ಈ ಕ್ಯಾಂಪಸ್ ಅನ್ನು ಉದ್ಘಾಟಿಸಲು ಇಂದು ಇಲ್ಲಿ ಇರುವುದು ನನಗೆ ಹೆಮ್ಮೆ ಎನಿಸಿದೆ. ಜಾಗತಿಕ ಆರ್ಥಿಕತೆಯಲ್ಲಿ ಹಿಂಜರಿತದ ಕಾಲ ಇದಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ಹೊರಹೊಮ್ಮುತ್ತಿರುವ ಮಾರುಕಟ್ಟೆಗಳೆರಡೂ ನಿಧಾನದ ವೃದ್ಧಿಯನ್ನು ಕಾಣುತ್ತಿವೆ.ಈ ಹಿನ್ನೆಲೆಗೆ ವಿರುದ್ಧವಾಗಿ, ಭಾರತ ಒಂದು ಪ್ರಕಾಶಮಾನ ತಾಣವಾಗಿ ಕಾಣುತ್ತಿದೆ. ವಿಶ್ವದಲ್ಲಿ ಅಂದಾಜು ಮಾಡಲಾಗಿರುವ ವೃದ್ಧಿಯಲ್ಲಿ ಉನ್ನತ ಸ್ಥಾನದಲ್ಲಿಯೇ ಉಳಿದಿದೆ.
ತ್ವರಿತಗತಿಯಲ್ಲಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ರಾಷ್ಟ್ರ ಎಂಬ ಸ್ಥಾನ ಅನಿರೀಕ್ಷಿತವಾಗಿ ಬಂದಿದ್ದಲ್ಲ. ಇದಕ್ಕಾಗಿ ನಾವು ಎಷ್ಟು ದೂರ ಪ್ರಯಾಣಿಸಿದ್ದೇವೆ ಎಂಬುದನ್ನು ನೋಡಿ, ನಾವು 2012-13ರತ್ತ ತಿರುಗಿ ನೋಡಬೇಕು. ನಮ್ಮ ವಿತ್ತೀಯ ಕೊರತೆ ಅಪಾಯದ ಮಟ್ಟ ತಲುಪಿತ್ತು. ರೂಪಾಯಿ ತೀವ್ರವಾಗಿ ಕುಸಿಯುತ್ತಿತ್ತು. ಹಣದುಬ್ಬರ ಅತಿಹೆಚ್ಚಾಗಿತ್ತು. ಚಾಲ್ತಿ ಖಾತೆಯ ಕೊರತೆ ಹೆಚ್ಚುತ್ತಿತ್ತು. ವಿಶ್ವಾಸ ಇಳಿಮುಖವಾಗಿತ್ತು ಮತ್ತು ವಿದೇಶೀ ಹೂಡಿಕೆದಾರರು ಭಾರತದಿಂದ ವಿಮುಖರಾಗಿದ್ದರು. ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತ ಅತ್ಯಂತ ದುರ್ಬಲ ಎಂದು ಪರಿಗಣಿಸಲಾಗಿತ್ತು.
ಮೂರು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಈ ಸರ್ಕಾರ ಆರ್ಥಿಕತೆಯನ್ನು ಪರಿವರ್ತಿಸಿದೆ. ನಾವು ವಿತ್ತೀಯ ಕೊರತೆಯ ಗುರಿಯನ್ನು ಪ್ರತಿವರ್ಷ ಕಡಿತ ಮಾಡುತ್ತಿದ್ದೇವೆ ಮತ್ತು ಅದನ್ನು ಪ್ರತಿವರ್ಷ ಸಾಧಿಸುತ್ತಿದ್ದೇವೆ. ಚಾಲ್ತಿ ಖಾತೆಯ ಕೊರತೆ ಕಡಿಮೆ ಆಗಿದೆ. ಸಾಲ ವಿಮೋಚನೆಗಾಗಿ ವಿಶೇಷ ಕರೆನ್ಸಿ ಸ್ವಾಪ್ ಅಡಿಯಲ್ಲಿ 2013 ರಲ್ಲಿಕೈಗೊಂಡ ನಿರ್ಧಾರದ ನಂತರವೂವಿದೇಶಿ ವಿನಿಮಯ ಮೀಸಲು ಹೆಚ್ಚಾಗಿಯೇ ಇದೆ. ಹಿಂದಿನ ಸರ್ಕಾರದಲ್ಲಿದ್ದ ಎರಡಂಕಿಯ ಹಣದುಬ್ಬರ ಕಡಿಮೆ ಇದ್ದು, ಶೇಕಡ 4ಕ್ಕಿಂತ ಕಡಿಮೆಯಲ್ಲಿ ಮುಂದುವರಿದಿದೆ. ಸಾರ್ವಜನಿಕ ಹೂಡಿಕೆ ಬೃಹತ್ ಆಗಿ ಹೆಚ್ಚಳವಾಗಿದೆ, ಒಟ್ಟಾರೆ ವಿತ್ತೀಯ ಕೊರತೆ ಕಡಿತ ಮಾಡಲಾಗಿದೆ. ಹಣದುಬ್ಬರದ ಗುರಿಯೊಂದಿಗೆ ಹೊಸ ಹಣಕಾಸು ನೀತಿಯ ಚೌಕಟ್ಟನ್ನು ಕಾಯಿದೆ ರೂಪದಲ್ಲಿ ಪರಿಚಯಿಸಲಾಗಿದೆ. ಸರಕು ಮತ್ತು ಸೇವೆಗಳ ತೆರಿಗೆಯ ಸಾಂವಿಧಾನಿಕ ತಿದ್ದುಪಡಿ ಹಲವು ವರ್ಷಗಳಿಂದ ಬಾಕಿ ಇತ್ತು. ಇದಕ್ಕೆ ಅನುಮೋದನೆ ದೊರೆತಿದ್ದು, ಜಿಎಸ್ಟಿ ಕನಸು ಶೀಘ್ರ ನನಸಾಗಲಿದೆ. ನಾವು ಸುಲಭವಾಗಿ ವಾಣಿಜ್ಯ ನಡೆಸುವ ಸುಧಾರಣೆಯಲ್ಲಿ ಪ್ರಗತಿ ಸಾಧಿಸಿದ್ದೇವೆ. ಈ ಎಲ್ಲ ನೀತಿಗಳ ಫಲವಾಗಿ ವಿದೇಶೀ ನೇರ ಹೂಡಿಕೆ ದಾಖಲೆಯ ಮಟ್ಟ ತಲುಪಿದೆ. ನೋಟು ರದ್ದು ನಿರ್ಧಾರ ವೇಗವಾಗಿ ಚಲಿಸುತ್ತಿದ್ದ ಕಾರನ್ನು ನಿಲ್ಲಿಸಿದೆ ಎಂದು ದೂಷಿಸುವ ಟೀಕಾಕಾರರು ಕೂಡ ನಮ್ಮ ಪ್ರಗತಿಯ ವೇಗವನ್ನು ಅನುಮೋದಿಸಿದ್ದಾರೆ.
ನಾನು ಒಂದು ವಿಚಾರ ಸ್ಪಷ್ಟಪಡಿಸುತ್ತೇನೆ: ಈ ಸರ್ಕಾರವು ಭಾರತದ ದೀರ್ಘಾವಧಿಯ ಉಜ್ವಲ ಭವಿಷ್ಯಕ್ಕಾಗಿ ಬಲವಾದ ಮತ್ತು ವಿವೇಕಯುತವಾದ ಆರ್ಥಿಕ ನೀತಿಗಳನ್ನು ಮುಂದುವರಿಸುತ್ತದೆ. ನಾವು ಅಲ್ಪಕಾಲೀನ ರಾಜಕೀಯ ಲಾಭಕ್ಕಾಗಿ ನಿರ್ಧಾರ ಕೈಗೊಳ್ಳುವುದಿಲ್ಲ. ನಾವು ದೇಶದ ಹಿತಕ್ಕೆ ಸಂಬಂಧಿಸಿದ ಕಠಿಣ ನಿರ್ಧಾರ ಕೈಗೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ. ಹೆಚ್ಚಿನ ಮೌಲ್ಯದ ನೋಟುಗಳ ಅಮಾನ್ಯ ಇದಕ್ಕೆ ಒಂದು ಉದಾಹರಣೆ. ಇದರಿಂದ ಅಲ್ಪ ಕಾಲ ತೊಂದರೆ ಆಗುತ್ತದೆ, ಆದರೆ, ಇದು ದೀರ್ಘಾವಧಿಯಲ್ಲಿ ಲಾಭ ತರುತ್ತದೆ.
ಹಣಕಾಸು ಮಾರುಕಟ್ಟೆಗಳು ಆಧುನಿಕ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬಹುದು. ಅವು ಉಳಿತಾಯವನ್ನು ಕ್ರೋಡೀಕರಿಸುವಲ್ಲಿ ಸಹಾಯ ಮಾಡಬಹುದು. ಉತ್ಪಾದಕವಾದ ಹೂಡಿಕೆಗೆ ಈ ಉಳಿತಾಯವನ್ನು ತೊಡಗಿಸಬಹುದು.
ಆದಾಗ್ಯೂ, ಸೂಕ್ತವಾಗಿ ನಿಯಂತ್ರಿಸದಿದ್ದರೆ ಹಣಕಾಸು ಮಾರುಕಟ್ಟೆಗಳು ಕೂಡ ಹಾನಿ ತರಬಲ್ಲವು ಎಂಬುದನ್ನು ಇತಿಹಾಸ ತೋರಿಸಿದೆ, ಉತ್ತಮ ನಿಯಂತ್ರಣದ ಖಾತ್ರಿಗಾಗಿ ಭಾರತೀಯ ಸೆಕ್ಯೂರಿಟೀಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್- ಸೆಬಿ-ಯನ್ನು ಸರ್ಕಾರ ಸ್ಥಾಪಿಸಿದೆ. ಸೆಕ್ಯೂರಿಟಿ ಮಾರುಕಟ್ಟೆಯ ಆರೋಗ್ಯಪೂರ್ಣ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿಯೂ ಸೆಬಿಯ ಪಾತ್ರವಿದೆ.
