Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರೀಕ್ಷೆಯ ಒತ್ತಡ ಮತ್ತು ಆತಂಕವನ್ನು ಯಶಸ್ವಿಯಾಗಿ ಎದುರಿಸಿದ ಅತ್ಯುತ್ತಮ ತಜ್ಞರಿಂದ, ಅಂದರೆ ಎಕ್ಸಾಮ್ ವಾರಿಯರ್ಸ್ ಅವರಿಂದ ಇದನ್ನು ಕೇಳಿ ಎಂದ ಪ್ರಧಾನಮಂತ್ರಿ


‘ಪರೀಕ್ಷಾ ಪೇ ಚರ್ಚಾ-2025ರ’ ವಿಶೇಷ ಸಂಚಿಕೆಯು ಫೆಬ್ರವರಿ 18 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಪರೀಕ್ಷೆಯ ಒತ್ತಡ ಮತ್ತು ಆತಂಕವನ್ನು ಯಶಸ್ವಿಯಾಗಿ ಎದುರಿಸಿದ ಯುವ ಎಕ್ಸಾಮ್ ವಾರಿಯರ್ಸ್ ಭಾಗವಹಿಸಲಿದ್ದಾರೆ. ಈ ಸಂಚಿಕೆಯು ಪರೀಕ್ಷೆಯ ಒತ್ತಡ, ಆತಂಕದಲ್ಲಿಯೂ ಸ್ಥಿರವಾಗಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಅವರ ಅನುಭವಗಳು, ತಂತ್ರಗಳು ಮತ್ತು ಒಳನೋಟಗಳನ್ನು ನೀಡಲಿದೆ.

ಈ ವಿಶೇಷ ಸಂಚಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, Xನಲ್ಲಿ ಈ ಕೆಳಕಂಡಂತೆ ಬರೆದಿದ್ದಾರೆ;

“ಅತ್ಯುತ್ತಮ ತಜ್ಞರಿಂದ ಇದನ್ನು ಕೇಳಿ… ಪರೀಕ್ಷೆಯ ಒತ್ತಡ ಮತ್ತು ಆತಂಕವನ್ನು ಯಶಸ್ವಿಯಾಗಿ ಎದುರಿಸಿದ #ExamWarriors. ನಾಳೆಯ ‘ಪರೀಕ್ಷಾ ಪೇ ಚರ್ಚಾ’ದಲ್ಲಿ ನನ್ನ ಯುವ ಸ್ನೇಹಿತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.”

 

 

*****