वाहे गुरू जी का खालसा,
वाहे गुरू जी की फतेह।
ಸ್ನೇಹಿತರೇ, ಇಂದು ನಾನು ಈ ಪವಿತ್ರ ಭೂಮಿಗೆ ಬಂದು ಆಶೀರ್ವದಿಸಲ್ಪಟ್ಟಿದ್ದೇನೆ ಎಂದು ಭಾವಿಸಿದ್ದೇನೆ ಇಂದು ನಾನು ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ದೇಶಕ್ಕೆ ಅರ್ಪಿಸುತ್ತಿದ್ದೇನೆ ಎನ್ನುವುದು ನನ್ನ ಪುಣ್ಯ. ‘ಕಾರ್ ಸೇವಾ ’ಸಮಯದಲ್ಲಿ ನೀವು ಹೊಂದಿರುವ ಅದೇ ಭಾವನೆಯನ್ನು ಇದೀಗ ನಾನು ಹೊಂದಿದ್ದೇನೆ. ನಿಮ್ಮೆಲ್ಲರನ್ನೂ, ಇಡೀ ದೇಶವನ್ನೂ, ಮತ್ತು ವಿಶ್ವದಾದ್ಯಂತದ ಸಿಖ್ ಸಹೋದರ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ.
ಇಂದು, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯು ನನಗೆ ‘ಕೌಮಿ ಸೇವಾ ಪ್ರಶಸ್ತಿ’ ಯನ್ನೂ ನೀಡಿದೆ. ಈ ಪ್ರಶಸ್ತಿ, ಈ ಗೌರವ, ಈ ಹೆಮ್ಮೆ ನಮ್ಮ ಮಹಾನ್ ಸಂತರ ಸಂಪ್ರದಾಯದ ವೈಭವ, ತ್ಯಾಗ ಮತ್ತು ತಪಸ್ಸಿನ ಅರ್ಪಣೆಯಾಗಿದೆ. ನಾನು ಈ ಪ್ರಶಸ್ತಿಯನ್ನು, ಈ ಗೌರವವನ್ನು ಗುರುನಾನಕ್ ದೇವ್ ಜಿಯವರ ಪಾದಗಳಿಗೆ ಅರ್ಪಿಸುತ್ತೇನೆ.
ಇಂದು, ಈ ಪವಿತ್ರ ಭೂಮಿಯ ಗುರುನಾನಕ್ ಸಾಹಿಬ್ ಅವರ ಪಾದದಲ್ಲಿ, ಗುರು ಗ್ರಂಥ ಸಾಹೀಬರ ಮುಂದೆ, ನನ್ನ ಆಂತರಿಕ ಸೇವೆಯ ಪ್ರಜ್ಞೆಯು ದಿನದಿಂದ ದಿನಕ್ಕೆ ಹೆಚ್ಚಾಗಲಿ ಮತ್ತು ಅವರ ಆಶೀರ್ವಾದಗಳು ನನ್ನ ಮೇಲೆ ಇದೇ ರೀತಿ ಇರಲಿ ಎಂದು ವಿನಮ್ರವಾಗಿ ಪ್ರಾರ್ಥಿಸುತ್ತೇನೆ.
ಸ್ನೇಹಿತರೇ,
ಗುರುನಾನಕ್ ದೇವ್ ಜಿಯವರ 550 ನೇ ಪ್ರಕಾಶ್ ಉತ್ಸವದ ಮೊದಲು ಸಮಗ್ರಗೊಂಡ ಚೆಕ್ ಪೋಸ್ಟ್- ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅನ್ನು ಆರಂಭಿಸಿರುವುದು ನಮ್ಮೆಲ್ಲರ ಸಂತೋಷವನ್ನು ದ್ವಿಗುಣಗೊಳಿಸಿದೆ. ಈ ಬಾರಿ ಕಾರ್ತಿಕ್ ಪೂರ್ಣಿಮಾದಲ್ಲಿ ದೇವ್-ದೀಪಾವಳಿಯ ಬೆಳಕು ಹೆಚ್ಚು ಬೆಳಗುತ್ತದೆ ಮತ್ತು ನಮಗೆ ಆಶೀರ್ವಾದ ಮಾಡುತ್ತದೆ.
