Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಎಂ-ಸೂರ್ಯ ಘರ್: ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರಶಕ್ತಿ ವ್ಯವಸ್ಥೆ ಸ್ಥಾಪಿಸುವ ಮುಫ್ತ್ ಬಿಜ್ಲಿ ಯೋಜನೆಗೆ ಸಂಪುಟದ ಅನುಮೋದನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೇಲ್ಛಾವಣಿ ಸೌರಶಕ್ತಿಯನ್ನು ಸ್ಥಾಪಿಸಲು ಮತ್ತು ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲು ಒಟ್ಟು 75,021 ಕೋಟಿ ರೂ.ಗಳ ವೆಚ್ಚದಪಿಎಂ-ಸೂರ್ಯ ಘರ್: ಮುಫ್ಟ್ ಬಿಜ್ಲಿ ಯೋಜನೆಗೆತನ್ನ ಅನುಮೋದನೆ ನೀಡಿದೆ. ಪ್ರಧಾನಮಂತ್ರಿಯವರು 2024ರ ಫೆಬ್ರವರಿ 13ರಂದು ಈ ಯೋಜನೆಗೆ ಚಾಲನೆ ನೀಡಿದ್ದರು.

ಯೋಜನೆಯ ಪ್ರಮುಖ ಮುಖ್ಯಾಂಶಗಳು ಹೀಗಿವೆ:

ವಸತಿ ಮೇಲ್ಛಾವಣಿ ಸೌರಶಕ್ತಿಗಾಗಿ ಕೇಂದ್ರ ಹಣಕಾಸು ನೆರವು (ಸಿಎಫ್ಎ)

ಈ ಯೋಜನೆಯು 2 ಕಿಲೋವ್ಯಾಟ್ ವ್ಯವಸ್ಥೆಗಳಿಗೆ ಸಿಸ್ಟಮ್ ವೆಚ್ಚದ 60% ಮತ್ತು 2 ರಿಂದ 3 ಕಿಲೋವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ 40% ಸಿಎಫ್ಎ ಒದಗಿಸುತ್ತದೆ. ಸಿಎಫ್ಎ ಅನ್ನು 3 ಕಿಲೋವ್ಯಾಟ್ಗೆ ಮಿತಿಗೊಳಿಸಲಾಗುವುದು. ಪ್ರಸ್ತುತ ಬೆಂಚ್ ಮಾರ್ಕ್ ಬೆಲೆಗಳಲ್ಲಿ, ಇದರರ್ಥ 1 ಕಿಲೋವ್ಯಾಟ್ ವ್ಯವಸ್ಥೆಗೆ 30,000 ರೂ., 2 ಕಿಲೋವ್ಯಾಟ್ ವ್ಯವಸ್ಥೆಗೆ 60,000 ರೂ., ಮತ್ತು 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ವ್ಯವಸ್ಥೆಗೆ 78,000 ರೂ.
ಕುಟುಂಬಗಳು ರಾಷ್ಟ್ರೀಯ ಪೋರ್ಟಲ್ ಮೂಲಕ ಸಬ್ಸಿಡಿಗೆ ಅರ್ಜಿ ಸಲ್ಲಿಸುತ್ತವೆ ಮತ್ತು ಮೇಲ್ಛಾವಣಿ ಸೌರಶಕ್ತಿಯನ್ನು ಸ್ಥಾಪಿಸಲು ಸೂಕ್ತ ಮಾರಾಟಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಸೂಕ್ತ ಸಿಸ್ಟಮ್ ಗಾತ್ರಗಳು, ಪ್ರಯೋಜನಗಳ ಕ್ಯಾಲ್ಕುಲೇಟರ್, ಮಾರಾಟಗಾರರ ರೇಟಿಂಗ್ ಮುಂತಾದ ಸಂಬಂಧಿತ ಮಾಹಿತಿಯನ್ನು ಒದಗಿಸುವ ಮೂಲಕ ರಾಷ್ಟ್ರೀಯ ಪೋರ್ಟಲ್ ಕುಟುಂಬಗಳಿಗೆ ತಮ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
3 ಕಿಲೋವ್ಯಾಟ್ ವರೆಗಿನ ವಸತಿ ಆರ್ ಟಿಎಸ್ ವ್ಯವಸ್ಥೆಗಳನ್ನು ಸ್ಥಾಪಿಸಲು ಕುಟುಂಬಗಳು ಪ್ರಸ್ತುತ ಸುಮಾರು 7% ಮೇಲಾಧಾರ ರಹಿತ ಕಡಿಮೆ ಬಡ್ಡಿಯ ಸಾಲ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಯೋಜನೆಯ ಇತರ ಲಕ್ಷಣಗಳು

ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಮಾದರಿಯಾಗಿ ಕಾರ್ಯನಿರ್ವಹಿಸಲು ದೇಶದ ಪ್ರತಿ ಜಿಲ್ಲೆಯಲ್ಲಿ ಮಾದರಿ ಸೌರ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು,
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಸಹ ತಮ್ಮ ಪ್ರದೇಶಗಳಲ್ಲಿ ಆರ್ ಟಿಎಸ್ ಸ್ಥಾಪನೆಯನ್ನು ಉತ್ತೇಜಿಸಲು ಪ್ರೋತ್ಸಾಹಕಗಳಿಂದ ಪ್ರಯೋಜನ ಪಡೆಯುತ್ತವೆ.     
ಈ ಯೋಜನೆಯು ನವೀಕರಿಸಬಹುದಾದ ಇಂಧನ ಸೇವಾ ಕಂಪನಿ (ರೆಸ್ಕೊ) ಆಧಾರಿತ ಮಾದರಿಗಳಿಗೆ ಪಾವತಿ ಭದ್ರತೆಗಾಗಿ ಒಂದು ಘಟಕವನ್ನು ಒದಗಿಸುತ್ತದೆ ಮತ್ತು ಆರ್ ಟಿಎಸ್ ನಲ್ಲಿ ನವೀನ ಯೋಜನೆಗಳಿಗೆ ನಿಧಿಯನ್ನು ಒದಗಿಸುತ್ತದೆ.
ಫಲಿತಾಂಶ ಮತ್ತು ಪರಿಣಾಮ

ಈ ಯೋಜನೆಯ ಮೂಲಕ, ಕುಟುಂಬಗಳು ವಿದ್ಯುತ್ ಬಿಲ್ಗಳನ್ನು ಉಳಿಸಲು ಸಾಧ್ಯವಾಗುತ್ತದೆ ಮತ್ತು ಹೆಚ್ಚುವರಿ ವಿದ್ಯುತ್ ಅನ್ನು ಡಿಸ್ಕಾಮ್ಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ  ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. 3 ಕಿಲೋವ್ಯಾಟ್ ವ್ಯವಸ್ಥೆಯು ಒಂದು ಕುಟುಂಬಕ್ಕೆ ತಿಂಗಳಿಗೆ ಸರಾಸರಿ 300 ಯುನಿಟ್ ಗಳಿಗಿಂತ ಹೆಚ್ಚು ಉತ್ಪಾದಿಸಲು ಸಾಧ್ಯವಾಗುತ್ತದೆ.

ಪ್ರಸ್ತಾವಿತ ಯೋಜನೆಯು ವಸತಿ ವಲಯದಲ್ಲಿ ಮೇಲ್ಛಾವಣಿ ಸೌರಶಕ್ತಿಯ ಮೂಲಕ 30 ಗಿಗಾವ್ಯಾಟ್ ಸೌರ ಸಾಮರ್ಥ್ಯವನ್ನು ಸೇರಿಸುತ್ತದೆ, 1000 ಬಿಯು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಮೇಲ್ಛಾವಣಿ ವ್ಯವಸ್ಥೆಗಳ 25 ವರ್ಷಗಳ ಜೀವಿತಾವಧಿಯಲ್ಲಿ 720 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್  ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ಈ ಯೋಜನೆಯು ಉತ್ಪಾದನೆ, ಲಾಜಿಸ್ಟಿಕ್ಸ್, ಪೂರೈಕೆ ಸರಪಳಿ, ಮಾರಾಟ, ಸ್ಥಾಪನೆ, ಒ & ಎಂ ಮತ್ತು ಇತರ ಸೇವೆಗಳಲ್ಲಿ ಸುಮಾರು 17 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ.

ಪಿಎಂ-ಸೂರ್ಯ ಘರ್ ನ ಪ್ರಯೋಜನಗಳನ್ನು ಪಡೆಯುವುದು: ಮುಫ್ತ್ ಬಿಜ್ಲಿ ಯೋಜನೆ

ಜಾಗೃತಿ ಮೂಡಿಸಲು ಮತ್ತು ಆಸಕ್ತ ಕುಟುಂಬಗಳಿಂದ ಅರ್ಜಿಗಳನ್ನು ಪಡೆಯಲು ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಸರ್ಕಾರವು ಬೃಹತ್ ಅಭಿಯಾನವನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಕುಟುಂಬಗಳುhttps://pmsuryaghar.gov.in  ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.‌

*****