ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುನರ್ನಿರ್ಮಾಣ ಮತ್ತು ಅಭಿವೃದ್ಧಿ (ಇಬಿಆರ್.ಡಿ) ಕುರಿತ ಐರೋಪ್ಯ ಬ್ಯಾಂಕ್ ನ ಭಾರತೀಯ ಸದಸ್ಯತ್ವಕ್ಕೆ ತನ್ನ ಅನುಮೋದನೆ ನೀಡಿದೆ.
ಇಬಿಆರ್.ಡಿಯ ಸದಸ್ಯತ್ವ ಪಡೆಯಲು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಪರಿಣಾಮ:
ಹಣಕಾಸು ಪರಿಣಾಮಗಳು:
ಇಬಿಆರ್.ಡಿ.ಯ ಸದಸ್ಯತ್ವಕ್ಕೆ ಪ್ರಾಥಮಿಕ ಕನಿಷ್ಠ ಹೂಡಿಕೆಯು ಸುಮಾರು €1 ದಶಲಕ್ಷ ಆಗಿರುತ್ತದೆ. ಆದಾಗ್ಯೂ, ಈ ಕಲ್ಪಿತ ಮೊತ್ತ ಸದಸ್ಯತ್ವ ಪಡೆಯಲು ಅಗತ್ಯವಾದ ಕನಿಷ್ಠ ಸಂಖ್ಯೆಯ ಶೇರು (100) ಖರೀದಿಸುವ ಭಾರತದ ನಿರ್ಧಾರವನ್ನು ಆಧರಿಸಿರುತ್ತದೆ. ಒಂದೊಮ್ಮೆ ಭಾರತವು ಹೆಚ್ಚಿನ ಸಂಖ್ಯೆ ಬ್ಯಾಂಕ್ ಶೇರು ಖರೀದಿಸುವುದಾದರೆ, ಹಣಕಾಸಿನ ಹೊರೆಯೂ ಹೆಚ್ಚಳವಾಗುತ್ತದೆ. ಈ ಹಂತದಲ್ಲಿ ಸಂಪುಟದ ತಾತ್ವಿಕ ಒಪ್ಪಿಗೆಯು ಬ್ಯಾಂಕ್ ಸೇರ್ಪಡೆಗೆ ಸಂಬಂಧಿಸಿರುತ್ತದೆ.
ಹಿನ್ನೆಲೆ
ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಯೂರೋಪಿಯನ್ ಬ್ಯಾಂಕ್ (ಇಬಿಆರ್.ಡಿ)ನಲ್ಲಿ ಸದಸ್ಯತ್ವ ಪಡೆಯುವುದು ಸರ್ಕಾರದ ಪರಿಗಣನೆಯಲ್ಲಿದೆ. ಕೆಲವು ವರ್ಷಗಳಿಂದ ದೇಶದ ಪ್ರಭಾವಿತ ಆರ್ಥಿಕ ಪ್ರಗತಿ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಘನತೆಯ ಹೆಚ್ಚಳವು ಭಾರತ ಜಾಗತಿಕ ಅಭಿವೃದ್ಧಿ ಭೂರಮೆಯಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ (ಎಂಡಿಬಿ)ಗಳು ಅಂದರೆ ವಿಶ್ವಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಮತ್ತು ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ ಗಳ ನಂಟಿನ ಹೊರತಾಗಿ ತನ್ನ ಅಸ್ತಿತ್ವವನ್ನು ವಿಸ್ತರಿಸುವುದು ಸೂಕ್ತ ಎಂಬುದನ್ನು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್ (ಎನ್.ಡಿ.ಬಿ.) ಸೇರುವ ನಿರ್ಧಾರವನ್ನು ಈ ಹಿಂದೆ ಕೈಗೊಳ್ಳಲಾಗಿತ್ತು.
***