ಸಹೋದರ ಮತ್ತು ಸಹೋದರಿಯರೇ ,
ಈ ಕಾರಿಡಾರ್ ನಿರ್ಮಾಣದ ನಂತರ ಗುರುದ್ವಾರ ದರ್ಬಾರ್ ಸಾಹಿಬ್ ದರ್ಶನ ಸುಲಭವಾಗುತ್ತದೆ. ನಮ್ಮ ಭಾಗದ ಈ ಕಾರಿಡಾರ್ ಅನ್ನು ಸರಿಯಾದ ಸಮಯದಲ್ಲಿ ನಿರ್ಮಿಸಿದ ಪಂಜಾಬ್ ಸರ್ಕಾರ, ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಮತ್ತು ಎಲ್ಲಾ ಕಾರ್ಮಿಕ ವರ್ಗದವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಕರ್ತಾರ್ಪುರ ಕಾರಿಡಾರ್ ಗೆ ಸಂಬಂಧಿಸಿದಂತೆ ಭಾರತದ ಭಾವನೆಗಳನ್ನು ಅರ್ಥಮಾಡಿಕೊಂಡದ್ದಕ್ಕಾಗಿ, ಗೌರವಿಸಿದ್ದಕ್ಕಾಗಿ ಮತ್ತು ಕಾರ್ಯನಿರ್ವಹಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನಿಯಾಜಿ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ತಮ್ಮ ಕಡೆಯಿಂದ ಕಾರಿಡಾರ್ ಅನ್ನು ಬೇಗನೇ ಪೂರ್ಣಗೊಳಿಸಲು ಸಹಾಯ ಮಾಡಿದ ಪಾಕಿಸ್ತಾನದ ಕಾರ್ಮಿಕ ಸ್ನೇಹಿತರಿಗೂ ನಾನು ಧನ್ಯವಾದ ಗಳನ್ನುಅರ್ಪಿಸುತ್ತೇನೆ.
ಸ್ನೇಹಿತರೇ,
ಗುರುನಾನಕ್ ದೇವ್ ಜಿಯವರು ಸಿಖ್ ಧರ್ಮದ ಮತ್ತು ಭಾರತದ ಪರಂಪರೆ ಮಾತ್ರವಲ್ಲ, ಇಡೀ ಮಾನವೀಯತೆಗೆ ಸ್ಫೂರ್ತಿಯಾಗಿದ್ದಾರೆ. ಗುರುನಾನಕ್ ದೇವ್ ರವರು ಒಬ್ಬ ಶಿಕ್ಷಕನಾಗಿರುವುದರ ಜೊತೆಗೆ ಒಂದು ಮನೋಭಾವನೆ ಮತ್ತು ಜೀವನದ ಆಧಾರವಾಗಿದ್ದಾರೆ. ನಮ್ಮ ಸಂಪ್ರದಾಯಗಳು, ಸಂಸ್ಕೃತಿ, ಮೌಲ್ಯಗಳು, ನಮ್ಮ ಪಾಲನೆ, ನಮ್ಮ ಮನಸ್ಥಿತಿ, ನಮ್ಮ ಆಲೋಚನೆಗಳು, ತಾರ್ಕಿಕತೆ ಮತ್ತು ಮಾತು ಎಲ್ಲವೂ ಗುರುನಾನಕ್ ದೇವ್ ಜಿಯಂತಹ ಸದ್ಗುಣಶೀಲ ವ್ಯಕ್ತಿಗಳಿಂದ ಮಾತ್ರ ರೂಪಿಸಲ್ಪಟ್ಟಿದೆ. ಗುರುನಾನಕ್ ದೇವ್ ಅವರು ಸುಲ್ತಾನಪುರ ಲೋಧಿಯಿಂದ ಪ್ರಯಾಣ ಆರಂಭಿಸಿದಾಗ ಯಾರಿಗೆ ತಿಳಿದಿತ್ತು ಅವರು ಯುಗವನ್ನೇ ಬದಲಾಯಿಸಲಿದ್ದಾರೆ ಎಂದು ! ಅವರ ‘ಉದಾಸಿಯಾನ್’, ಅವರ ಪ್ರವಾಸಗಳು, ಸಂವಹನ ಮತ್ತು ಸಮನ್ವಯವು ಸಾಮಾಜಿಕ ಬದಲಾವಣೆಯ ಪರಿಪೂರ್ಣ ಉದಾಹರಣೆಗಳಾಗಿವೆ.
ಅವರ ಭೇಟಿಗಳ ಉದ್ದೇಶವನ್ನು ಗುರುನಾನಕ್ ದೇವ್ ಜಿ ಸ್ವತಃ ತಿಳಿಸಿದ್ದಾರೆ –
बाबे आखिआ, नाथ जी, सचु चंद्रमा कूडु अंधारा !!
