Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೊಲೀಸ್ ಮಹಾ ನಿರ್ದೇಶಕರು/ಇನ್ಸ್ ಪೆಕ್ಟರ್ ಜನರಲ್ ಗಳ 59ನೇ ಅಖಿಲ ಭಾರತ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 30 ಮತ್ತು ಡಿಸೆಂಬರ್ 1,2024 ರಂದು ಭುವನೇಶ್ವರದಲ್ಲಿ ನಡೆದ ಪೊಲೀಸ್ ಮಹಾ ನಿರ್ದೇಶಕರು/ಇನ್ಸ್ ಪೆಕ್ಟರ್ ಜನರಲ್‌ ಗಳ 59ನೇ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ, ಪ್ರಧಾನಮಂತ್ರಿಯವರು ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ವಿತರಿಸಿದರು. ತಮ್ಮ ಸಮಾರೋಪ ಭಾಷಣದಲ್ಲಿ, ಭದ್ರತಾ ಸವಾಲುಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಯಾಮಗಳ ಕುರಿತು ಸಮಾವೇಶದಲ್ಲಿ ವ್ಯಾಪಕವಾದ ಚರ್ಚೆಗಳು ನಡೆದಿವೆ ಎಂದು ಪ್ರಧಾನಿ ಹೇಳಿದರು ಮತ್ತು ಚರ್ಚೆಯಿಂದ ಹೊರಹೊಮ್ಮಿದ ಪ್ರತಿ ಕಾರ್ಯತಂತ್ರಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ತಮ್ಮ ಭಾಷಣದಲ್ಲಿ, ಪ್ರಧಾನ ಮಂತ್ರಿಯವರು ಡಿಜಿಟಲ್ ವಂಚನೆಗಳು, ಸೈಬರ್ ಅಪರಾಧಗಳು ಮತ್ತು AI ತಂತ್ರಜ್ಞಾನದಿಂದ ಉಂಟಾಗುವ ಸಂಭಾವ್ಯ ಬೆದರಿಕೆಗಳ ಬಗ್ಗೆ, ವಿಶೇಷವಾಗಿ ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳನ್ನು ಅಡ್ಡಿಪಡಿಸುವ ಡೀಪ್ ಫೇಕ್‌ ನ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.  ಇದಕ್ಕೆ ಪ್ರತಿಯಾಗಿ, ಭಾರತದ  ಎರಡು AI ಶಕ್ತಿಗಳಾದ ಕೃತಕ ಬುದ್ಧಿಮತ್ತೆ ಮತ್ತು ‘‘Aspirational India’ವನ್ನು ಬಳಸಿಕೊಳ್ಳುವ ಮೂಲಕ ಸವಾಲನ್ನು ಅವಕಾಶವಾಗಿ ಪರಿವರ್ತಿಸಬೇಕೆಂದು ಅವರು ಪೊಲೀಸ್ ನಾಯಕತ್ವಕ್ಕೆ ಕರೆ ನೀಡಿದರು.

ಅವರು SMART ಪೊಲೀಸಿಂಗ್ ಮಂತ್ರವನ್ನು ವಿಸ್ತರಿಸಿ,  ಪೊಲೀಸರು ಚಾಣಾಕ್ಷರಾಗಿ, ಎಲ್ಲಾ ಕೆಲಸಗಳನ್ನೂ ಚೆನ್ನಾಗಿ ಪ್ಲಾನ್ ಮಾಡಿ, ಹೊಸತನಕ್ಕೆ ಹೊಂದಿಕೊಳ್ಳುವಂಗೆ, ನಂಬಿಕೆಗೆ ಯೋಗ್ಯರಾಗಿ ಮತ್ತು ಎಲ್ಲಾ ವಿಷಯಗಳಲ್ಲೂ ಪಾರದರ್ಶಕವಾಗಿ ಇರವಂತೆ ಅವರು ಕರೆ ನೀಡಿದರು. ನಗರ ಪೊಲೀಸಿಂಗ್‌ ನಲ್ಲಿ ಕೈಗೊಂಡ ಉಪಕ್ರಮಗಳನ್ನು ಶ್ಲಾಘಿಸುತ್ತಾ, ಪ್ರತಿಯೊಂದು ಉಪಕ್ರಮಗಳನ್ನು ಸಂಗ್ರಹಿಸಿ ದೇಶದ 100 ನಗರಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ಸೂಚಿಸಿದರು. ಪೊಲೀಸ್ ಸಿಬ್ಬಂದಿಯ ಕೆಲಸದ ಹೊರೆಯನ್ನು ಕಡಿಮೆ ಮಾಡಲು ತಂತ್ರಜ್ಞಾನದ ಬಳಕೆಗೆ ಅವರು ಕರೆ ನೀಡಿದರು ಮತ್ತು ಪೊಲೀಸ್ ಠಾಣೆಯನ್ನು ಸಂಪನ್ಮೂಲ ಹಂಚಿಕೆಗೆ ಕೇಂದ್ರಬಿಂದುವನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.

ಕೆಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹ್ಯಾಕಥಾನ್ ಗಳ ಯಶಸ್ಸಿನ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿ, ರಾಷ್ಟ್ರೀಯ ಪೊಲೀಸ್ ಹ್ಯಾಕಥಾನ್ ನಡೆಸುವ ಬಗ್ಗೆಯೂ ಚರ್ಚಿಸಲು ಸಲಹೆ ನೀಡಿದರು. ಬಂದರು ಭದ್ರತೆಯ ಮೇಲೆ ಗಮನವನ್ನು ವಿಸ್ತರಿಸುವ ಮತ್ತು ಅದಕ್ಕಾಗಿ ಭವಿಷ್ಯದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೃಹ ಸಚಿವಾಲಯಕ್ಕೆ ಅಪಾರ ಕೊಡುಗೆಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಗೃಹ ಸಚಿವಾಲಯದಿಂದ  ಹಿಡಿದು ಪೊಲೀಸ್ ಠಾಣೆ ಮಟ್ಟದ ಎಲ್ಲಾ ಸುರಕ್ಷಾ ಸಿಬ್ಬಂದಿಗಳಿಗೆ, ಮುಂದಿನ ವರ್ಷ ಪಟೇಲ್ ಅವರ 150ನೇ ಜನ್ಮ ದಿನದಂದು, ಪೊಲೀಸ್ ಇಲಾಖೆಯ ಗೌರವ, ವೃತ್ತಿಪರತೆ ಮತ್ತು ಸಾಮರ್ಥ್ಯ ಹೆಚ್ಚಿಸಬಲ್ಲ ಯಾವುದೇ ಒಂದು ಗುರಿಯನ್ನು ನಿಗದಿಪಡಿಸಿ ಸಾಧಿಸಬೇಕೆಂದು ಹೇಳಿದರು. ಅಲ್ಲದೆ ಪೊಲೀಸ್ ಇಲಾಖೆಯನ್ನು ‘ವಿಕಸಿತ ಭಾರತ’ದ ಆಲೋಚನೆಗೆ ಹೊಂದಿಸಿ ಆಧುನೀಕರಿಸಲು ಒತ್ತಾಯಿಸಿದರು.

ಸಮ್ಮೇಳನದಲ್ಲಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಭಯೋತ್ಪಾದನೆ ನಿಗ್ರಹ,, ಎಡಪಂಥೀಯ ಉಗ್ರವಾದ, ಸೈಬರ್ ಅಪರಾಧ, ಆರ್ಥಿಕ ಭದ್ರತೆ, ವಲಸೆ, ಕರಾವಳಿ ಭದ್ರತೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಅಸ್ತಿತ್ವದಲ್ಲಿರುವ ಮತ್ತು ಎದುರಾಗುವ ಹೊಸ ಸವಾಲುಗಳ ಕುರಿತು ಆಳವಾದ ಚರ್ಚೆಗಳು ನಡೆದವು. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಉದಯೋನ್ಮುಖ ಭದ್ರತಾ ಕಾಳಜಿಗಳು, ನಗರ ಪೊಲೀಸಿಂಗ್‌ ನಲ್ಲಿನ ಪ್ರವೃತ್ತಿಗಳು ಮತ್ತು ದುರುದ್ದೇಶಪೂರಿತ ನಿರೂಪಣೆಗಳನ್ನು ಎದುರಿಸುವ ಕಾರ್ಯತಂತ್ರಗಳ ಕುರಿತು ಸಹ ಚರ್ಚೆಗಳು ನಡೆದವು. ಇದಲ್ಲದೆ, ಹೊಸದಾಗಿ ಜಾರಿಗೆ ತಂದ ಪ್ರಮುಖ ಕ್ರಿಮಿನಲ್ ಕಾನೂನುಗಳ ಅನುಷ್ಠಾನ, ಪೊಲೀಸಿಂಗ್‌ ನಲ್ಲಿನ ಉಪಕ್ರಮಗಳು ಮತ್ತು ಉತ್ತಮ ಅಭ್ಯಾಸಗಳು ಮತ್ತು ನೆರೆಹೊರೆಯಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಪ್ರಧಾನಮಂತ್ರಿಯವರು ಕಾರ್ಯಕಲಾಪಗಳಲ್ಲಿ ಅಮೂಲ್ಯವಾದ ಒಳನೋಟಗಳನ್ನು ನೀಡಿದರು ಮತ್ತು ಭವಿಷ್ಯದ ಮಾರ್ಗಸೂಚಿಯನ್ನು  ಹಂಚಿಕೊಂಡರು.

ಸಮ್ಮೇಳನಕ್ಕೆ ಕೇಂದ್ರ ಗೃಹ ಸಚಿವ, ಪ್ರಧಾನಮಂತ್ರಿಯ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗೃಹ ಸಚಿವರು ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಸಹ ಹಾಜರಾಗಿದ್ದರು. ಈ ಸಮ್ಮೇಳನವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು, ಇದಲ್ಲಿ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ/ಐಜಿಪಿ ಮತ್ತು ಸಿಎಪಿಎಫ್/ಸಿಪಿಓ ಪ್ರಮುಖರು ಕೂಡ ಭಾಗವಹಸಿದ್ದರು. ಅಲ್ಲದೇ, ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ 750ಕ್ಕೂ ಹೆಚ್ಚಿನ ಅಧಿಕಾರಿಗಳು ವರ್ಚುವಲ್ ಮಾಧ್ಯಮದಲ್ಲಿ ಭಾಗವಹಿಸಿದ್ದರು.

 

*****