ಕಲೆಯ ಮೂಲಕ ಪರೀಕ್ಷಾ ಒತ್ತಡದಿಂದ ಹೊರಬರಬಹುದು ಎಂಬುದನ್ನು ಪ್ರದರ್ಶಿಸಿದ ಪರೀಕ್ಷಾ ಯೋಧರ ಕಲಾ ಉತ್ಸವವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ನವದೆಹಲಿಯ ಶಾಂತಿಪಥದಲ್ಲಿ 2025ರ ಜನವರಿ 4 ರಂದು ಪರೀಕ್ಷಾ ಯೋಧರ ಕಲಾ ಉತ್ಸವವನ್ನು ಆಯೋಜಿಸಲಾಗಿತ್ತು. 30 ಶಾಲೆಗಳ 9 ರಿಂದ 12 ನೇ ತರಗತಿಯ ಸುಮಾರು 4,000 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು.
ಈ ಕಲಾ ಉತ್ಸವದ ಕುರಿತಂತೆ ಪರೀಕ್ಷಾ ಯೋಧರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ:
“ಸೃಜನಶೀಲ ಯಶಸ್ಸಿನ ಮೂಲಕ ಪರೀಕ್ಷಾ ಒತ್ತಡದ ನಿವಾರಣೆ!
ಅನೇಕ ಯುವಕರು ಒಗ್ಗೂಡಿ ಕಲೆಯ ಶಕ್ತಿಯ ಮೂಲಕ ಒತ್ತಡ ಮುಕ್ತ ಪರೀಕ್ಷೆಗಳ ಕುರಿತಾದ ಪ್ರಬಲ ಸಂದೇಶವನ್ನು ರವಾನಿಸಿರುವುದನ್ನು ನೋಡಿ ಸಂತೋಷವಾಗಿದೆ.”
*****