कूडु अमावसि बरतिआ, हउं भालण चढिया संसारा
ಸ್ನೇಹಿತರೇ,
ಅವರು ನಮ್ಮ ದೇಶವನ್ನು, ನಮ್ಮ ಸಮಾಜವನ್ನು ಕೆಟ್ಟಕೆಲಸಗಳಿಂದ, ಅನ್ಯಾಯ ಮತ್ತು ತಪ್ಪುಗಳಿಂದ ಹೊರತರುವ ಪ್ರಯತ್ನಕ್ಕಾಗಿ ಪ್ರಯಾಣ ಆರಂಭಿಸಿದ್ದರು. ಗುಲಾಮಗಿರಿಯ ಆ ಸಂಕಷ್ಟದ ಅವಧಿಯಲ್ಲಿ ಭಾರತದ ಪ್ರಜ್ಞೆಯನ್ನು ಉಳಿಸಲು ಮತ್ತು ಜಾಗೃತಗೊಳಿಸುವ ಸಲುವಾಗಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು.
ಸ್ನೇಹಿತರೇ,
ಒಂದು ಕಡೆ, ಗುರುನಾನಕ್ ದೇವ್ ಜಿ ಸಾಮಾಜಿಕ ತತ್ತ್ವದ ಮೂಲಕ ಸಮಾಜಕ್ಕೆ ಏಕತೆ, ಭ್ರಾತೃತ್ವ ಮತ್ತು ಸಾಮರಸ್ಯದ ಹಾದಿಯನ್ನು ತೋರಿಸಿದರು; ಮತ್ತೊಂದೆಡೆ, ಅವರು ಸಮಾಜಕ್ಕೆ ಸತ್ಯ, ಪ್ರಾಮಾಣಿಕತೆ ಮತ್ತು ಸ್ವಾಭಿಮಾನವನ್ನು ಆಧರಿಸಿದ ಆರ್ಥಿಕ ವ್ಯವಸ್ಥೆಯನ್ನು ಪ್ರಸ್ತುತಪಡಿಸಿದರು. ಸತ್ಯ ಮತ್ತು ಪ್ರಾಮಾಣಿಕತೆಯ ಮೂಲಕ ಸಾಧಿಸಿದ ಅಭಿವೃದ್ಧಿ ಯಾವಾಗಲೂ ಪ್ರಗತಿ ಮತ್ತು ಸಮೃದ್ಧಿಯ ಹಾದಿಗೆ ಕಾರಣವಾಗುತ್ತದೆ ಎನ್ನುವುದನ್ನುಅವರು ನಮಗೆ ಕಲಿಸಿದ್ದಾರೆ. ಹಣವು ಬರುತ್ತದೆ ಮತ್ತು ಹೋಗುತ್ತದೆ ಆದರೆ ನಿಜವಾದ ಮೌಲ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎನ್ನುವುದನ್ನು ಅವರು ಕಲಿಸಿದ್ದಾರೆ, ನಮ್ಮ ಮೌಲ್ಯಗಳ ಅಧಾರದ ಮೇಲೆ ನಾವು ಸ್ಥಿರವಾಗಿ ಕೆಲಸ ಮಾಡಿದರೆ ಸಮೃದ್ಧಿ ಸುಸ್ಥಿರವಾಗಿರುತ್ತದೆ ಎನ್ನುವುದನ್ನು ಅವರು ನಮಗೆ ಕಲಿಸಿದ್ದಾರೆ.
ಸಹೋದರ ಮತ್ತು ಸಹೋದರಿಯರೇ ,
ಕರ್ತಾರ್ಪುರ್ ಕೇವಲ ಗುರುನಾನಕ್ ದೇವ್ ಜಿಯವರ ಕಾರ್ಯದ ಸ್ಥಳವಲ್ಲ. ಗುರುನಾನಕ್ ದೇವ್ ಜಿಯವರ ಬೆವರು ಕರ್ತಾರ್ಪುರದ ಪ್ರತಿಯೊಂದು ಭಾಗದಲ್ಲೂ ಬೆರೆತುಹೋಗಿದೆ. ಅವರ ಧ್ವನಿ ಕರ್ತಾರ್ಪುರದ ಗಾಳಿಯಲ್ಲಿ ಪ್ರತಿಧ್ವನಿಸುತ್ತಿದೆ. ಕರ್ತಾರ್ಪುರದ ಭೂಮಿಯಲ್ಲಿ ಉಳುವ ಮೂಲಕ, ಅವರು ತಮ್ಮ ಮೊದಲ ನಿಯಮದ ಉದಾಹರಣೆಯನ್ನು ಪ್ರಸ್ತುತಪಡಿಸಿದ್ದರು – ‘ಕಿರ್ತ್ ಕರೋ’; ಈ ಭೂಮಿಯಲ್ಲಿ, ಅವರು ‘ನಾಮ್ ಜಪೋ’ ವಿಧಾನವನ್ನು ತೋರಿಸಿದರು ಮತ್ತು ಈ ಭೂಮಿಯಲ್ಲಿ ಅವರು ಕಠಿಣ ಪರಿಶ್ರಮದಿಂದ ಬೆಳೆದ ಬೆಳೆಗಳನ್ನು ಹಂಚಿಕೊಳ್ಳುವ ಮತ್ತು ತಿನ್ನುವ ಆಚರಣೆಯನ್ನು ಪ್ರಾರಂಭಿಸಿದರು. ಅವರು ‘ವಾಂಡ್ ಚಕೊ’ ಎಂಬ ಮಂತ್ರವನ್ನು ನೀಡಿದರು (ನಿಮ್ಮಲ್ಲಿರುವದನ್ನು ಹಂಚಿಕೊಳ್ಳಿ ಮತ್ತು ಅದನ್ನು ಎಲ್ಲರೊಡನೆ ಒಟ್ಟಾಗೆ ಸೇವಿಸಿ).
ಸ್ನೇಹಿತರೇ,
ಈ ಪವಿತ್ರ ಸ್ಥಳಕ್ಕಾಗಿ ನಾವು ಏನು ಮಾಡುತ್ತಿದ್ದರೂ ಅದು ಸಾಕಾಗುವುದಿಲ್ಲ. ಈ ಕಾರಿಡಾರ್, ಸಮಗ್ರಗೊಂಡ ಚೆಕ್ ಪೋಸ್ಟ್ ಪ್ರತಿದಿನ ಸಾವಿರಾರು ಭಕ್ತರಿಗೆ ಸೇವೆ ಸಲ್ಲಿಸಲಿದ್ದು, ಅವರನ್ನು ಗುರುದ್ವಾರ ದರ್ಬಾರ್ ಸಾಹಿಬ್ಗೆ ಹತ್ತಿರವಾಗಿಸುತ್ತದೆ. ಪದಗಳು ಯಾವಾಗಲೂ ಶಕ್ತಿಯ ರೂಪದಲ್ಲಿ ವಾತಾವರಣದಲ್ಲಿ ಉಳಿಯುತ್ತವೆ ಎಂದು ಹೇಳಲಾಗುತ್ತದೆ. ಕಾರ್ತಾಪುರದಿಂದ ಪಡೆದ ಗುರ್ಬಾನಿಯ ಶಕ್ತಿಯು ನಮ್ಮ ಸಿಖ್ ಸಹೋದರ ಸಹೋದರಿಯರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರಿಗೂ ಆಶೀರ್ವಾದ ನೀಡುತ್ತದೆ.
ಸ್ನೇಹಿತರೇ,
ಗುರುನಾನಕ್ ದೇವ್ ಜಿಯವರಿಗೆ ಭಾಯ್ ಲಾಲೋ ಮತ್ತು ಭಾಯಿ ಮರ್ದಾನಾ ಎಂಬ ಇಬ್ಬರು ಆಪ್ತ ಅನುಯಾಯಿಗಳು ಇದ್ದರು ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಈ ಭರವಸೆಯ ಇಬ್ಬರನ್ನು ಆಯ್ಕೆ ಮಾಡಿದ ನಂತರ, ಶ್ರೀಮಂತ ಮತ್ತು ಬಡವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಮತ್ತು ಎಲ್ಲರೂ ಸಮಾನರು ಎಂಬ ಸಂದೇಶವನ್ನು ನಾನಕ್ ದೇವ್ ಜಿ ನಮಗೆ ನೀಡಿದರು. ಯಾವುದೇ ತಾರತಮ್ಯವಿಲ್ಲದೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಪ್ರಗತಿ ಖಚಿತ ಎನ್ನುವುದನ್ನು ಅವರು ನಮಗೆ ಕಲಿಸಿದ್ದಾರೆ.