ಇತ್ತೀಚೆಗೆ, ಫಾರ್ವರ್ಡ್ ಮಾರುಕಟ್ಟೆಗಳ ಆಯೋಗವನ್ನು ರದ್ದುಗೊಳಿಸಲಾಗಿದೆ. ಸೆಬಿಗೆ ಸರಕು ಉತ್ಪನ್ನಗಳ ನಿಯಂತ್ರಣದ ಕಾರ್ಯವನ್ನೂ ವಹಿಸಲಾಗಿದೆ. ಇದು ದೊಡ್ಡ ಸವಾಲಾಗಿದೆ. ಸರಕು ಮಾರುಕಟ್ಟೆಯಲ್ಲಿ ಸ್ಪಾಟ್ ಮಾರುಕಟ್ಟೆಯನ್ನು ಸೆಬಿ ನಿಯಂತ್ರಿಸುವುದಿಲ್ಲ. ಕೃಷಿ ಮಾರುಕಟ್ಟೆಗಳನ್ನು ಆಯಾ ರಾಜ್ಯಗಳು ನಿಯಂತ್ರಿಸುತ್ತವೆ. ಹಲವು ಸರಕುಗಳನ್ನು ಹೂಡಿಕಾದರರ ಬದಲಾಗಿ ನೇರವಾಗಿ ಬಡವರು ಮತ್ತು ಅಗತ್ಯ ಇರುವವರು ಖರೀದಿಸುತ್ತಾರೆ. ಹೀಗಾಗಿ ಸರಕು ಉತ್ಪನ್ನಗಳ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಹೆಚ್ಚು ಸಂವೇದನಾತ್ಮಕವಾಗಿದೆ.
ಹಣಕಾಸು ಮಾರುಕಟ್ಟೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲು, ಅದರಲ್ಲಿ ಭಾಗವಹಿಸುವವರಿಗೆ ಸೂಕ್ತವಾದ ಮಾಹಿತಿ ಅಗತ್ಯ. ರಾಷ್ಟ್ರೀಯ ಸೆಕ್ಯೂರಿಟಿ ಮಾರುಕಟ್ಟೆಗಳ ಸಂಸ್ಥೆ ವಿವಿಧ ಸ್ಪರ್ಧಿಗಳನ್ನು ಶಿಕ್ಷಿತರನ್ನಾಗಿಸುವ ಮತ್ತು ಅವರಿಗೆ ಕೌಶಲ ಪ್ರಮಾಣಪತ್ರ ನೀಡುವ ಕಾರ್ಯ ಮಾಡುತ್ತಿದೆ.ಇಂದು, ನಮ್ಮ ಅಭಿಯಾನ ಕೌಶಲ ಭಾರತವಾಗಿದೆ. ಭಾರತೀಯ ಯುವಕರು, ವಿಶ್ವದ ಯಾವುದೇ ಮೂಲೆಯಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಸ್ಪರ್ಧಿಸುವಲ್ಲಿ ಸಮರ್ಥರಾಗಬೇಕು. ಈ ಸಂಸ್ಥೆ ಅಂಥ ಸಾಮರ್ಥ್ಯ ವರ್ಧನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಈ ವರ್ಷ ಪರೀಕ್ಷೆ ತೆಗೆದುಕೊಂಡ ಒಂದು ಲಕ್ಷ ಐವತ್ತು ಸಾವಿರ ಅಭ್ಯರ್ಥಿಗಳು ಎನ್.ಐ.ಎಸ್.ಎಂ.ಪರೀಕ್ಷೆ ತೆಗೆದುಕೊಂಡಿದ್ದರು ಎಂದು ನನಗೆ ಮಾಹಿತಿ ನೀಡಲಾಗಿದೆ. ಈವರೆಗೆ 5 ಲಕ್ಷ ಅಭ್ಯರ್ಥಿಗಳು ಎನ್.ಐ.ಎಸ್.ಎಂ.ನಿಂದ ಪ್ರಮಾಣಪತ್ರ ಪಡೆದಿದ್ದಾರೆ.
ಭಾರತವು ತನ್ನ ಉತ್ತಮ ನಿಯಂತ್ರಿತ ಸೆಕ್ಯೂರಿಟಿ ಮಾರುಕಟ್ಟೆಗಳಿಂದಾಗಿ ಒಳ್ಳೆಯ ಹೆಸರು ಗಳಿಸಿದೆ. ವಿದ್ಯುನ್ಮಾನ ಮಾಧ್ಯಮದ ಟ್ರೇಡಿಂಗ್ ವಿಸ್ತರಣೆ ಮತ್ತು ಭಂಡಾರಗಳ ಬಳಕೆಯಿಂದ ನಮ್ಮ ಮಾರುಕಟ್ಟೆಗಳು ಹೆಚ್ಚು ಪಾರದರ್ಶಕವಾಗಿವೆ. ಸೆಬಿ ಒಂದು ಸಂಸ್ಥೆಯಾಗಿ ಈ ಗೌರವ ಪಡೆಯಬಹುದಾಗಿದೆ.
ಆದಾಗ್ಯೂ, ನಮ್ಮ ಸೆಕ್ಯೂರಿಟಿ ಮತ್ತು ಸರಕು ಮಾರುಕಟ್ಟೆಗಳು ಇನ್ನೂ ದೂರ ಕ್ರಮಿಸಬೇಕಾಗಿದೆ. ನಾನು ಆರ್ಥಿಕ ವಾರ್ತಾ ಪತ್ರಿಕೆಗಳನ್ನು ನೋಡಿದಾಗ, ನಾನು ಆಗಾಗ್ಗೆ ಐಪಿಓಗಳ ಯಶಸ್ಸಿನ ಬಗ್ಗೆ ಮತ್ತು ಹೇಗೆ ಕೆಲವು ಬುದ್ಧಿವಂತ ಉದ್ದಿಮೆದಾರರು ಅತಿಬೇಗ ಕೋಟ್ಯಧಿಪತಿಗಳಾದರು ಎಂಬುದನ್ನು ಓದುತ್ತೇನೆ. ನೀವೆಲ್ಲಾ ತಿಳಿದಿರುವಂತೆ, ನನ್ನ ಸರ್ಕಾರ ನವೋದ್ಯಮಗಳಿಗೆ ಉತ್ತೇಜನ ನೀಡಲು ಉತ್ಸುಕವಾಗಿದೆ. ಸ್ಟಾಕ್ ಮಾರುಕಟ್ಟೆಗಳು ನವೋದ್ಯಮದ ಪರಿಸರವ್ಯವಸ್ಥೆಗೆ ಅವಶ್ಯವಾಗಿವೆ. ಆದಾಗ್ಯೂ, ಸೆಕ್ಯೂರಿಟಿ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಹೂಡಿಕೆದಾರರು ಅಥವಾ ಆರ್ಥಿಕ ತಜ್ಞರ ಯಶಸ್ವಿ ಎಂದು ಪರಿಗಣಿಸದಹೊರತು ಇದಿಷ್ಟೇ ಸಾಕಾಗುವುದಿಲ್ಲ. ಐಶ್ವರ್ಯ ಸೃಷ್ಟಿ ಒಳ್ಳೆಯದು, ಆದರೆ, ನನಗೆ ಅದು ನನ್ನ ಮುಖ್ಯ ಉದ್ದೇಶವಲ್ಲ. ನಮ್ಮ ಸೆಕ್ಯೂರಿಟಿ ಮಾರುಕಟ್ಟೆಯ ನಿಜವಾದ ಮೌಲ್ಯ ಅವುಗಳ ಕೊಡುಗೆಯನ್ನು ಅವಲಂಬಿಸಿದೆ.
ಹೀಗಾಗಿ, ನಾನು ಹಣಕಾಸು ಮಾರುಕಟ್ಟೆಗಳು ಸಂಪೂರ್ಣ ಯಶಸ್ವಿಯಾಗಿವೆ ಎಂದು ಪರಿಗಮಿಸುವ ಮುನ್ನ, ಅವರು ಸವಾಲುಗಳನ್ನು ಪೂರೈಸಬೇಕಿದೆ.
ಮೊದಲನೆಯದಾಗಿ, ನಮ್ಮ ಸ್ಟಾಕ್ ಮಾರುಕಟ್ಟೆಗಳ ಪ್ರಥಮ ಗುರಿ, ಉತ್ಪಾದಕ ಉದ್ದೇಶಕ್ಕಾಗಿ ಬಂಡವಾಳ ಎತ್ತುವುದಾಗಿರಬೇಕು. ಉತ್ಪನ್ನಗಳನ್ನು ಅಪಾಯ ನಿರ್ವಹಣೆಯಲ್ಲಿ ಬಳಕೆ ಮಾಡುವಂತಿರಬೇಕು. ಆದರೆ ಹಲವು ಜನರು ಸರಕುಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿವೆ ಎಂದು ಭಾವಿಸಿದ್ದಾರೆ ಮತ್ತು ಬಾಲವೇ ನಾಯಿಯನ್ನು ಅಲುಗಾಡಿಸುತ್ತಿದೆ ಎಂದು ತಿಳಿದಿದ್ದಾರೆ. ನಾವು ಹೇಗೆ ಬಂಡವಾಳ ಮಾರುಕಟ್ಟೆ ಬಂಡವಾಳ ಒದಗಿಸುವಲ್ಲಿ ಹೇಗೆ ಪ್ರಮುಖ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿಚಾರಮಾಡಬೇಕಾಗಿದೆ.
