Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 15,400 ಕೋಟಿ ರೂಪಾಯಿಗಳ ಬಹು ಸಂಪರ್ಕ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 15,400 ಕೋಟಿ ರೂಪಾಯಿಗಳ ಬಹು ಸಂಪರ್ಕ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ 15,400 ಕೋಟಿ ರೂಪಾಯಿಗಳ ಬಹು ಸಂಪರ್ಕ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾದಲ್ಲಿ 15,400 ಕೋಟಿ ರೂಪಾಯಿಗಳ ಬಹು ಸಂಪರ್ಕ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ನಗರ ಚಲನವಲನ ವಲಯವನ್ನು ಪೂರೈಸುವ ಅಭಿವೃದ್ಧಿ ಯೋಜನೆಗಳಲ್ಲಿ ಮೆಟ್ರೋ ರೈಲು ಮತ್ತು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಸೇರಿವೆ.

ಪ್ರಧಾನಮಂತ್ರಿಯವರು ಎಲ್ಲಾ ಮೆಟ್ರೋ ಯೋಜನೆಗಳ ಅವಲೋಕನವನ್ನು ಮಾಡಿದರು ಮತ್ತು ಕೋಲ್ಕತ್ತಾದಲ್ಲಿ ಭಾರತದ ಮೊದಲ ಅಂಡರ್‌ ವಾಟರ್ ಮೆಟ್ರೋವಾದ ಎಸ್ಪ್ಲೇನೇಡ್ – ಹೌರಾ ಮೈದಾನದ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಿದರು. ಅವರು ತಮ್ಮ ಪ್ರಯಾಣದ ವೇಳೆಯಲ್ಲಿ ಶ್ರಮಿಕರು ಮತ್ತು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಸಾಮಾಜಿಕ ಜಾಲತಾಣ X ನಲ್ಲಿನ ಸರಣಿ ಸಂದೇಶಗಳಲ್ಲಿ ಪ್ರಧಾನಮಂತ್ರಿ ಮಾಹಿತಿ ನೀಡಿದ್ದಾರೆ.

“ಈ ಯುವಕರ ಕಂಪನಿ ಮತ್ತು ಈ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಮೆಟ್ರೋ ಪ್ರಯಾಣವು ಸ್ಮರಣೀಯವಾಗಿದೆ. ನಾವು ಹೂಗ್ಲಿ ನದಿಯ ಕೆಳಗಿರುವ ಸುರಂಗದ ಮೂಲಕವೂ ಪ್ರಯಾಣಿಸಿದೆವು”

“ನಗರದ ಮೆಟ್ರೊ ನೆಟ್‌ವರ್ಕ್ ಗಮನಾರ್ಹವಾಗಿ ಅಭಿವೃದ್ಧಿ ಆಗಿರುವುದರಿಂದ ಕೋಲ್ಕತ್ತಾದ ಜನರಿಗೆ ಇದು ಬಹಳ ವಿಶೇಷವಾದ ದಿನವಾಗಿದೆ. ಸಂಪರ್ಕವು ಉತ್ತೇಜನವನ್ನು ಪಡೆಯುತ್ತದೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಹೌರಾ ಮೈದಾನ-ಎಸ್ಪ್ಲಾನೇಡ್ ಮೆಟ್ರೋ ವಿಭಾಗವು ನಮ್ಮ ದೇಶದ ಯಾವುದೇ ಪ್ರಮುಖ ನದಿಯ ಅಡಿಯಲ್ಲಿ ಮೊದಲ ನೀರೊಳಗಿನ ಮೆಟ್ರೋ ಸಾರಿಗೆ ಸುರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ಕ್ಷಣವಾಗಿದೆ.