ಸಹೋದರ ಮತ್ತು ಸಹೋದರಿಯರೇ,
ಗುರುನಾನಕ್ ಅವರ ತತ್ತ್ವವು ಮಾನವಕುಲಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ತಾರ್ಪುರದಲ್ಲಿಯೇ ಅವರು ಪ್ರಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಅವರು ಹೇಳಿದರು –
पवणु गुरू, पाणी पिता, माता धरति महतु।
ಅಂದರೆ, ಗಾಳಿಯನ್ನು ಗುರು ಎಂದು ಪರಿಗಣಿಸಿ, ನೀರಿಗೆ ತಂದೆಯಂತೆ ಮತ್ತು ಭೂಮಿಯನ್ನು ತಾಯಿಯಂತೆ ಪ್ರಾಮುಖ್ಯತೆ ನೀಡಿ. ಇಂದು, ನಾವು ಪ್ರಕೃತಿ, ಪರಿಸರಕ್ಕೆ ಮಾಡುವ ಹಾನಿ ಮತ್ತು ಮಾಲಿನ್ಯದ ಬಗ್ಗೆ ಮಾತನಾಡುವಾಗ, ಗುರುವಿನ ಈ ಸಂದೇಶ ನಮ್ಮ ಮುಂದಿನ ಹಾದಿಯ ಆಧಾರವಾಗುತ್ತದೆ.
ಸ್ನೇಹಿತರೇ,
ಕೇವಲ ಕಲ್ಪನೆ ಮಾಡಿಕೊಳ್ಳಿ ! ನಮ್ಮ ಗುರುದೇವರು ಎಷ್ಟು ದೂರದೃಷ್ಟಿಯುಳ್ಳವರು ಎಂದು, ಪಂಜಾಬ್ನಲ್ಲಿ (ಪಂಚ ಆಬ್) ಸಾಕಷ್ಟು ನೀರು ಇದ್ದಾಗ 5 ನದಿಗಳು ಹರಿಯುತ್ತಿದ್ದವು, ಗುರುದೇವ್ ಜಿ ನೀರಿನ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. ಅವರು ಹೇಳಿದರು-
पहलां पानी जिओ है, जित हरिया सभ कोय।
ಅಂದರೆ, ನೀರಿಗೆ ಯಾವಾಗಲೂ ಆದ್ಯತೆ ನೀಡಬೇಕು ಏಕೆಂದರೆ ನೀರು ಮಾತ್ರ ಇಡೀ ಸೃಷ್ಟಿಗೆ ಜೀವ ನೀಡುತ್ತದೆ. ನೂರಾರು ವರ್ಷಗಳ ಹಿಂದಿನ ಈ ದೃಷ್ಟಿ ಮತ್ತು ಭವಿಷ್ಯದ ಬಗ್ಗೆ ಈ ದೃಷ್ಟಿಯ ಬಗ್ಗೆ ಯೋಚಿಸಿ. ಇಂದು, ನಾವು ನೀರಿಗೆ ಆದ್ಯತೆ ನೀಡಲು ಮರೆತಿದ್ದರೂ, ಮತ್ತು ಪ್ರಕೃತಿ ಮತ್ತು ಪರಿಸರದ ಬಗ್ಗೆ ಅಸಡ್ಡೆ ಹೊಂದಿದ್ದರೂ, ಗುರುಗಳ ಧ್ವನಿಯು ಪದೇ ಪದೇ ಮತ್ತೆ ಪ್ರಕೃತಿಯೆಡೆಗೆ ಗಮನ ಕೊಡಬೇಕೆಂದು ಹೇಳುತ್ತದೆ ಮತ್ತು ಈ ಭೂಮಿಯು ನಮಗೆ ಕೊಟ್ಟಿರುವುದನ್ನು ಯಾವಾಗಲೂ ನೆನಪಿನಲ್ಲಿಡಬೇಕೆಂದು ಹೇಳುತ್ತದೆ.
ಸ್ನೇಹಿತರೇ,
ಕಳೆದ ಐದು ವರ್ಷಗಳಿಂದ, ನಮ್ಮ ಶ್ರೀಮಂತ ಗತಕಾಲವು ಭಾರತಕ್ಕೆ ಕೊಟ್ಟಿದ್ದನ್ನು ಸಂರಕ್ಷಿಸಿ ಇಡೀ ಜಗತ್ತಿಗೆ ಕೊಂಡೊಯ್ಯಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಗುರುನಾನಕ್ ದೇವ್ ಅವರ 550 ನೇ ಪ್ರಕಾಶ್ ಪರ್ವ್ ಆಚರಣೆಗಳು ನಡೆಯುತ್ತಿವೆ. ಅವುಗಳು ಈ ಯೋಜನೆಯ ಒಂದು ಭಾಗ . ಇದರ ಅಡಿಯಲ್ಲಿ ಭಾರತದ ಹೈ ಕಮಿಷನ್ಗಳು ಮತ್ತು ರಾಯಭಾರ ಕಚೇರಿಗಳು ವಿಶ್ವದಾದ್ಯಂತ ವಿಶೇಷ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿವೆ. ಗುರುನಾನಕ್ ದೇವ್ಜಿಯವರ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆಚೀಟಿಗಳನ್ನು ಸಹ ಬಿಡಗಡೆ ಮಾಡಲಾಗಿದೆ.