ನಮ್ಮ ಜನಸಂಖ್ಯೆ ವಿಶಾಲವಾಗಿ ಬಹುಸಂಖ್ಯೆಗೆ ಲಾಭವಾಗುವಂಥ ಅದರಲ್ಲೂ, ಮೂಲಸೌಕರ್ಯ ಯೋಜನೆಗಳಿಗೆ ಬಂಡವಾಳದ ಯಶಸ್ವೀ ಎತ್ತುವಳಿ ಮಾಡಿ ನಮ್ಮ ಮಾರುಕಟ್ಟೆಗಳು ಸಾಮರ್ಥ್ಯವನ್ನು ತೋರಿಸಬೇಕಾಗಿದೆ ಎಂದು ನಾನು ಉಲ್ಲೇಖಿಸುತ್ತೇನೆ. ಇಂದು, ನಮ್ಮ ಬಹುತೇಕ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ಅಥವಾ ಬ್ಯಾಂಕ್ ಗಳ ಮೂಲಕ ಹಣಕಾಸು ಲಭ್ಯವಾಗುತ್ತಿದೆ. ಮೂಲಸೌಕರ್ಯಕ್ಕೆ ಹಣಕಾಸು ಒದಗಿಸಲು ಬಂಡವಾಳ ಮಾರುಕಟ್ಟೆಯನ್ನು ಬಳಕೆ ಮಾಡಿಕೊಂಡಿದ್ದು ಅಪರೂಪ. ಮೂಲಸೌಕರ್ಯ ಯೋಜನೆಗಳು ಕಾಣುವಂತಿರಬೇಕು, ಇದು ಮಹತ್ವವಾದ್ದು, ಇದರ ಸಾಲ ದೀರ್ಘಾವಧಿಯದಾಗಿರುತ್ತದೆ. ನಾವು ಮಾರುಕಟ್ಟೆಯೊಂದಿಗೆ ಬಾಂಡ್ ಗಳನ್ನು ದೀರ್ಘಾವಧಿವರೆಗೆ ಲಿಕ್ವಿಡ್ ಆಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ವಿವಿಧ ಕಾರಣಗಳನ್ನು ಕೊಡಲಾಗುತ್ತದೆ. ಆದರೆ, ನೀವು ನಿಜಕ್ಕೂ ನಿಮ್ಮ ಮನಸ್ಸು ನೆಟ್ಟರೆ, ಹಣಕಾಸು ಮೆದುಳುಗಳು ಈ ಸಮಸ್ಯೆಯನ್ನು ಖಂಡಿತಾ ಪರಿಹರಿಸುತ್ತವೆ. ಬಂಡವಾಳ ಮಾರುಕಟ್ಟೆಯನ್ನು ಮೂಲಸೌಕರ್ಯದ ದೀರ್ಘಾವಧಿಯ ಬಂಡವಾಳ ಒದಗಿಸಲು ಅನುವು ಮಾಡಲು ದಾರಿಗಳನ್ನು ಹುಡುಕಬೇಕು ಎಂದು ನಾನು ಕರೆ ನೀಡುತ್ತೇನೆ. ಇಂದು, ಕೇವಲ ಸರ್ಕಾರ ಅಥವಾ ಹೊರಗಿನ ಅಂದರೆ ವಿಶ್ವಬ್ಯಾಂಕ್ ಅಥವಾ ಜೆಐಸಿಎ ಮಾತ್ರ ಮೂಲಸೌಕರ್ಯಕ್ಕೆ ದೀರ್ಘಾವಧಿಯ ಸಾಲವನ್ನು ನೀಡುತ್ತವೆ. ನಾವು ಅದರಿಂದ ಹೊರಗೆ ಬರಬೇಕು. ಬಾಂಡ್ ಮಾರುಕಟ್ಟೆಗಳು ಮೂಲಸೌಕರ್ಯಕ್ಕೆ ದೀರ್ಘಾವಧಿ ಹಣಕಾಸು ಮೂಲವಾಗಿ ಪರಿವರ್ತನೆ ಆಗಬೇಕು.
