ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ಓಪನ್ ನಲ್ಲಿ ಚಿನ್ನದ ಪದಕ ಜಯಿಸಿರುವ ಪ್ಯಾರಾ ಆರ್ಚರ್ ಹರ್ವಿಂದರ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಹರ್ವಿಂದರ್ ಸಿಂಗ್ ಅವರ ಅಭೂತಪೂರ್ವ ಪ್ರದರ್ಶನವನ್ನು ಶ್ಲಾಘಿಸಿರುವ ಅವರು, ಸಿಂಗ್ ಅವರ ನಿಖರತೆ, ಗಮನ ಮತ್ತು ಅಚಲ ಬದ್ಧತೆಯ ಬಗ್ಗೆ ಒತ್ತಿ ಹೇಳಿದ್ದಾರೆ.
ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
ಪ್ಯಾರಾ ಆರ್ಚರಿಯಲ್ಲಿ ವಿಶೇಷ ಚಿನ್ನ!
#Paralympics2024 ರಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ಓಪನ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಹರ್ವಿಂದರ್ ಸಿಂಗ್ ಅವರಿಗೆ ಅಭಿನಂದನೆಗಳು!
ಅವರ ನಿಖರತೆ, ಗಮನ ಕೇಂದ್ರೀಕರಣ ಮತ್ತು ಅಚಲ ಉತ್ಸಾಹವು ಅಸಮಾನ್ಯವಾಗಿದೆ. ಅವರ ಸಾಧನೆಯು ಭಾರತಕ್ಕೆ ಸಂತಸ ತಂದಿದೆ.
#Cheer4Bharat
*****