Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೂರ್ವ ಏಷ್ಯಾ ಮತ್ತು ಆರ್‌ಸಿಇಪಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬ್ಯಾಂಗ್‌ಕಾಕ್‌ನಲ್ಲಿ ನಡೆಯಲಿರುವ ಪೂರ್ವ ಏಷ್ಯಾ ಮತ್ತು ಆರ್‌ಸಿಇಪಿ ಶೃಂಗಸಬೆಯಲ್ಲಿ ಭಾಗವಹಿಸಲಿದ್ದಾರೆ. ಜತೆಗೆ, ಜಪಾನ್‌ ಪ್ರಧಾನಿ ಶಿಂಜೊ ಅಬೆ, ವಿಯಟ್ನಾಂ ಪ್ರಧಾನಿ ಎನ್‌ಗ್ಯುಯೆನ್‌ ಕ್ಸುವನ್‌ ಫುಕ್‌, ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರ್ರಿಸ್‌ ಅವರನ್ನು ಈ ಸಂದರ್ಭದಲ್ಲಿ ಭೇಟಿಯಾಗಲಿದ್ದಾರೆ.

ಪ್ರಾದೇಶೀಕ ಸಮಗ್ರ ಸಹಕಾರ ಸಹಭಾಗಿತ್ವ ಅಥವಾ ಆರ್‌ಸಿಇಪಿ ಕುರಿತಾದ ಶೃಂಗಸಭೆಯಲ್ಲಿ ಭಾರತ ನಿಲುವು–ಒಲವುಗಳನ್ನು ಪ್ರಧಾನಿ ಅವರು ವ್ಯಕ್ತಪಡಿಸಲಿದ್ದಾರೆ. ಆರ್‌ಸಿಇಪಿ ಸಮಗ್ರವಾದ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. 10 ಆಸಿಯಾನ್‌ ಸದಸ್ಯ ರಾಷ್ಟ್ರಗಳ ನಡುವೆ ಈ ಬಗ್ಗೆ ಸಂಧಾನ ನಡೆಯಲಿದೆ. ಆಸ್ಟ್ರೇಲಿಯಾ, ಚೀನಾ, ಭಾರತ, ಜಪಾನ್‌, ಕೊರಿಯಾ ಮತ್ತು ನ್ಯೂಜಿಲೆಂಡ್‌ ಆಸಿಯಾನ್‌ ಮುಕ್ತ ವ್ಯಾಪಾರ ಒಪ್ಪಂದದ ಸಹಭಾಗಿಯಾಗಿವೆ.

ಆರ್‌ಸಿಇಪಿ ವ್ಯಾಪಾರ ಒಪ್ಪಂದವನ್ನು ಸೇರಲು ಭಾರತ ಹಿಂಜರಿಯುತ್ತಿದೆ ಎನ್ನುವ ಅಭಿಪ್ರಾಯವನ್ನು ತೆಗೆದುಹಾಕುವುದಾಗಿ ಪ್ರಧಾನಿ ಅವರು ಹೇಳಿದರು. ಬ್ಯಾಂಗ್‌ಕಾಕ್‌ ಪೊಸ್ಟ್‌ಗೆ ಈ ಬಗ್ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿರುವ ಅವರು, ಭಾರತವು ಸಮಗ್ರವಾದ ಮತ್ತು ಸಮತೋಲನವಾದ ಒಪ್ಪಂದವನ್ನು ಆರ್‌ಸಿಇಪಿಯಿಂದ ಬಯಸುತ್ತದೆ. ಆರ್‌ಸಿಇಪಿಯಿಂದ ಎಲ್ಲರಿಗೂ ಅನುಕೂಲವಾಗಬೇಕು ಎನ್ನುವುದು ಭಾರತದ ಆಶಯ ಎಂದು ಹೇಳಿದರು.

ಅಸುಸ್ಥಿರವಾದ ವ್ಯಾಪಾರ ಕೊರತೆಯು ಭಾರತದ ಕಳವಳಕ್ಕೆ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು.

ಪರಸ್ಪರರಿಗೆ ಪೂರಕವಾದ, ಲಾಭದಾಯಕವಾದ ಆರ್‌ಸಿಇಪಿ ಅಗತ್ಯವಿದೆ. ಇದರಿಂದ, ಎಲ್ಲರಿಗೂ ಅನುಕೂಲವಾಗಬೇಕು. ಜತೆಗೆ ಭಾರತದ ಹಿತಾಸಕ್ತಿ ಒಳಗೊಂಡಿರಬೇಕು ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದರು.

2012ರಲ್ಲಿ ಆರ್‌ಸಿಪಿ ಕುರಿತು ಕಾಂಬೋಡಿಯಾದಲ್ಲಿ ಸಂಧಾನಗಳು ಆರಂಭವಾದವು. ಸರಕು ಸಾಗಾಣಿಕೆ, ಸೇವೆ, ಹೂಡಿಕೆ, ಮಾರುಕಟ್ಟೆ ಪ್ರವೇಶ, ಆರ್ಥಿಕ ಸಹಕಾರ, ಇ–ಕಾಮರ್ಸ್‌ ಸೇರಿದಂತೆ ಹಲವು ಕ್ಷೇತ್ರಗಳನ್ನು ಇದು ಒಳಗೊಂಡಿದೆ.