Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

ಪಪುವಾ ನ್ಯೂಗಿನಿಯಾದ ಗವರ್ನರ್ ಜನರಲ್ ಅವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ 3 ನೇ ಶೃಂಗಸಭೆಯ (ಎಫ್‌ ಐ ಪಿ ಐ ಸಿ) ಸಂದರ್ಭದಲ್ಲಿ 22 ಮೇ 2023 ರಂದು ಪೋರ್ಟ್ ಮೊರೆಸ್ಬಿಯಲ್ಲಿರುವ ಸರ್ಕಾರಿ ಭವನದಲ್ಲಿ ಪಪುವಾ ನ್ಯೂಗಿನಿ ಗವರ್ನರ್-ಜನರಲ್ ಸರ್ ಬಾಬ್ ದಡಾಯೆ ಅವರನ್ನು ಭೇಟಿ ಮಾಡಿದರು. 

ಅವರ ದೇಶಕ್ಕೆ ಮೊದಲ ಭೇಟಿ ನೀಡಿದ ಪ್ರಧಾನಿ ಮೋದಿಯವರನ್ನು ಗವರ್ನರ್ ಜನರಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯಗಳು ಮತ್ತು ಅಭಿವೃದ್ಧಿ ಪಾಲುದಾರಿಕೆಯ ಮಹತ್ವವನ್ನು ಒಳಗೊಂಡಂತೆ ಇಬ್ಬರೂ ನಾಯಕರು ಉತ್ತಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು, ಅದನ್ನು ಮತ್ತಷ್ಟು ಬಲಪಡಿಸಲು ಅವರು ಸಮ್ಮತಿಸಲಾಯಿತು.

******