Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಾಲಿಯಲ್ಲಿ ಟಿಪಿಟಕ ಪ್ರತಿ ನೀಡಿದ ಥಾಯ್ಲೆಂಡ್ ಪ್ರಧಾನಮಂತ್ರಿ ಅವರಿಗೆ ಪ್ರಧಾನಮಂತ್ರಿ‌ ಶ್ರೀ ನರೇಂದ್ರ ಮೋದಿ ಧನ್ಯವಾದ

ಪಾಲಿಯಲ್ಲಿ ಟಿಪಿಟಕ ಪ್ರತಿ ನೀಡಿದ ಥಾಯ್ಲೆಂಡ್ ಪ್ರಧಾನಮಂತ್ರಿ ಅವರಿಗೆ ಪ್ರಧಾನಮಂತ್ರಿ‌ ಶ್ರೀ ನರೇಂದ್ರ ಮೋದಿ ಧನ್ಯವಾದ


ಪಾಲಿಯಲ್ಲಿರುವ ಟಿಪಿಟಕದ ಪ್ರತಿಯನ್ನು ನೀಡಿದ ಥಾಯ್ಲೆಂಡ್ ಪ್ರಧಾನಮಂತ್ರಿ ಶ್ರೀಮತಿ ಪೇಟೊಂಗ್ಟಾರ್ನ್ ಶಿನವತ್ರಾ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಭಗವಾನ್ ಬುದ್ಧನ ಬೋಧನೆಗಳ ಸಾರವನ್ನು ಹೊಂದಿರುವ ಪಾಲಿ ಸುಂದರವಾದ ಭಾಷೆ ಎಂದು ಬಣ್ಣಿಸಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಅವರು‌ ಹೀಗೆ ಬರೆದಿದ್ದಾರೆ: 

“ಅತ್ಯಂತ ವಿಶೇಷ ಅಭಿವ್ಯಕ್ತಿ! 

ಪಾಲಿ ಭಾಷೆಯಲ್ಲಿರುವ ಟಿಪಿಟಕ ಪ್ರತಿಯನ್ನು ನೀಡಿದ್ದಕ್ಕಾಗಿ ಪ್ರಧಾನಿ ಪೇಟೊಂಗ್ಟಾರ್ನ್ ಶಿನವತ್ರಾ ಅವರಿಗೆ ನಾನು ಕೃತಜ್ಞನಾಗಿದ್ದೇನೆ.  ಪಾಲಿ ನಿಜಕ್ಕೂ ಸುಂದರ ಭಾಷೆಯಾಗಿದ್ದು, ಅದು ಭಗವಾನ್ ಬುದ್ಧನ ಬೋಧನೆಗಳ ಸಾರವನ್ನು ಹೊಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಕಳೆದ ವರ್ಷ ನಮ್ಮ ಸರ್ಕಾರವು ಪಾಲಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿತ್ತು. ಪ್ರಪಂಚದಾದ್ಯಂತದ ಜನರು ಈ ನಿರ್ಧಾರವನ್ನು ಮೆಚ್ಚಿದ್ದಾರೆ ಮತ್ತು ಇದು ಈ ಭಾಷೆಯಲ್ಲಿ ಸಂಶೋಧನೆ ಮತ್ತು ಅಧ್ಯಯನಕ್ಕೆ ಉತ್ತೇಜನ ನೀಡಿದೆ.

@ingshin”
 

 

*****