Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರುಷರ 57 ಕೆ.ಜಿ. ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮೊಹಮ್ಮದ್ ಹುಸಾಮುದ್ದೀನ್ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿಡಬ್ಲೂಜಿ ಕ್ರೀಡಾಕೂಟ-2022 ದ ಪುರುಷರ 77 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಕ್ಕಾಗಿ ಮೊಹಮ್ಮದ್ ಹುಸಾಮುದ್ದೀನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಮೊಹಮ್ಮದ್ ಹುಸಾಮುದ್ದೀನ್ ಅವರು ಅತ್ಯುತ್ತಮ ಬಾಕ್ಸರ್ ಆಗಿದ್ದು, ಅವರು ಅನೇಕ ಕ್ರೀಡಾಕೂಟಗಳಲ್ಲಿ ಯಶಸ್ಸುಗಳಿಸಿದ್ದಾರೆ. ಅದ್ಭುತ ತಂತ್ರಗಳು ಮತ್ತು ಪುಟಿದೇಳುವ ಮನೋಭಾವದ ಶಕ್ತಿ ರೂಢಿಸಿಕೊಂಡಿರುವ ಅಥ್ಲೀಟ್ ಆಗಿದ್ದು, ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಪುರುಷರ 57 ಕೆಜಿ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಅವರಿಗೆ ನಾನು ಶುಭ ಕೋರುತ್ತೇನೆ. #Cheer4India’’.

 

*******