Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೋರ್ಚಗಲ್ ಪ್ರಧಾನಿ ಭಾರತಕ್ಕೆ ಆಗಮಿಸಿದಾಗ(ಜನವರಿ 7,2017) ಪ್ರಧಾನಿ  ನರೇಂದ್ರ ಮೋದಿ ಅವರು ನೀಡಿದ ಪತ್ರಿಕಾ ಪ್ರಕಟಣೆ

ಪೋರ್ಚಗಲ್ ಪ್ರಧಾನಿ ಭಾರತಕ್ಕೆ ಆಗಮಿಸಿದಾಗ(ಜನವರಿ 7,2017) ಪ್ರಧಾನಿ  ನರೇಂದ್ರ ಮೋದಿ ಅವರು ನೀಡಿದ ಪತ್ರಿಕಾ ಪ್ರಕಟಣೆ

ಪೋರ್ಚಗಲ್ ಪ್ರಧಾನಿ ಭಾರತಕ್ಕೆ ಆಗಮಿಸಿದಾಗ(ಜನವರಿ 7,2017) ಪ್ರಧಾನಿ  ನರೇಂದ್ರ ಮೋದಿ ಅವರು ನೀಡಿದ ಪತ್ರಿಕಾ ಪ್ರಕಟಣೆ


ಗೌರವಾನ್ವಿತ  ಪ್ರಧಾನಿ ಅಂಟೋನಿಯಾ ಕೋಸ್ಟಾ ಅವರೇ

 

ಗಣ್ಯರಾದ ಪ್ರತಿನಿಧಿಗಳೇ,

 

ಮಾಧ್ಯಮ ಮಿತ್ರರೇ

ಸ್ನೇಹಿತರೇ

 

ಎಲ್ಲರಿಗೂ ಶುಭ ಸಂಜೆ

ಗೌರವಾನ್ವಿತರೇ,

 

ನಿಮ್ಮನ್ನು ಮತ್ತು ನಿಮ್ಮ ಪ್ರತಿನಿಧಿಗಳ ತಂಡವನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಅಪಾರ ಸಂತಸವಾಗಿದೆ. ಇದು ಭಾರತಕ್ಕೆ ನಿನ್ನ ಮೊದಲ ಭೇಟಿ ಇರಬಹುದು,ಆದರೆ, ನೀವು ಭಾರತಕ್ಕೆ ಹೊಸಬರಲ್ಲ ಇಲ್ಲವೇ ಭಾರತವು ನಿಮಗೆ ಅಪರಿಚಿತವಲ್ಲ. ಆದ್ದರಿಂದ ಈ ತಂಪಾದ ಸಂಜೆಯಲ್ಲಿ ನಿಮ್ಮನ್ನು ಸ್ವಾಗತಿಸುವ ಜೊತೆಗೆ, ಇದನ್ನೂ ಹೇಳುತ್ತೇನೆ-ನಿಮಗೆ ಪುನಃ ಸ್ವಾಗತ! 

 

ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಪ್ರವಾಸಿ ಭಾರತೀಯ ದಿವಸ, ಭಾರತೀಯ ಡಯಾಸ್ಪೋರಾದ ಸಂಭ್ರಮಾಚರಣೆಗೆ ನೀವು ಮುಖ್ಯ ಅತಿಥಿಯಾಗಿ ಆಗಮಿಸಿರುವುದಕ್ಕೆ ನಾವು ನಿಮಗೆ ಆಭಾರಿಯಾಗಿದ್ದೇವೆ. ಭಾರತದಲ್ಲಿ ಕೌಟುಂಬಿಕ ಮೂಲವನ್ನು ಹೊಂದಿರುವ ನೀವು ಮುಂಚೂಣಿಯ ನಾಯಕರಾಗಿ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದು, ಅದನ್ನು ಸಂಭ್ರಮಿಸುವ ಅವಕಾಶ ನಮಗೆ ಸಿಕ್ಕಿರುವುದು ಸೌಭಾಗ್ಯವೇ ಸರಿ. ನಿಮ್ಮ ನಾಯಕತ್ವದಲ್ಲಿ ಪೋರ್ಚಗಲ್ ಹಲವು ಯಶಸ್ಸುಗಳನ್ನು ಸಾಧಿಸಿದ್ದು,ಅದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ನಾಯಕತ್ವದಲ್ಲಿ ಪೋರ್ಚಗಲ್ ನ್ನು ಆರ್ಥಿಕತೆ ಸುಧಾರಿಸಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.

