ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಪೇಟೆಂಟ್ ಪ್ರಾಸಿಕ್ಯೂಷನ್ ಹೈವೇ (ಪಿಪಿಹೆಚ್) ಕಾರ್ಯಕ್ರಮವನ್ನು , ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್, ಡಿಸೈನ್ಸ್ & ಟ್ರೇಡ್ ಮಾರ್ಕ್ಸ್, ಇಂಡಿಯಾ (ಸಿಜಿಪಿಡಿಟಿಎಂ) ರವರ ಅಡಿಯಲ್ಲಿ ಭಾರತೀಯ ಪೇಟೆಂಟ್ ಕಚೇರಿ (ಐಪಿಒ)ಯು ವಿವಿಧ ಆಸಕ್ತ ದೇಶಗಳ ಅಥವಾ ಪ್ರದೇಶಗಳ ಪೇಟೆಂಟ್ ಕಚೇರಿಗಳ ಜೊತೆ ಪೇಟೆಂಟ್ ಪ್ರಾಸಿಕ್ಯೂಷನ್ ಹೈವೇ ಕಾರ್ಯಕ್ರಮದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.
ಈ ಕಾರ್ಯಕ್ರಮವು ಆರಂಭದಲ್ಲಿ ಜಪಾನ್ ಪೇಟೆಂಟ್ ಕಚೇರಿ (ಜೆಪಿಒ) ಮತ್ತು ಭಾರತೀಯ ಪೇಟೆಂಟ್ ಕಚೇರಿ ನಡುವೆ ಪ್ರಾಯೋಗಿಕವಾಗಿ ಮೂರು ವರ್ಷಗಳ ಅವಧಿಗೆ ಮಾತ್ರ ಪ್ರಾರಂಭಿಸಲಿದೆ. ಈ ಆರಂಭಿಕ ಕಾರ್ಯಕ್ರಮದಡಿಯಲ್ಲಿ, ಭಾರತೀಯ ಪೇಟೆಂಟ್ ಕಚೇರಿಯು ಕೆಲವು ನಿರ್ದಿಷ್ಟ ತಾಂತ್ರಿಕ ಕ್ಷೇತ್ರಗಳಾದ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಭೌತಶಾಸ್ತ್ರ, ಸಿವಿಲ್, ಮೆಕ್ಯಾನಿಕಲ್, ಟೆಕ್ಸ್ ಟೈಲ್ಸ್, ಆಟೋಮೊಬೈಲ್ಸ್ ಮತ್ತು ಲೋಹಶಾಸ್ತ್ರ ಗಳಿಗೆ ಮಾತ್ರ ಪೇಟೆಂಟ್ ಅರ್ಜಿಗಳನ್ನು ಸ್ವೀಕರಿಸಬಹುದು, ಆದರೆ ಜಪಾನ್ ಪೇಟೆಂಟ್ ಕಚೇರಿಯು ತಂತ್ರಜ್ಞಾನದ. ಎಲ್ಲಾ ಕ್ಷೇತ್ರಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಬಹುದು.
ಪಿಪಿಹೆಚ್ ಕಾರ್ಯಕ್ರಮಗಳಿಂದ ಭಾರತೀಯ ಐಪಿ ಕಚೇರಿಗೆ ಈ ಕೆಳಗಿನ ಪ್ರಯೋಜನಗಳು ಆಗುತ್ತವೆ:
i) ಪೇಟೆಂಟ್ ಅರ್ಜಿಗಳ ವಿಲೇವಾರಿ ಸಮಯದಲ್ಲಿ ಕಡಿತ.
ii) ಬಾಕಿ ಉಳಿದ ಪೇಟೆಂಟ್ ಅರ್ಜಿಗಳ ಕಡಿತ.
iii) ಪೇಟೆಂಟ್ ಅರ್ಜಿಗಳ ಶೋಧ ಮತ್ತು ಪರೀಶೀಲನೆಯ ಗುಣಮಟ್ಟದಲ್ಲಿ ಸುಧಾರಣೆ.
iv) ಎಂಎಸ್ಎಂಇಗಳು ಮತ್ತು ಸ್ಟಾರ್ಟ್ ಅಪ್ಸ್ ಆಫ್ ಇಂಡಿಯಾ (ನವೋದ್ಯಮ) ಸೇರಿದಂತೆ ಭಾರತೀಯ ನವೋದ್ಯಮಿಗಳಿಗೆ , ಆವಿಷ್ಕಾರಿಗಳಿಗೆ ಜಪಾನ್ನಲ್ಲಿ ಪೇಟೆಂಟ್ ಅರ್ಜಿಗಳ ತ್ವರಿತ ಪರಿಶೀಲನೆಗೆ ಅವಕಾಶ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ನಿರ್ಧರಿಸಿದಂತೆ ಕಾರ್ಯಕ್ರಮವನ್ನು ಭವಿಷ್ಯದಲ್ಲಿ ವಿಸ್ತರಿಸಬಹುದು. ಪೇಟೆಂಟ್ ಕಚೇರಿಗಳು ಈ ಕಾರ್ಯಕ್ರಮದ ಅನುಷ್ಠಾನಕ್ಕೆ ತಮ್ಮದೇ ಆದ ಮಾರ್ಗಸೂಚಿಗಳನ್ನು ರೂಪಿಸುತ್ತವೆ.