ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಪೋರ್ಚುಗಲ್ ಗೆ ಐತಿಹಾಸಿಕ ಭೇಟಿ ನೀಡಿದ್ದ ಸಂದರ್ಭದಲ್ಲಿ, ಲಿಸ್ಬನ್ ನಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ಅವರ ಭಾಷಣದ ವೇಳೆ, ಶ್ರೀ. ಮೋದಿ ಭಾರತ-ಪೋರ್ಚುಗಲ್ ಬಾಂಧವ್ಯದ ಹಲವು ಅಂಶಗಳನ್ನು ಒತ್ತಿ ಹೇಳಿದರು.
ಶ್ರೀ ಮೋದಿ ಅವರು ಪೋರ್ಚುಗಲ್ ನ ಮಾಜಿ ಪ್ರಧಾನಮಂತ್ರಿ ಆಂಟೋನಿಯೋ ಗುಟೇರಸ್ ಅವರೊಂದಿಗಿನ ತಮ್ಮ ಭೇಟಿಯನ್ನು ಪ್ರಸ್ತಾಪಿಸಿದರು. ಪ್ರಧಾನಿಯವರು ಯೋಗ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಪ್ರಸ್ತಾಪಿಸಿ, ಯೋಗದ ಸಂದೇಶವನ್ನು ಸಾರಲು ಪೋರ್ಚುಗಲ್ ಕೈಗೊಂಡಿರುವ ಕ್ರಮಗಳನ್ನು ಪ್ರಶಂಸಿಸಿದರು.
ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಅವರು ತಿಳಿಸಿದರು. ಇಸ್ರೋ ವಿಜ್ಞಾನಿಗಳ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ವಿಜ್ಞಾನಿಗಳು ಶ್ರೇಷ್ಠ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ 30 ನ್ಯಾನೋ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ”ಎಂದರು.
ಇದಕ್ಕೂ ಮುನ್ನ ಪ್ರಧಾನಿ ಕಾಳ್ಗಿಚ್ಚಿನಿಂದಾಗಿ ಪೋರ್ಚುಗಲ್ ನಲ್ಲಿ ಸಂಭವಿಸಿದ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದರು.
ಪೋರ್ಜುಗೀಸ್ ಪ್ರಧಾನಮಂತ್ರಿ ಆಂಟೋನಿಯೋ ಕೋಸ್ಟಾ ಅವರಿಗೆ, ಪ್ರಧಾನಮಂತ್ರಿ ಮೋದಿ ಅವರು, ಸಾಗರೋತ್ತರ ಭಾರತೀಯ ಪೌರತ್ವದ ಕಾರ್ಡ್ ಸಮರ್ಪಿಸಿದರು.
*****
AK
At the Comunidade Hindu de Portugal, a temple in Lisbon. pic.twitter.com/N6bxiEsb4b
— Narendra Modi (@narendramodi) June 24, 2017
Had a delightful interaction with the Indian community of Portugal. https://t.co/jZdDkC6CL7
— Narendra Modi (@narendramodi) June 24, 2017