“ಕೋಲ್ಕತ್ತಾ ಮೆಟ್ರೋದ ಸ್ಮರಣೀಯ ಕ್ಷಣಗಳು. ನಾನು ಜನಶಕ್ತಿಗೆ ನಮಸ್ಕರಿಸುತ್ತೇನೆ ಮತ್ತು ಹೊಸ ಚೈತನ್ಯದಿಂದ ಅವರಿಗೆ ಸೇವೆ ಸಲ್ಲಿಸುತ್ತೇನೆ” ಎಂದು ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಸಿ ವಿ ಆನಂದ ಬೋಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ನಗರ ಸಂಚಾರ ಸುಲಭತೆಯನ್ನು ಖಾತ್ರಿಪಡಿಸುವ ಮಾರ್ಗಗಳನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದ ಪ್ರಧಾನಮಂತ್ರಿಯವರು ಕೋಲ್ಕತ್ತಾ ಮೆಟ್ರೋದ ಹೌರಾ ಮೈದಾನ – ಎಸ್ಪ್ಲಾನೇಡ್ ಮೆಟ್ರೋ ವಿಭಾಗ, ಕವಿ ಸುಭಾಷ್ – ಹೇಮಂತ ಮುಖೋಪಾಧ್ಯಾಯ ಮೆಟ್ರೋ ವಿಭಾಗ, ತಾರಾತಲಾ – ಮಜೆರ್ಹತ್ ಮೆಟ್ರೋ ವಿಭಾಗ (ಜೋಕಾ- ಎಸ್ಪ್ಲೇನೇಡ್ ಲೈನ್‌ನ ಭಾಗ); ಪುಣೆ ಮೆಟ್ರೋ ರೂಬಿ ಹಾಲ್ ಕ್ಲಿನಿಕ್ ನಿಂದ ರಾಮವಾಡಿ ವರೆಗೆ; ಕೊಚ್ಚಿ ಮೆಟ್ರೋ ರೈಲು ಹಂತ I ವಿಸ್ತರಣೆ ಯೋಜನೆ (ಹಂತ IB) SN ಜಂಕ್ಷನ್ ಮೆಟ್ರೋ ನಿಲ್ದಾಣದಿಂದ ತ್ರಿಪುನಿಥುರಾ ಮೆಟ್ರೋ ನಿಲ್ದಾಣದವರೆಗೆ; ತಾಜ್ ಈಸ್ಟ್ ಗೇಟ್‌ನಿಂದ ಮಂಕಮೇಶ್ವರದವರೆಗೆ ಆಗ್ರಾ ಮೆಟ್ರೋದ ವಿಸ್ತರಣೆ; ಮತ್ತು ದೆಹಲಿ-ಮೀರತ್ RRTS ಕಾರಿಡಾರ್‌ನ ದುಹೈ-ಮೋದಿನಗರ (ಉತ್ತರ) ವಿಭಾಗ. ಅವರು ಈ ವಿಭಾಗಗಳಲ್ಲಿ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿದರು. ಪಿಂಪ್ರಿ ಚಿಂಚ್‌ವಾಡ್ ಮೆಟ್ರೋ-ನಿಗ್ಡಿ ನಡುವೆ ಪುಣೆ ಮೆಟ್ರೋ ರೈಲು ಯೋಜನೆ ಹಂತ 1 ರ ವಿಸ್ತರಣೆಗೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಿದರು.

ಈ ವಿಭಾಗಗಳು ರಸ್ತೆ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ತಡೆರಹಿತ, ಸುಲಭ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುತ್ತದೆ. ಕೋಲ್ಕತ್ತಾ ಮೆಟ್ರೋದ ಹೌರಾ ಮೈದಾನ – ಎಸ್ಪ್ಲಾನೇಡ್ ಮೆಟ್ರೋ ವಿಭಾಗವು ಭಾರತದ ಮೊದಲ ನೀರೊಳಗಿನ ಸಾರಿಗೆ ಸುರಂಗವನ್ನು ಹೊಂದಿದೆ. ಹೌರಾ ಮೆಟ್ರೋ ನಿಲ್ದಾಣವು ಭಾರತದ ಆಳದಲ್ಲಿರುವ ಮೆಟ್ರೋ ನಿಲ್ದಾಣವಾಗಿದೆ. ಅಲ್ಲದೆ, ಇಂದು ಉದ್ಘಾಟನೆಗೊಂಡ ತಾರಾತಲಾ – ಮಜೆರ್ಹತ್ ಮೆಟ್ರೋ ವಿಭಾಗದಲ್ಲಿ ಮಜೆರ್ಹತ್ ಮೆಟ್ರೋ ನಿಲ್ದಾಣವು ರೈಲು ಮಾರ್ಗಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಕಾಲುವೆಗಳಾದ್ಯಂತ ಒಂದು ವಿಶಿಷ್ಟವಾದ ಎತ್ತರದ ಮೆಟ್ರೋ ನಿಲ್ದಾಣವಾಗಿದೆ. ಇಂದು ಉದ್ಘಾಟನೆಗೊಂಡ ಆಗ್ರಾ ಮೆಟ್ರೋ ವಿಭಾಗವು ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಆರ್‌ಆರ್‌ಟಿಎಸ್ ವಿಭಾಗವು ಎನ್‌ಸಿಆರ್‌ನಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ.

 

*****