ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18 ರಿಂದ 2019-20ರ ಅವಧಿಗಾಗಿ 1,756ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಿಷ್ಕೃತ ಖೇಲೋ ಇಂಡಿಯಾ (ಆಟವಾಡು ಭಾರತ) ಕಾರ್ಯಕ್ರಮಕ್ಕೆ ತನ್ನ ಅನುಮೋದನೆ ನೀಡಿದೆ. ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ವಿಶಿಷ್ಠ ಕ್ಷಣವಾಗಿದ್ದು, ಈ ಕಾರ್ಯಕ್ರಮವು ವೈಯಕ್ತಿಕ ವಿಕಾಸ, ಸಮುದಾಯ ಅಭಿವೃದ್ದಿ, ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರದ ಪ್ರಗತಿಗೆ ಕ್ರೀಡೆಯನ್ನು ಒಂದು ಪ್ರಧಾನ ಸಾಧನವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ.
ಪರಿಷ್ಕೃತ ಖೇಲೋ ಇಂಡಿಯಾ ಕಾರ್ಯಕ್ರಮವು, ಮೂಲಸೌಕರ್ಯ, ಸಮುದಾಯ ಕ್ರೀಡೆ, ಪ್ರತಿಭೆಯ ಗುರುತಿಸುವಿಕೆ, ಔನ್ನತ್ಯಕ್ಕಾಗಿ ತರಬೇತಿ, ಸ್ಪರ್ಧಾ ಸ್ವರೂಪ ಮತ್ತು ಕ್ರೀಡಾ ಆರ್ಥಿಕತೆ ಸೇರಿದಂತೆ ಇಡೀ ಕ್ರೀಡಾ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.
ಪ್ರಮುಖ ಲಕ್ಷಣಗಳು:
ಕಾರ್ಯಕ್ರಮದ ಕೆಲವು ಪ್ರಮುಖ ಲಕ್ಷಣಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:
ಪರಿಣಾಮ: