ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅನಿಸಾಬಾದ್ ನಲ್ಲಿ ಎಎಐಗೆ ಸೇರಿದಜಮೀನಿಗೆ ಸಮನಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ 11.35 ಎಕರೆ ಅಳತೆಯ ಜಮೀನನ್ನು ವಿನಿಮಯದ ಮೂಲಕ ವರ್ಗಾವಣೆ ಮಾಡಲು ತನ್ನ ಅನುಮೋದನೆ ನೀಡಿದೆ. ಪಟ್ನಾ ವಿಮಾನ ನಿಲ್ದಾಣದಲ್ಲಿನ ಉದ್ದೇಶಿತ ಜಮೀನನ್ನು ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಇತರ ಪೂರಕ ಮೂಲಸೌಕರ್ಯದೊಂದಿಗೆ ನೂತನ ಟರ್ಮಿನಲ್ ನಿರ್ಮಾಣಕ್ಕೆ ಬಳಸಲಾಗುತ್ತದೆ. ರಾಜ್ಯ ಸರ್ಕಾರ ಕೂಡ ಭೂಮಿಯನ್ನು ವರ್ಗಾವಣೆ ಮಾಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕ 3 ದಶಲಕ್ಷ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಿರುತ್ತದೆ, ಇದು ವಿಮಾನ ನಿಲ್ದಾಣ ಸಾಮರ್ಥ್ಯವನ್ನಷ್ಟೇ ಹೆಚ್ಚಿಸುವುದಿಲ್ಲ ಜೊತೆಗೆ, ಶ್ರೀಸಾಮಾನ್ಯನಿಗೆ ಅನುಕೂಲವನ್ನೂ ಒದಗಿಸುತ್ತದೆ.
ಹಿನ್ನೆಲೆ:
ಪಾಟ್ನಾ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಇರುವ ಟರ್ಮಿನಲ್ ಅನ್ನು ವಾರ್ಷಿಕ 0.5 ದಶಲಕ್ಷ ಪ್ರಯಾಣಿಕರ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿತ್ತು ಆದರೆ ಪ್ರಸ್ತುತ ವಾರ್ಷಿಕ 1.5 ದಶಲಕ್ಷ ಪ್ರಯಾಣಿಕರು ಇದನ್ನು ಬಳಸುತ್ತಿದ್ದಾರೆ. ಇದು ಟರ್ಮಿನಲ್ ನಲ್ಲಿ ಹೆಚ್ಚಿನ ಜನದಟ್ಟಣೆಗೆ ಕಾರಣವಾಗಿದೆ.
AKT/VB/SH