Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರಿವರ್ತನಾತ್ಮಕ ಯೋಜನೆಯೊಂದು 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಜನ್ ಧನ್ ಯೋಜನೆಯ ಫಲಾನುಭವಿಗಳನ್ನು ಅಭಿನಂದಿಸಿದ ಪ್ರಧಾನ ಮಂತ್ರಿಗಳು


ಜನ್‌ಧನ್‌ ಯೋಜನೆಯು 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಲಾನುಭವಿಗಳನ್ನು ಅಭಿನಂದಿಸಿದರು. ಹಾಗೆಯೇ ಈ ಯೋಜನೆಯ ಯಶಸ್ಸಿಗಾಗಿ ಸಹಕರಿಸಿದವರು, ಶ್ರಮಿಸಿದವರ ಸೇವೆಯನ್ನು ಪ್ರಧಾನ ಮಂತ್ರಿ ಮೋದಿ ಶ್ಲಾಘಿಸಿದರು.

ಮೈಗವರ್ನಮೆಂಟ್‌ನ ಥ್ರೆಡ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಗಳು “X” ಜಾಲತಾಣದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ:

“ಪ್ರಧಾನಮಂತ್ರಿ ಜನ್ ಧನ್ ಯೋಜನೆ 9 ವರ್ಷಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಈ ಯೋಜನೆಯಿಂದ ಪ್ರಯೋಜನ ಪಡೆದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ ಹಾಗೂ ಅದನ್ನು ಯಶಸ್ವಿಗೊಳಿಸಲು ಶ್ರಮಿಸಿದ ಪ್ರತಿಯೊಬ್ಬರನ ಸೇವೆಯನ್ನೂ ಶ್ಲಾಘಿಸುತ್ತೇನೆ. ನಮ್ಮ ಜನರನ್ನು ಸಬಲರನ್ನಾಗಿಸುವ ಪ್ರಯತ್ನದಲ್ಲಿ ಇದೊಂದು ಮೈಲುಗಲ್ಲು. ಈ ಉಪಕ್ರಮದ ಮೂಲಕ ನಾವು ಲಕ್ಷಾಂತರ ಜನರನ್ನು ಆರ್ಥಿಕತೆ ಮುಖ್ಯವಾಹಿನಿಗೆ ತರುವ ಜತೆಗೆ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಸೂಕ್ತವಾದ ಸ್ಥಾನವಿದೆ ಎಂಬುದನ್ನೂ ಖಚಿತಪಡಿಸಿಕೊಳ್ಳಲಾಗಿದೆ,ʼʼ ಎಂದು ಹರ್ಷ ವ್ಯಕ್ತಪಡಿಸಿ “#9YearsofJanDhan” ಹ್ಯಾಷ್‌ಟ್ಯಾಗ್‌ ಪೋಸ್ಟ್‌ ಮಾಡಿದ್ದಾರೆ.

***