Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರಸ್ಪರ ಸಂವಹನದೊಂದಿಗೆ ಕಾಲಮಿತಿಯಲ್ಲಿ ಯೋಜನೆಗಳ ಪೂರ್ಣಗೊಳಿಸುವಿಕೆ ಖಾತರಿಪಡಿಸುತ್ತಾ ತಂತ್ರಜ್ಞಾನ ಮತ್ತು ಆಡಳಿತದ ಅದ್ಭುತ ಸಂಯೋಜನೆಯನ್ನು “ಪ್ರಗತಿ” ಪ್ರತಿನಿಧಿಸುತ್ತದೆ : ಪ್ರಧಾನಮಂತ್ರಿ


“ಪ್ರಗತಿ” ವೇದಿಕೆಯು ತಂತ್ರಜ್ಞಾನ ಮತ್ತು ಆಡಳಿತದ ಅದ್ಭುತ ಸಮ್ಮಿಲನವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಶ್ಲಾಘಿಸಿದ್ದಾರೆ. “ಪ್ರಗತಿ”ಯ ಪರಿಣಾಮಕಾರಿತ್ವವನ್ನು ಆಕ್ಸ್ಫರ್ಡ್ ಬಿಸಿನೆಸ್ ಸ್ಕೂಲ್ ಮತ್ತು ಗೇಟ್ಸ್ ಫೌಂಡೇಶನ್ನ ಅಧ್ಯಯನದಲ್ಲಿ ಗುರುತಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಪ್ರತ್ಯೇಕತೆಯನ್ನು ತೊಡೆದು ಹಾಕಿ ಪರಸ್ಪರ ಸಂವಹನದ ಮೂಲಕ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಇದು ಖಚಿತಪಡಿಸಿದೆ ಎಂದು ಹೇಳಿದ್ದಾರೆ.

ಎಕ್ಸ್‌ ಪೋಸ್ಟ್‌ ನಲ್ಲಿ ಅವರು ಹೀಗೆ ಬರೆದಿದ್ದಾರೆ:

“ತಂತ್ರಜ್ಞಾನ ಮತ್ತು ಆಡಳಿತದ ಅದ್ಭುತ ಸಂಯೋಜನೆಯನ್ನು ʼಪ್ರಗತಿʼ ಪ್ರತಿನಿಧಿಸುತ್ತದೆ, ತಂಡದಿಂದ ಪ್ರತ್ಯೇಕವಾಗಿರುವುದನ್ನು ತೊಡೆದುಹಾಕುತ್ತಾ, ಪರಸ್ಪರ ಸಂವಹನ ಖಾತರಿಪಡಿಸುವ ಮೂಲಕ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಳಿಸುವುದನ್ನು ಇದು ಖಚಿತಪಡಿಸುತ್ತದೆ. ಕೆಲವು ವರ್ಷಗಳಲ್ಲಿ ಇದರಿಂದಾಗಿ ಗಣನೀಯ ಅನುಕೂಲಗಳಾಗಿದ್ದು, ಜನರಿಗೆ ಹೆಚ್ಚು ಪ್ರಯೋಜನವಾಗಿದೆ.

‘PRAGATI’ಯ ಪರಿಣಾಮಕಾರಿತ್ವವನ್ನು @OxfordSBS ಮತ್ತು @GatesFoundation ನಡೆಸಿದ ಅಧ್ಯಯನದಲ್ಲಿ ಗುರುತಿಸಲಾಗಿದೆ ಎಂಬುದು ನನಗೆ ಸಂತಸ ತಂದಿದೆ.”

https://www.news18.com/india/pm-modi-ensured-pragati-of-340-infrastructure-projects-worth-200-billion-oxford-study-9142652.html

 

 

*****