ನಿಮಗೆಲ್ಲರಿಗೂ ತಿಳಿದಂತೆ, ನಗರ ಮೂಲಸೌಕರ್ಯ ಸುಧಾರಣೆಗಾಗಿ ದೊಡ್ಡ ಬಂಡವಾಳದ ಅಗತ್ಯವಿದೆ. ಇದಕ್ಕಾಗಿ ಸರ್ಕಾರ ಮಹತ್ವಾಕಾಂಕ್ಷೆಯ ಸ್ಮಾರ್ಟ್ ನಗರ ಕಾರ್ಯಕ್ರಮ ಆರಂಭಿಸಿದೆ. ಈ ನಿಟ್ಟಿನಲ್ಲಿ, ನಾನು, ಈಗಲೂ, ನಾವು ಮುನಿಸಿಪಲ್ ಬಾಂಡ್ ಗಳ ಮಾರುಕಟ್ಟೆ ಹೊಂದಿಲ್ಲ ಎಂದು ನನಗೆ ಅಸಮಾಧಾನವಾಗಿದೆ. ಇಂಥ ಮಾರುಕಟ್ಟೆಯನ್ನು ಸೃಷ್ಟಿಸಲು ನಮಗೆ ಕೆಲವು ಸಮಸ್ಯೆಗಳು ಹಾಗೂ ಕಷ್ಟಗಳೂ ಇವೆ. ಆದರೆ, ಒಂದು ತಜ್ಞ ನಾವಿನ್ಯತೆಯ ನಿಜವಾದ ಪರೀಕ್ಷೆ ಸಂಕೀರ್ಣವಾದ ಸಮಸ್ಯೆಯನ್ನು ಬಗೆಹರಿಸಿದಾಗ ಆಗುತ್ತದೆ. ಸೆಬಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಗಳು ಒಂದು ವರ್ಷದೊಳಗೆ ಭಾರತದಲ್ಲಿ ಮುನಿಸಿಪಲ್ ಬಾಂಡ್ ಗಲನ್ನು ಕನಿಷ್ಠ 10 ನಗರಗಳಲ್ಲಿ ಬಿಡುಗಡೆ ಮಾಡುವ ಖಾತ್ರಿ ಒದಗಿಸಬಲ್ಲವೇ?
ಎರಡನೆಯದಾಗಿ, ಮಾರುಕಟ್ಟೆಗಳು ನಮ್ಮ ಸಮಾಜದ ಅತಿ ದೊಡ್ಡ ವರ್ಗಕ್ಕೆ ಅಂದರೆ ನಮ್ಮ ರೈತರಿಗೆ ಲಾಭವನ್ನು ಒದಗಿಸಬೇಕು. ಯಶಸ್ಸಿನ ನಿಜವಾದ ಅಳತೆ ಗ್ರಾಮಗಳ ಪರಿಣಾಮದಲ್ಲಿ ಆಗಬೇಕೆ ಹೊರತು, ದಲಾಲ್ ಸ್ಟ್ರೀಟ್ ಅಥವಾ ದೆಹಲಿಯ ಲುಟ್ಯೆನ್ಸ್ ನಲ್ಲಿನ ಪರಿಣಾಮದಿಂದ ಆಗಬಾರದು. ಆ ಮಾನದಂಡದಲ್ಲಿ, ನಾವು ಬಹಳ ದೂರ ಕ್ರಮಿಸಬೇಕಾಗಿದೆ. ನಮ್ಮ ಸ್ಟಾಕ್ ಮಾರುಕಟ್ಟೆಗಳು ನಾವಿನ್ಯದ ಮಾರ್ಗದಲ್ಲಿ ಬಂಡವಾಳವನ್ನು ಕೃಷಿ ಯೋಜನೆಗಳಿಗೆ ಎತ್ತುವಳಿ ಮಾಡಬೇಕು. ನಮ್ಮ ಸರಕು ಮಾರುಕಟ್ಟೆಗಳು, ನಮ್ಮ ರೈತರಿಗೆ ಉಪಯುಕ್ತವಾಗಬೇಕು, ಇದು ಕೇವಲ ಏರಿಳಿತಕ್ಕೆ ದಾರಿ ಆಗಬಾರದು. ರೈತರು ತಮ್ಮ ರಿಸ್ಕ್ ಕಡಿಮೆ ಮಾಡಿಕೊಳ್ಳಲು ಉತ್ಪನ್ನಗಳನ್ನು ಬಳಸಬೇಕು ಎಂದು ಜನ ಹೇಳುತ್ತಾರೆ. ಆದರೆ, ರೂಢಿಯಲ್ಲಿರುವಂತೆ ಯಾವುದೇ ರೈತರು ಉತ್ಪನ್ನ ಬಳಸುತ್ತಾರೆಯೇ. ಇದು ವಾಸ್ತವ. ನಾವು ಸರಕು ಮಾರುಕಟ್ಟೆ ರೈತರಿಗೆ ನೇರವಾಗಿ ಉಪಯುಕ್ತವಾಗುವಂತೆ ಮಾಡದ ಹೊರತು, ಅದು ನಮ್ಮ ಆರ್ಥಿಕತೆಯಲ್ಲಿ ಒಂದು ಬೆಲೆಬಾಳುವ ಆಭರಣವಷ್ಟೇ ಹೊರತು ಉಪಯುಕ್ತ ಸಾಧನವಾಗುವುದಿಲ್ಲ. ನಮ್ಮ ಸರ್ಕಾರ ಇ-ನಾಮ್ – ರಾಷ್ಟ್ರೀಯ ಕೃಷಿ ವಿದ್ಯುನ್ಮಾನ ಮಾರುಕಟ್ಟೆ ಪರಿಚಯಿಸಿದೆ. ಇ ನಾಮ್ ನಂಥ ಸ್ಪಾಟ್ ಮಾರುಕಟ್ಟೆಯತ್ತ ಮತ್ತು ಉತ್ಪನ್ನ ಮಾರುಕಟ್ಟೆಗಳು ರೈತರಿಗೆ ಉಪಯುಕ್ತವಾಗುವಂತೆ ಮಾಡಲು ಸೆಬಿ ಇವುಗಳ ನಡುವೆ ಆಪ್ತವಾಗಿ ಕೆಲಸ ಮಾಡಬೇಕು.