 

ಸ್ನೇಹಿತರೇ,

 

ಹಂಚಿಕೊಂಡ ಚಾರಿತ್ರಿಕ ಸಂಪರ್ಕದ ಬುನಾದಿಯ ಮೇಲೆ ಭಾರತ ಮತ್ತು ಪೋರ್ಚಗಲ್ ಆಧುನಿಕ ದ್ವಿಪಕ್ಷೀಯ ಸಹಭಾಗಿತ್ವವನ್ನು ನಿರ್ಮಿಸಿವೆ. ವಿಶ್ವ ಸಂಸ್ಥೆ ಸೇರಿದಂತೆ ಜಾಗತಿಕ ವಿಷಯಗಳಲ್ಲಿನ ನಮ್ಮಗಳ ಸೇರುವಿಕೆಯು ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ದೃಢಗೊಳಿಸಿದೆ. ಪ್ರಧಾನಿ ಕೋಸ್ಟಾ ಅವರ ಜೊತೆ ಇಂದು ನಡೆಸಿದ ವಿಸ್ತೃತ ಮಾತುಕತೆಯಲ್ಲಿ ನಾನಾ ಕ್ಷೇತ್ರಗಳಲ್ಲಿ ಭಾರತ-ಪೋರ್ಚಗಲ್ ನಡುವಿನ ಸಂಬಂಧವನ್ನು ನಾವು ಪುನರ್ವಿಮರ್ಶಿಸಿದ್ದೇವೆ. ನಮ್ಮ ಸಹಭಾಗಿತ್ವದಲ್ಲಿನ ಆರ್ಥಿಕ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಕ್ರಿಯೆಯನ್ನು ಆಧರಿಸಿದ ಮಾರ್ಗವನ್ನು ಅನುಸರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಇದು ಸಹಿ ಮಾಡಲ್ಪಟ್ಟ ಒಪ್ಪಂದಗಳು ಅದನ್ನು ಮಾಡುವಲ್ಲಿ ನಮ್ಮ ಹಂಚಿಕೊಂಡ ಸಂಕಲ್ಪದ ಸೂಚಕಗಳಾಗಿವೆ.     

 

ಸ್ನೇಹಿತರೇ,

 

ವ್ಯಾಪಾರ, ಹೂಡಿಕೆ ಮತ್ತು ವ್ಯವಹಾರ ಸಹಭಾಗಿತ್ವಗಳ ವಿಸ್ತರಣೆ ಹಾಗೂ ಇನ್ನಷ್ಟು ಗಾಢಗೊಳಿಸುವುದು ಎರಡೂ ದೇಶಗಳ ಪ್ರಮುಖ ಆದ್ಯತೆ ಆಗಿರಲಿದೆ. ಮೂಲಸೌಕರ್ಯ, ತ್ಯಾಜ್ಯ ಮತ್ತು ನೀರಿನ 

ನಿರ್ವಹಣೆ, ಸೌರ ಮತ್ತು ಪವನ ವಿದ್ಯುತ್ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಎರಡೂ ಆರ್ಥಿಕತೆಗಳ ನಡುವೆ ಸದೃಢ ವಾಣಿಜ್ಯಿಕ ಸಂಬಂಧವನ್ನು ನಿರ್ಮಿಸಲು ಸಂಪೂರ್ಣ ಅವಕಾಶಗಳಿವೆ. ಸ್ಟಾರ್ಟ್ ಅಪ್ಗಳಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುವಲ್ಲಿನ ನಮ್ಮ ಅನುಭವಗಳು ದ್ವಿಪಕ್ಷೀಯ ಸಂಬಂಧದಲ್ಲಿನ ಆಸಕ್ತಿದಾಯಕ ಕ್ಷೇತ್ರವಾಗಿರಲಿದೆ. 

