಡುತ್ತಿದ್ದೇನೆ. ಈ ಹಿಂದಿನಂತೆ, ನಾನುಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ಎದಿರು ನೋಡುತ್ತಿದ್ದೇನೆ.”
2017ರ ಜೂನ್ 27ರಂದು ಪ್ರಧಾನಮಂತ್ರಿಯವರು ನೆದರ್ಲ್ಯಾಂಡ್ಸ್ ಗೂ ಭೇಟಿ ನೀಡುತ್ತಿದ್ದಾರೆ.
“ನಾನು ನೆದರ್ಲ್ಯಾಂಡ್ಸ್ ಗೆ 2017ರ ಜೂನ್ 27ರಂದು ಭೇಟಿ ನೀಡುತ್ತಿದ್ದೇನೆ. ಈ ವರ್ಷ ನಾವು ಭಾರತ-ಡಚ್ ರಾಜತಾಂತ್ರಿಕ ಸಂಬಂಧದ 70ನೇ ವರ್ಷವನ್ನು ಆಚರಿಸುತ್ತಿದ್ದೇವೆ. ಈ ಭೇಟಿಯ ವೇಳೆ, ನಾನು ಡಚ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ. ಮಾರ್ಕ್ ರುಟ್ಟೆ ಅವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದೇನೆ. ನಾನು ನೆದರ್ಲ್ಯಾಂಡ್ಸ್ ನ ದೊರೆ ವಿಲಿಯಮ್ –ಅಲೆಕ್ಸಾಂಡರ್ ಮತ್ತು ರಾಣಿ ಮ್ಯಾಕ್ಸಿಮಾ ಅವರನ್ನು ಭೇಟಿ ಮಾಡಲಿದ್ದೇನೆ.
ನಾನು ಪ್ರಧಾನಮಂತ್ರಿ ರುಟ್ಟೆ ಅವರನ್ನು ಭೇಟಿ ಮಾಡಲು ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಪರಾಮರ್ಶಿಸಲು ಕಾತರದಿಂದ ಇದ್ದೇನೆ. ನಾನು ಪ್ರಧಾನಿ ರುಟ್ಟೆ ಅವರೊಂದಿಗೆ ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮತ್ತು ಮಹತ್ವದ ಜಾಗತಿಕ ವಿಚಾರಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದೇನೆ.
ಆರ್ಥಿಕ ಸಂಪರ್ಕ ವೇದಿಕೆಯು ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ಪ್ರಮುಖವಾಗಿದೆ. ನೆದರ್ಲ್ಯಾಂಡ್ಸ್ ಐರೋಪ್ಯ ಒಕ್ಕೂಟದಲ್ಲಿ 6ನೇ ಅತಿದೊಡ್ಡ ವಾಣಿಜ್ಯ ಪಾಲುದಾರ ಹಾಗೂ ಜಾಗತಿಕವಾಗಿ ಐದನೇ ಅತಿ ದೊಡ್ಡ ಹೂಡಿಕೆ ಪಾಲುದಾರ ರಾಷ್ಟ್ರವಾಗಿದೆ. ಜಲ ಮತ್ತು ತ್ಯಾಜ್ಯ ನಿರ್ವಹಣೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ನವೀಕರಿಸಬಹುದಾದ ಇಂಧನ ಮತ್ತು ಬಂದರು ಮತ್ತು ಶಿಪ್ಪಿಂಗ್ ಕ್ಷೇತ್ರದಲ್ಲಿನ ಡಚ್ ಪರಿಣತಿ ನಮ್ಮ ಅಭಿವೃದ್ಧಿಯ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ. ಭಾರತ- ಡಚ್ ಆರ್ಥಿಕ ಕಾರ್ಯಕ್ರಮಗಳು ಪರಸ್ಪರ ಗೆಲುವಿನ ಪ್ರಮಾಣದ್ದಾಗಿವೆ. ನಾನು ಪ್ರಧಾನಿ ರುಟ್ಟೋ ಅವರೊಂದಿಗೆ ಸಹಕಾರವನ್ನು ಮತ್ತಷ್ಟು ಬಳಸಿಕೊಳ್ಳಲು ಎರಡೂ ಕಡೆಗಳಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ. ನಾನು ಪ್ರಮುಖ ಡಚ್ ಕಂಪನಿಗಳ ಸಿ.ಇ.ಓ.ಗಳನ್ನೂ ಭೇಟಿ ಮಾಡುತ್ತಿದ್ದೇನೆ ಮತ್ತು ಭಾರತದ ಅಭಿವೃದ್ಧಿಯ ಗಾಥೆಯಲ್ಲಿ ಕೈಜೋಡಿಸುವಂತೆ ಉತ್ತೇಜಿಸಲಿದ್ದೇನೆ.
ಯುರೋಪ್ ನಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯ ಭಾರತೀಯ ಸಮುದಾಯ ನೆದರ್ಲ್ಯಾಂಡ್ಸ್ ನಲ್ಲಿದ್ದು ಎರಡೂ ದೇಶಗಳ ನಡುವೆ ಬಲವಾದ ಜನರೊಂದಿಗಿನ ಬಾಂಧವ್ಯವಿದೆ. ನಾನು ನೆದರ್ಲ್ಯಾಂಡ್ಸ್ ನಲ್ಲಿರುವ ಭಾರತೀಯ ಸಮುದಾಯದೊಂದಿಗಿನ ಕಾರ್ಯಕ್ರಮಕ್ಕೆ ಎದಿರು ನೋಡುತ್ತಿದ್ದೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
*****
AK/HS
Will hold talks with Mr. @antoniocostapm & interact with the Indian community during my Portugal visit tomorrow. https://t.co/5CtVYKPE5K
— Narendra Modi (@narendramodi) June 23, 2017
My USA visit is aimed at deepening ties between our nations. Strong India-USA ties benefit our nations & the world. https://t.co/UaF6lbo1ga
— Narendra Modi (@narendramodi) June 23, 2017
My visit to Netherlands seeks to boost bilateral ties & deepen economic cooperation. https://t.co/93n4vjDRxb
— Narendra Modi (@narendramodi) June 23, 2017