ಮೂರನೆಯದಾಗಿ, ಯಾರು ಹಣಕಾಸು ಪೇಟೆಯಿಂದ ಲಾಭ ಮಾಡಿಕೊಂಡಿರುತ್ತಾರೋ ಅವರು ಯುಕ್ತವಾದ ಕೊಡುಗೆಯನ್ನು ತೆರಿಗೆಯ ಮೂಲಕ ದೇಶ ನಿರ್ಮಾಣಕ್ಕೆ ನೀಡಬೇಕು. ಹಲವು ಕಾರಣಗಳಿಂದ, ಮಾರುಕಟ್ಟೆಯಿಂದ ಲಾಭ ಮಾಡಿಕೊಂಡವರು ತೆರಿಗೆಗೆ ನೀಡುತ್ತಿರುವ ಕೊಡುಗೆ ಅತ್ಯಲ್ಪವಾಗಿದೆ. ಕೆಲವು ಮಟ್ಟಿಗೆ ಇದು ಅಕ್ರಮ ಚಟುವಟಿಕೆ ಮತ್ತು ವಂಚನೆಯಿಂದಲೂ ಆಗುತ್ತಿದೆ. ಇದನ್ನು ತಡೆಯಲು ಸೆಬಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಕೆಲ ಮಟ್ಟಿಗೆ ಅಲ್ಪ ತೆರಿಗೆಯ ಕೊಡುಗೆಯೂ ನಮ್ಮ ತೆರಿಗೆ ಕಾನೂನುಗಳ ಸ್ವರೂಪದಿಂದ ಆಗಿದೆ. ಕಡಿಮೆ ಅಥವಾ ಶೂನ್ಯ ತೆರಿಗೆ ದರವನ್ನು ಕೆಲವು ಬಗೆಯ ಹಣಕಾಸು ಆದಾಯಕ್ಕೆ ನೀಡಲಾಗಿದೆ. ನಮ್ಮ ಬೊಕ್ಕಸಕ್ಕೆ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವವರ ಕೊಡುಗೆಯ ಬಗ್ಗೆ ಚಿಂತಿಸುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಾವು ಇದನ್ನು ಮುಕ್ತವಾಗಿ, ಸಮರ್ಥವಾಗಿ ಮತ್ತು ಪಾರದರ್ಶಕ ಮಾರ್ಗದಲ್ಲಿ ಹೆಚ್ಚಿಸುವ ಪದ್ಧತಿಯನ್ನು ಪರಿಗಣಿಸಬೇಕು. ಈ ಮುನ್ನ, ಕೆಲವು ಹೂಡಿಕೆದಾರರು ಕೆಲವು ತೆರಿಗೆ ಒಪ್ಪಂದಗಳ ಬಳಸಿಕೊಂಡು ಅನುಚಿತವಾದ ವ್ಯವಹಾರ ನಡೆಸುತ್ತಿದ್ದಾರೆ ಎಂದು ಭಾವನೆ ಇತ್ತು. ನಿಮಗೆಲ್ಲಾ ತಿಳಿದಿರುವಂತೆ, ಇಂಥ ಒಪ್ಪಂದಗಳನ್ನು ಈ ಸರ್ಕಾರ ತಿದ್ದುಪಡಿ ಮಾಡಿದೆ. ಈಗ ಹೊಸ ಮತ್ತು ಉತ್ತಮ ವಿನ್ಯಾಸದೊಂದಿಗೆ ಹೊರಬರಲು ಚಿಂತಿಸುವ ಕಾಲ ಬಂದಿದೆ. ಇದು ಸರಳ ಮತ್ತು ಪಾರದರ್ಶಕವಷ್ಟೇ ಅಲ್ಲ, ಮುಕ್ತ ಮತ್ತು ಪ್ರಗತಿದಾಯಕವೂ ಆಗಿರಬೇಕು.