 

ಇದು ನಮ್ಮ ಯುವ ಉದ್ಯಮಿಗಳಿಗೆ ಲಾಭದಾಯಕ ಸಹಭಾಗಿತ್ವವನ್ನು ರೂಪಿಸಲು ವಿಶಿಷ್ಠ ಅವಕಾಶವೊಂದನ್ನು ಕಲ್ಪಿಸಿದ್ದು, ಎರಡೂ ಸಮಾಜಗಳಿಗೆ ಮೌಲ್ಯ ಮತ್ತು ಐಶ್ವರ್ಯ ಸೃಷ್ಟಿಗೆ ನೆರವಾಗಲಿದೆ. ಸ್ಟಾರ್ಟ್ ಅಪ್ ಪೋರ್ಚಗಲ್ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ನಡುವಿನ ಸಹಭಾಗಿತ್ವವು ಸಂಶೋಧನೆ ಮತ್ತು ಆವಿಷ್ಕಾರ ಕುರಿತ ನಮ್ಮ ಪರಸ್ಪರ ಪ್ರಯತ್ನದಲ್ಲಿ ನೆರವಾಗಲಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ. 

 

ಸುರಕ್ಷತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ವೃದ್ಧಿಸಲು ನಾನು ಮತ್ತು ಪ್ರಧಾನಿ ಕೋಸ್ಟಾ ಒಪ್ಪಿಕೊಂಡಿ ದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಕುರಿತು ಇಂದು ಸಹಿಯಾದ ಎಂಒಯು, ಈ ಕ್ಷೇತ್ರದಲ್ಲಿ ಪರಸ್ಪರರ ಹಿತವನ್ನು ಕಾಯ್ದು ಬಲವನ್ನು ಹೆಚ್ಚಿಸಲು ನೆರವಾಗುತ್ತವೆ. ಕ್ರೀಡೆ ದ್ವಿಪಕ್ಷೀಯ ಸಂಬಂಧ ಬೆಳೆಸಲು ಅವಕಾಶವಿರುವ ಇನ್ನೊಂದು ಭರವಸೆಯ ಕ್ಷೇತ್ರವಾಗಿದೆ. 

 

ಗೌರವಾನ್ವಿತರೇ, 

 

ನೀವು ಕಾಲ್ಚೆಂಡು ಆಟದ ಅಭಿಮಾನಿ ಎನ್ನುವುದು ನಮಗೆ ಗೊತ್ತಿದೆ. ಕಾಲ್ಚೆಂಡು ಆಟದಲ್ಲಿ ಪೋರ್ಚಗಲ್ ಪ್ರಾಬಲ್ಯ ಹೊಂದಿದ್ದು, ಭಾರತದಲ್ಲಿ ಈ ಕ್ರೀಡೆ ತೀವ್ರವಾಗಿ ಬೆಳೆಯುತ್ತಿರುವುದರಿಂದ, ಇದನ್ನು ಕೇಂದ್ರವಾಗಿರಿಸಿಕೊಂಡು ಆಟೋಟ ವಿಭಾಗದಲ್ಲಿ ಸಹಭಾಗಿತ್ವವನ್ನು ರೂಪಿಸ ಬಹುದಾಗಿದೆ.

 

ಸ್ನೇಹಿತರೇ,

 