ಸ್ನೇಹಿತರೇ,
ಗುರುನಾನಕ್ ದೇವ್ ಅವರ ಬೋಧನೆಗಳನ್ನು ಕೀರ್ತನ್, ಕಥಾ, ಪ್ರಭಾತ್ ಫೆರಿ ಮತ್ತು ಲಂಗರ್ ಮುಂತಾದ ಘಟನೆಗಳ ಮೂಲಕ ದೇಶ ಮತ್ತು ವಿದೇಶಗಳಲ್ಲಿ ಪ್ರಚಾರ ಮಾಡಲಾಗಿದೆ. ಇದಕ್ಕೂ ಮೊದಲು ಗುರು ಗೋಬಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶೋತ್ಸವವನ್ನು ವಿಶ್ವದಾದ್ಯಂತ ಭವ್ಯವಾಗಿ ಆಚರಿಸಲಾಯಿತು. ಪಾಟ್ನಾದ ಅದ್ಧೂರಿ ಕಾರ್ಯಕ್ರಮಕ್ಕೆ ಹೋಗುವ ಭಾಗ್ಯ ನನಗೆ ಸಿಕ್ಕಿತು. ಆ ವಿಶೇಷ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯ ಮತ್ತು 350 ರೂ.ಗಳ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ, ಗುರು ಗೋಬಿಂದ್ ಸಿಂಗ್ ಅವರ ಸ್ಮರಣೆ ಮತ್ತು ಅವರ ಸಂದೇಶವು ಅಮರವಾಗಿರಿಸಲು, ಗುಜರಾತ್ನ ಜಾಮ್ನಗರದಲ್ಲಿ 750 ಹಾಸಿಗೆಗಳ ಆಧುನಿಕ ಆಸ್ಪತ್ರೆಯನ್ನು ಅವರ ಹೆಸರಿನಲ್ಲಿ ನಿರ್ಮಿಸಲಾಗಿದೆ.
ಸಹೋದರ ಮತ್ತು ಸಹೋದರಿಯರೇ ,
ಗುರುಬಾನಿಯನ್ನು ವಿಶ್ವದ ವಿವಿಧ ಭಾಷೆಗಳಿಗೆ ಅನುವಾದಿಸಲಾಗುತ್ತಿದ್ದು, ಇದರಿಂದ ವಿಶ್ವದ ಹೊಸ ಪೀಳಿಗೆಗೆ ಗುರುನಾನಕ್ ಅವರ ಬೋಧನೆಗಳ ಬಗ್ಗೆಯೂ ಪರಿಚಯವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರದ ಮನವಿಯನ್ನು ಸ್ವೀಕರಿಸಿದ್ದಕ್ಕಾಗಿ ಯುನೆಸ್ಕೋಗೆ ನನ್ನ ಕೃತಜ್ಞತೆಯನ್ನು ತಿಳಿಸಲು ಬಯಸುತ್ತೇನೆ. ಗುರುನಾನಕ್ ದೇವ್ ಜಿ ಅವರ ಕೃತಿಗಳನ್ನು ವಿವಿಧ ಭಾಷೆಗಳಿಗೆ ಅನುವಾದಿಸಲು ಯುನೆಸ್ಕೋ ಸಹಕರಿಸುತ್ತಿದೆ.
ಸ್ನೇಹಿತರೇ,
ಗುರುನಾನಕ್ ದೇವ್ ಮತ್ತು ಖಾಲ್ಸಾ ಪಂತ್ ಗೆ ಸಂಬಂಧಿಸಿದ ಸಂಶೋಧನೆಗಳನ್ನು ಉತ್ತೇಜಿಸಲು, ಯು ಕೆ ವಿಶ್ವವಿದ್ಯಾಲಯದಲ್ಲಿ ಪೀಠಗಳನ್ನು ಸ್ಥಾಪಿಸಲಾಗಿದೆ. ಕೆನಡಾದಲ್ಲಿ ಇದೇ ರೀತಿಯ ಪ್ರಯತ್ನ ನಡೆಯುತ್ತಿದೆ. ಅಂತೆಯೇ, ಅಮೃತಸರದಲ್ಲಿ ಅಂತರ ನಂಬಿಕೆ (ಇಂಟರ್-ಫೈತ್) ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಸಹ ನಿರ್ಧರಿಸಲಾಗಿದೆ, ಇದರಿಂದಾಗಿ ಸಾಮರಸ್ಯ ಮತ್ತು ವೈವಿಧ್ಯತೆಯ ಗೌರವವನ್ನು ಮತ್ತಷ್ಟು ಪ್ರೋತ್ಸಾಹಿಸಬಹುದು.
ಸಹೋದರ ಮತ್ತು ಸಹೋದರಿಯರೇ ,
ಆಧುನಿಕ ಪೀಳಿಗೆಯು ನಮ್ಮ ಗುರುಗಳಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಿಗೆ ಕಾಲಿಟ್ಟ ಕೂಡಲೇ ಪರಂಪರೆಯೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು , ತಿಳಿದುಕೊಳ್ಳಲು ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸುಲ್ತಾನಪುರ ಲೋಧಿಯಲ್ಲಿ ನೀವು ಇಂತಹ ಪ್ರಯತ್ನಗಳಾಗಿರುವುದನ್ನು ನೋಡಬಹುದು. ಸುಲ್ತಾನಪುರ ಲೋಧಿಯನ್ನು ಪಾರಂಪರಿಕ ಪಟ್ಟಣವನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಪಾರಂಪರಿಕ ಸಂಕೀರ್ಣವಿರಲಿ , ವಸ್ತುಸಂಗ್ರಹಾಲಯವಿರಲಿ ಅಥವಾ ಸಭಾಂಗಣವಿರಲಿ, ಅಂತಹ ಅನೇಕವು ಪೂರ್ಣಗೊಂಡಿವೆ ಅಥವಾ ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಇಲ್ಲಿನ ರೈಲ್ವೆ ನಿಲ್ದಾಣದಿಂದ ನಗರದ ಇತರ ಪ್ರದೇಶಗಳಿಗೆ ಗುರುನಾನಕ್ ದೇವ್ ಜಿಯವರ ಪರಂಪರೆಯನ್ನು ಕಾಣಬಹುದಾಗದೆ. ಗುರುನಾನಕ್ ದೇವ್ ಜಿಗೆ ಸಂಬಂಧಿಸಿದ ಎಲ್ಲಾ ಸ್ಥಳಗಳ ಮೂಲಕ ವಿಶೇಷ ರೈಲು ಸಹ ವಾರದಲ್ಲಿ ಐದು ದಿನ ಓಡುತ್ತಿರುವುದರಿಂದ ಭಕ್ತರಿಗೆ ಪ್ರಯಾಣದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಸಹೋದರ ಮತ್ತು ಸಹೋದರಿಯರೇ ,
ದೇಶಾದ್ಯಂತ ಇರುವ ಸಿಖ್ಖರಿಗೆ ಪ್ರಮುಖ ಸ್ಥಳಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಶ್ರೀ ಅಕಾಲ್ ತಖ್ತ್, ದಮದಾ ಸಾಹಿಬ್, ಕೇಶ್ಗರ್ ಸಾಹಿಬ್, ಪಾಟ್ನಾ ಸಾಹಿಬ್ ಮತ್ತು ಹಜೂರ್ ಸಾಹಿಬ್ ನಡುವೆ ರೈಲು ಮತ್ತು ವಾಯು ಸಂಪರ್ಕಕ್ಕೆ ಒತ್ತು ನೀಡಲಾಗಿದೆ. ಅಮೃತಸರ ಮತ್ತು ನಾಂದೇಡ್ ನಡುವೆ ವಿಶೇಷ ವಿಮಾನಯಾನ ಆರಂಭಿಸಲಾಗಿದೆ. ಅದೇ ರೀತಿ ಅಮೃತಸರದಿಂದ ಲಂಡನ್ಗೆ ಹಾರುವ ಏರ್ ಇಂಡಿಯಾದ ವಿಮಾನದಲ್ಲಿ ‘ಇಕ್ ಓಂಕಾರ್’ ಸಂದೇಶವನ್ನು ಬರೆಯಲಾಗಿದೆ.