ಸ್ನೇಹಿತರೆ,
ನಮ್ಮ ಹಣಕಾಸು ಮಾರುಕಟ್ಟೆಗಳು ಆಯವ್ಯಯದೊಂದಿಗೆ ಮಹತ್ವದ ನಂಟು ಹೊಂದಿವೆ ಎಂಬುದನ್ನು ನಾನು ತಿಳಿದಿದ್ದೇನೆ. ಆಯವ್ಯಯದ ಚಕ್ರ ವಾಸ್ತವ ಆರ್ಥಿಕತೆಯ ಮೇಲೆ ಪರಿಣಾಮಬೀರುತ್ತದೆ. ನಮ್ಮ ಹಾಲಿ ಇರುವ ಬಜೆಟ್ ದಿನದರ್ಶಿಯಲ್ಲಿ ಮುಂಗಾರಿನ ಆರಂಭಕ್ಕೆ ವೆಚ್ಚಕ್ಕೆ ಅನುಮೋದನೆ ದೊರಕುತ್ತದೆ. ಸರ್ಕಾರದ ಕಾರ್ಯಕ್ರಮಗಳು ಉತ್ಪಾದಕವಾದ ಮುಂಗಾರು ಪೂರ್ವ ಮಾಸಗಳಲ್ಲಿ ಕ್ರಿಯಾಶೀಲವಾಗಿಲ್ಲ. ಹೀಗಾಗಿ, ಈ ವರ್ಷ ನಾವು ಆಯವ್ಯಯದ ದಿನಾಂಕವನ್ನೇ ಹಿಂದಕ್ಕೆ ತಂದಿದ್ದೇವೆ ಅದರಿಂದ, ಹೊಸ ಆರ್ಥಿಕ ವರ್ಷದ ಆರಂಭದ ಹೊತ್ತಿಗೇ ವೆಚ್ಚಕ್ಕೆ ಅನುಮೋದನೆ ಸಿಗುತ್ತದೆ. ಇದು ನಮ್ಮ ಉತ್ಪಾದಕತೆ ಮತ್ತು ಉತ್ಪತ್ತಿಯನ್ನು ಸುಧಾರಿಸುತ್ತದೆ.
ಸ್ನೇಹಿತರೇ.
ಒಂದು ಪೀಳಿಗೆಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡುವುದು ನನ್ನ ಗುರಿಯಾಗಿದೆ. ಭಾರತವು ವಿಶ್ವದರ್ಜೆಯ ಸೆಕ್ಯೂರಿಟಿ ಮತ್ತು ಸರಕು ಮಾರುಕಟ್ಟೆಗಳ ಹೊರತಾಗ ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಲು ಸಾಧ್ಯವಿಲ್ಲ. ಹೀಗಾಗಿ, ಹಣಕಾಸು ಮಾರುಕಟ್ಟೆಗಳನ್ನು ಹೊಸ ಮನ್ವಂತರಕ್ಕೆ ಹೆಚ್ಚು ಸೂಕ್ತಗೊಳಿಸಲು ನೀವೆಲ್ಲರೂ ಕೊಡುಗೆ ನೀಡುವುದನ್ನು ನಾನು ಎದಿರು ನೋಡುತ್ತಿದ್ದೇನೆ. ನಾನು ಎನ್.ಐ.ಎಸ್.ಎಂ.ಗೆ ಎಲ್ಲ ಯಶಸ್ಸನ್ನು ಕೋರುತ್ತೇನೆ. ನಾನು ಎಲ್ಲರಿಗೂ ಮೇರಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಸಲ್ಲಿಸುತ್ತೇನೆ.
***
AD/SH
India is being seen as a bright spot. Growth is projected to remain among the highest in the world: PM @narendramodi
— PMO India (@PMOIndia) December 24, 2016
India’s place as the fastest growing large economy has not come about by accident: PM @narendramodi
— PMO India (@PMOIndia) December 24, 2016
In 2012-13 fiscal deficit had reached alarming levels.Currency was falling sharply.Inflation was high.Current account deficit was rising: PM
— PMO India (@PMOIndia) December 24, 2016
In less than 3 years, this government has transformed the economy: PM @narendramodi
— PMO India (@PMOIndia) December 24, 2016
Financial markets can play an important role in the modern economy: PM @narendramodi
— PMO India (@PMOIndia) December 24, 2016
However history has shown that financial markets can also do damage if not properly regulated: PM @narendramodi
— PMO India (@PMOIndia) December 24, 2016
For financial markets to function successfully, participants need to be well informed: PM @narendramodi
— PMO India (@PMOIndia) December 24, 2016
India has earned a good name for its well regulated securities markets: PM @narendramodi
— PMO India (@PMOIndia) December 24, 2016
Government is very keen to encourage start-ups. Stock markets are essential for the start-up ecosystem: PM @narendramodi
— PMO India (@PMOIndia) December 24, 2016
Our markets should show that they are able to successfully raise capital for projects benefiting the vast majority of our population: PM
— PMO India (@PMOIndia) December 24, 2016
The true measure of success is the impact in villages, not the impact in Dalal Street or Lutyens’ Delhi: PM @narendramodi
— PMO India (@PMOIndia) December 24, 2016
SEBI should work for closer linkage between spot markets like e-NAM and derivatives markets to benefit farmers: PM @narendramodi
— PMO India (@PMOIndia) December 24, 2016
Those who profit from financial markets must make a fair contribution to nation-building through taxes: PM @narendramodi
— PMO India (@PMOIndia) December 24, 2016
My aim is to make India a developed country in one generation: PM @narendramodi
— PMO India (@PMOIndia) December 24, 2016