Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಂಗಲಿ ವೆಂಕಯ್ಯನವರ ಜಯಂತಿಯಂದು ಪ್ರಧಾನಮಂತ್ರಿ ಅವರಿಗೆ ಗೌರವ ನಮನ ಸಲ್ಲಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಪಿಂಗಲಿ ವೆಂಕಯ್ಯನವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ನಮ್ಮ ರಾಷ್ಟ್ರಕ್ಕೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿ ಪಿಂಗಲಿ ವೆಂಕಯ್ಯನವರ ಪರಿಶ್ರಮವನ್ನು ಪ್ರಧಾನಮಂತ್ರಿ ಮೋದಿಯವರು ಸ್ಮರಿಸಿದ್ದಾರೆ. ಆಗಸ್ಟ್ 9 ಮತ್ತು 15 ರ ನಡುವೆ ತ್ರಿವರ್ಣ ಧ್ವಜವನ್ನು ಹಾರಿಸಿ, http://harghartiranga.com ನಲ್ಲಿ ತಮ್ಮ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ ‘ಹರ್ ಘರ್ ತಿರಂಗಾ’ ಆಂದೋಲನವನ್ನು ಬೆಂಬಲಿಸುವಂತೆ ಶ್ರೀ ಮೋದಿಯವರು ನಾಗರಿಕರನ್ನು ಆಗ್ರಹಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿ:

“ಪಿಂಗಲಿ ವೆಂಕಯ್ಯನವರನ್ನು ಅವರ ಜನ್ಮದಿನದಂದು ಸ್ಮರಿಸುತ್ತೇನೆ.

ನಮಗೆ ತ್ರಿವರ್ಣ ಧ್ವಜವನ್ನು ನೀಡುವಲ್ಲಿ ಅವರ ಪ್ರಯತ್ನ ಅಪಾರವಾದದ್ದು, ಸದಾ ನೆನಪಿನಲ್ಲಿ ಉಳಿಯುವಂತಹದು.” 

‘ಹರ್ ಘರ್ ತಿರಂಗಾ’ ಚಳವಳಿಯನ್ನು ಬೆಂಬಲಿಸಿ, ಆಗಸ್ಟ್ 9 ಮತ್ತು 15ರ ನಡುವೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ! ನಿಮ್ಮ ಸೆಲ್ಫಿಯನ್ನು http://harghartiranga.com ನಲ್ಲಿ ಹಂಚಿಕೊಳ್ಳಲು ಮರೆಯದಿರಿ” ಎಂದು ತಿಳಿಸಿದ್ದಾರೆ.
 

 

 

*****