Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಾಲಿ ಮೆಟಾಲಿಕ್ ಸಣ್ಣ ಗುಂಡುಗಳ ಹೊರತೆಗೆಯಲು ಭಾರತ ಮತ್ತು ಅಂತಾರಾಷ್ಟ್ರೀಯ ಸೀಬೆಡ್ ಪ್ರಾಧಿಕಾರದೊಂದಿಗಿನ ಒಪ್ಪಂದದ ವಿಸ್ತರಣೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪಾಲಿ ಮೆಟಾಲಿಕ್ ಸಣ್ಣ ಗುಂಡುಗಳನ್ನು ಮುಂದಿನ 5 ವರ್ಷದ ಅವಧಿಗೆ(2017-22) ಹೊರತೆಗೆಯಲು ಭೂ ವಿಜ್ಞಾನಗಳ ಸಚಿವಾಲಯ, ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸೀಬೆಡ್ ಪ್ರಾಧಿಕಾರ (ಐ.ಎಸ್.ಎ.) ನಡುವಿನ ಕರಾರನ್ನು ವಿಸ್ತರಣೆ ಮಾಡಲು ತನ್ನ ಒಪ್ಪಿಗೆ ಸೂಚಿಸಿದೆ. ಈ ಹಿಂದಿನ ಕರಾರು 2017ರ ಮಾರ್ಚ್ 24ಕ್ಕೆ ಕೊನೆಗೊಳ್ಳಲಿದೆ.
ಈ ಕರಾರು ವಿಸ್ತರಣೆಯೊಂದಿಗೆ ಹಿಂದೂ ಮಹಾಸಾಗರದ ಕೇಂದ್ರ ಪ್ರದೇಶದಲ್ಲಿ ಮಂಜೂರಾಗಿರುವ ಪ್ರದೇಶದಲ್ಲಿ ಪಾಲಿ ಮೆಟಾಲಿಕ್ ಸಣ್ಣ ಗುಂಡುಗಳನ್ನು ಹೊರತೆಗೆಯುವ ಭಾರತದ ವಿಶಿಷ್ಟ ಹಕ್ಕು ಮುಂದುವರಿಯಲಿದೆ ಮತ್ತು ರಾಷ್ಟ್ರದ ವ್ಯಾಪ್ತಿಯ ಹೊರಗೆ ವಾಣಿಜ್ಯ ಮತ್ತು ಕಾರ್ಯತಂತ್ರಾತ್ಮಕ ಮೌಲ್ಯದ ಸಂಪನ್ಮೂಲಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತದೆ. ಅಲ್ಲದೆ, ಇತರ ಅಂತಾರಾಷ್ಟ್ರೀಯ ಚಟುವಟಿಕೆದಾರರು ಸಕ್ರಿಯವಾಗಿರುವ ಹಿಂದೂ ಮಹಾಸಾಗರದಲ್ಲಿ ಭಾರತದ ಅಸ್ತಿತ್ವವನ್ನು ಇದು ಹೆಚ್ಚಿಸಲು ಭಾರತಕ್ಕೆ ಹೆಚ್ಚಿನ ಕಾರ್ಯತಂತ್ರಾತ್ಮಕ ಮಹತ್ವ ಒದಗಿಸುತ್ತದೆ.

ಹಿನ್ನೆಲೆ:

