Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರೀಕ್ಷಾ ಯೋಧರ ಅನುಭವಗಳು ಮತ್ತು ಅವರು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕೆ ಪ್ರಧಾನಮಂತ್ರಿ ಸಂತಸ


ಒಡಿಶಾದ ಧೇಂಕನಾಲ್ ನ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶಿವಾಂಗಿ ಅವರು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಿರುವುದನ್ನು ನವೋದಯ ವಿದ್ಯಾಲಯ ಸಮಿತಿಯು ಮಾಡಿರುವ ಟ್ವೀಟ್ ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನವೋದಯ ವಿದ್ಯಾಲಯ ಸಮಿತಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ಅವರು;

“ಪರೀಕ್ಷಾ ಒತ್ತಡಗಳನ್ನು ನಿಭಾಯಿಸಲು ಅಥವಾ ಹತ್ತಿಕ್ಕಲು ಇರುವ ಮಾರ್ಗೋಪಾಯಗಳ ಕುರಿತು #ಪರೀಕ್ಷಾಯೋಧರು ವ್ಯಕ್ತಪಡಿಸಿರುವ ಹಲವಾರು ಆಸಕ್ತಿದಾಯಕ ಒಳನೋಟಗಳನ್ನು ನಾನು ಪಡೆಯುತ್ತಿದ್ದೇನೆ ಅಥವಾ ನೋಡುತ್ತಿದ್ದೇನೆ. ಭಾರತದಾದ್ಯಂತ ವಿದ್ಯಾರ್ಥಿಗಳ ಇಂತಹ ಸಕ್ರಿಯ ಭಾಗವಹಿಸುವಿಕೆಯನ್ನು ನೋಡಲು ನನಗೆ ಸಂತೋಷವಾಗಿದೆ” ಎಂದು ಪ್ರಧಾನ ಮಂತ್ರಿ ಅವರು ಮರುಟ್ವೀಟ್ ಮಾಡಿದ್ದಾರೆ.

****