ಭಾರತ ಮತ್ತು ಪೋರ್ಚಗಲ್ ಹಲವು ಅಂತಾರಾಷ್ಟ್ರೀಯ ವಿಷಯಗಳಲ್ಲಿ ಒಂದೇ ದೃಷ್ಟಿಕೋನವನ್ನು ಹೊಂದಿವೆ. ವಿಶ್ವ ಸಂಸ್ಥೆಯ ರಕ್ಷಣಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ನೀಡುವುದಕ್ಕೆ ಸಂಬಂಧಿಸಿದಂತೆ ಪೋರ್ಚಗಲ್ ನೀಡುತ್ತಿರುವ ಸತತ ಬೆಂಬಲಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತದ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಪೋರ್ಚಗಲ್ ನೀಡುತ್ತಿರುವ ಬೆಂಬಲಕ್ಕೆ ನಾವು ಋಣಿಯಾಗಿದ್ದೇವೆ ಹಾಗೂ ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯತ್ವ ಕುರಿತಂತೆ ನೀಡುತ್ತಿರುವ ಬೆಂಬಲಕ್ಕೂ ಕೃತಜ್ಞರಾಗಿದ್ದೇವೆ. ಹಿಂಸೆ ಮತ್ತು ಉಗ್ರವಾದ ತೀವ್ರವಾಗಿ ಬೆಳೆದು ಎಲ್ಲೆಡೆ ವ್ಯಾಪಿಸುತ್ತಿದ್ದು, ಈ ಬಗ್ಗೆ ಜಾಗತಿಕ ಸಮುದಾಯ ತಕ್ಷಣ ಹಾಗೂ ದೃಢ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯ ಕುರಿತು ನಾವು ಚರ್ಚಿಸಿದ್ದೇವೆ.

 

ಗೌರವಾನ್ವಿತರೇ,

 

ಪೋರ್ಚಗಲ್ ಮತ್ತು ಭಾರತ ಸಾಮಾನ್ಯ ಸಾಂಸ್ಕೃತಿಕ ಭಿತ್ತಿಯನ್ನು ಹಂಚಿಕೊಂಡಿವೆ. ಗೋವಾ ಮತ್ತು ಇಂಡೋ ಪೋರ್ಚಗೀಸ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಮೃದ್ಧಿಗೆ ನಿಮ್ಮ ತಂದೆ, ಓರ್ಲಾಂಡೋ ಕೋಸ್ಟಾ ಅವರ ಕಾಣಿಕೆಯನ್ನು ನಾವು ಗೌರವಿಸುತ್ತೇವೆ. ಇಂದು ನಾವು ಎರಡು ನೃತ್ಯ ವಿಧಗಳನ್ನು ಸಂಭ್ರಮಿಸುವ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಈ ಎರಡು ನೃತ್ಯ ಪ್ರಕಾರಗಳು, ಒಂದು ಭಾರತೀಯ ಮತ್ತು ಇನ್ನೊಂದು ಪೋರ್ಚಗೀಸ್, ನಮ್ಮ ಸಾಂಸ್ಕೃತಿಕ ಸಾಮಿಪ್ಯದ ಬೆರಗುಗೊಳಿಸುವ ಉದಾಹರಣೆಗಳಾಗಿವೆ.

 

ಗೌರವಾನ್ವಿತರೇ,

 

ಮುಂದಿನ ಕೆಲ ದಿನ ನೀವು ಭಾರತದಲ್ಲಿ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಲ್ಲದೆ, ಪ್ರವಾಸ ಕೈಗೊಳ್ಳಲಿದ್ದೀರಿ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಬೆಂಗಳೂರು,ಗುಜರಾತ್ ಮತ್ತು ಗೋವಾದಲ್ಲಿ ಉತ್ತಮ ವಾಸ್ತವ್ಯ ಹಾಗೂ ಅನುಭವ ಸಿಗಲಿ ಎಂದು ಆಶಿಸುತ್ತೇನೆ. ವಿಶೇಷವಾಗಿ, ಗೋವಾದ ನಿಮ್ಮ ಭೇಟಿ ಸ್ಮರಣೀಯವಾಗಿರಲಿ ಹಾಗೂ ನಿಮ್ಮ ಪೂರ್ವಜರ ಬೇರುಗಳೊಂದಿಗೆ ಮರುಸಂಪರ್ಕ ಲಭ್ಯವಾಗಲಿ ಎಂದು ಆಶಿಸುತ್ತೇನೆ.

 

ಧನ್ಯವಾದ

 

ನಿಮಗೆ ನನ್ನ ಧನ್ಯವಾದ.