ಪಾಲಿ ಮೆಟಾಲಿಕ್ ಸಣ್ಣ ಗುಂಡುಗಳು (ಮ್ಯಾಂಗನೀಸ್ ಗುಂಡುಗಳು ಎಂದೂ ಕರೆಯಲಾಗುವ) ಗಳು ಆಲುಗಡ್ಡೆ ರೂಪದಲ್ಲಿರುತ್ತವೆ, ಬಹುತೇಕ ರಂಧ್ರವನ್ನೂ ಹೊಂದಿರುವ ಇವು ವಿಶ್ವದ ಸಾಗರಗಳ ಆಳ ಸಮುದ್ರದ ರತ್ನಗರ್ಭದಲ್ಲಿ ಹೇರಳವಾಗಿ ದೊರಕುತ್ತವೆ. ಮ್ಯಾಂಗನೀಸ್ ಮತ್ತು ಕಬ್ಬಿಣ ಅಲ್ಲದೆ ಅವುಗಳಲ್ಲಿ ನಿಕಲ್, ತಾಮ್ರ, ಕೋಬಾಲ್ಟ್, ಸೀಸ, ಮಾಲಿಬ್ಡಿನಮ್, ಕ್ಯಾಡ್ಮಿಯಂ, ಕೊಂಚ, ಟೈಟಾನಿಯಂ ಸಹ ಇರುತ್ತವೆ. ಈ ಪೈಕಿ ನಿಕಲ್, ಕೋಬಾಲ್ಟ್ ಮತ್ತು ತಾಮ್ರವನ್ನು ಆರ್ಥಿಕ ಮತ್ತು ಕಾರ್ಯತಂತ್ರಾತ್ಮಕ ಮಹತ್ವದ್ದೆಂದು ಪರಿಗಣಿಸಲಾಗುತ್ತದೆ. ಭಾರತವು ಹಿಂದೂ ಮಹಾಸಾಗರದ ಕೇಂದ್ರ ತಟ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಸೀ ಬೆಡ್ ಪ್ರಾಧಿಕಾರ (ಭಾರತವೂ ಒಂದು ಪಕ್ಷಕಾರನಾಗಿರುವ ಸಂಸ್ಥೆಯೊಂದನ್ನು ಸಾಗರ ಕಾನೂನಿನ ಸಮಾವೇಶದ ಅಡಿಯಲ್ಲಿ ಸ್ಥಾಪಿಸಲಾಯಿತು)ದೊಂದಿಗೆ ಪಾಲಿಮೆಟಾಲಿಕ್ ಸಣ್ಣ ಗುಂಡುಗಳ ಹೊರತೆಗೆಯಲು 15 ವರ್ಷಗಳ ಒಪ್ಪಂದಕ್ಕೆ ಸಂಪುಟದ ಅನುಮೋದನೆಯೊಂದಿಗೆ 2002ರ ಮಾರ್ಚ್ 25ರಂದು ಅಂಕಿತ ಹಾಕಿತ್ತು. ಭಾರತವು ಪ್ರಸ್ತುತ ತನ್ನ ದಕ್ಷಿಣ ತುದಿಯಿಂದ 2000 ಕಿಲೋ ಮೀಟರ್ ದೂರದಲ್ಲಿ ಪಿ.ಎಂ.ಎನ್. ಹೊರತೆಗೆಯಲು 75,000 ಚದರ ಕಿಲೋ ಮೀಟರ್ ಪ್ರದೇಶವನ್ನು ಹೊಂದಿದೆ.

ಭೂ ವಿಜ್ಞಾನಗಳ ಸಚಿವಾಲಯವು ಪಾಲಿಮೆಟಾಲಿಕ್ ಸಣ್ಣ ಗುಂಡುಗಳ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಅಂದರೆ ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆ (ಎನ್.ಐ.ಓ.), ಖನಿಜ ಮತ್ತು ಲೋಹ ತಂತ್ರಜ್ಞಾನ (ಐ.ಎಂ.ಎಂ.ಟಿ.), ರಾಷ್ಟ್ರೀಯ ಮೆಟಲರ್ಜಿಕಲ್ ಪ್ರಯೋಗಾಲಯ (ಎನ್.ಎಂ.ಎಲ್.), ಅಂಟಾರ್ಕಟಿಕ ಮತ್ತು ಸಾಗರ ಸಂಶೋಧನೆ ರಾಷ್ಟ್ರೀಯ ಕೇಂದ್ರ (ಎನ್.ಸಿ.ಎ.ಓ.ಆರ್.), ಸಾಗರ ತಂತ್ರಜ್ಞಾನದ ರಾಷ್ಟ್ರೀಯ ಕೇಂದ್ರ (ಎನ್.ಐ.ಓ.ಟಿ.) ಇತ್ಯಾದಿಗಳೊಂದಿಗೆ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ಸಮೀಕ್ಷೆ ಮತ್ತು ಹೊರತೆಗೆಯುವ, ಪರಿಸರ ಪರಿಣಾಮ ಅಳೆಯುವ, ತಂತ್ರಜ್ಞಾನ ಅಭಿವೃದ್ಧಿ (ಗಣಿ ಮತ್ತು ಲೋಹಶಾಸ್ತ್ರ)ಕೈಗೊಳ್ಳತ್ತದೆ. ಭಾರತವು ಕರಾರಿನ ಎಲ್ಲ ಜವಾಬ್ದಾರಿಗಳನ್ನೂ ಪೂರೈಸುತ್ತಿದೆ.