ಸ್ನೇಹಿತರೇ,
ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ವಿಶ್ವದಾದ್ಯಂತ ನೆಲೆಸಿರುವ ಅನೇಕ ಸಿಖ್ ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ. ಅನೇಕ ವರ್ಷಗಳಿಂದ ಕೆಲವರು ಭಾರತಕ್ಕೆ ಬಂದಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆ ಸಮಸ್ಯೆಯನ್ನು ಈಗ ತೆಗೆದುಹಾಕಲಾಗಿದೆ. ಇದರಿಂದಾಗಿ, ಅನೇಕ ಕುಟುಂಬಗಳು ಈಗ ವೀಸಾ ಮತ್ತು ಒಸಿಐ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಅವರು ಭಾರತದಲ್ಲಿ ತಮ್ಮ ಸಂಬಂಧಿಕರನ್ನು ಸುಲಭವಾಗಿ ಭೇಟಿಯಾಗಲು ಸಾಧ್ಯವಾಗುತ್ತದೆ ಮತ್ತು ಇಲ್ಲಿನ ಗುರುಗಳ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಅರ್ದಾಸ್ (ಪ್ರಾರ್ಥನೆ) ಮಾಡಲು ಸಹ ಸಾಧ್ಯವಾಗುತ್ತದೆ.
ಸಹೋದರ ಮತ್ತು ಸಹೋದರಿಯರೇ,
ಸಿಖ್ ಸಮುದಾಯವು ಕೇಂದ್ರ ಸರ್ಕಾರದ ಇನ್ನೂ ಎರಡು ನಿರ್ಧಾರಗಳಿಂದ ನೇರವಾಗಿ ಲಾಭ ಪಡೆದಿದೆ. 370 ನೇ ಲೇಖನವನ್ನು ತೆಗೆದುಹಾಕುವುದರೊಂದಿಗೆ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿರುವ ಸಿಖ್ ಕುಟುಂಬಗಳು ಈಗ ಭಾರತದ ಉಳಿದ ಭಾಗದವರಿಗೆ ಇರುವ ಹಕ್ಕುಗಳನ್ನು ಪಡೆಯುತ್ತಾರೆ. ಇಲ್ಲಿಯವರೆಗೆ ಅನೇಕ ಹಕ್ಕುಗಳಿಂದ ವಂಚಿತರಾದ ಸಾವಿರಾರು ಕುಟುಂಬಗಳು ಇದ್ದವು. ಅದೇ ರೀತಿ ನಮ್ಮ ಸಿಖ್ ಸಹೋದರ ಸಹೋದರಿಯರಿಗೂ ಪೌರತ್ವ ತಿದ್ದುಪಡಿ ಮಸೂದೆಯಿಂದ ಭಾರಿ ಲಾಭ ಸಿಗಲಿದೆ. ಅವರು ಭಾರತದ ಪೌರತ್ವವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ.
ಸ್ನೇಹಿತರೇ,
ಗುರುನಾನಕ್ ದೇವ್ ಜಿಯಿಂದ ಹಿಡಿದು ಗುರು ಗೋಬಿಂದ್ ಸಿಂಗ್ ಜಿ ವರೆಗೆ ಪ್ರತಿಯೊಬ್ಬ ಗುರು ಸಾಹಿಬ್ ಸತತ ಪ್ರಯತ್ನಗಳನ್ನು ಮಾಡಿದ್ದಾರೆ, ಭಾರತದ ಐಕ್ಯತೆ, ರಕ್ಷಣೆ ಮತ್ತು ಸುರಕ್ಷತೆಗಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಈ ಸಂಪ್ರದಾಯವನ್ನು ಸಿಖ್ ಸಾಥಿಗಳು ಸ್ವಾತಂತ್ರ್ಯ ಹೋರಾಟ ಮತ್ತು ಸ್ವತಂತ್ರ ಭಾರತದ ರಕ್ಷಣೆಯಲ್ಲಿ ಸಂಪೂರ್ಣ ಹುರುಪಿನಿಂದ ತೊಡಗಿಸಿಕೊಂಡಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸಮರ್ಪಣೆಯನ್ನು ಗೌರವಿಸಲು ಸರ್ಕಾರ ಹಲವಾರು ಅರ್ಥಪೂರ್ಣ ಕ್ರಮಗಳನ್ನು ಕೈಗೊಂಡಿದೆ. ಈ ವರ್ಷವು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ 100ನೇ ವರ್ಷ. ಅದಕ್ಕೆ ಸಂಬಂಧಿಸಿದ ಸ್ಮಾರಕವನ್ನು ಆಧುನೀಕರಿಸಲಾಗುತ್ತಿದೆ. ಸಿಖ್ ಯುವಕರ ಶಾಲೆಗಳು, ಕೌಶಲ್ಯ ಮತ್ತು ಸ್ವ ಉದ್ಯೋಗದ ಬಗ್ಗೆಯೂ ಸರ್ಕಾರ ವಿಶೇಷ ಗಮನ ನೀಡುತ್ತಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 27 ಲಕ್ಷ ಸಿಖ್ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ.
ಸಹೋದರ ಮತ್ತು ಸಹೋದರಿಯರೇ,
ನಮ್ಮ ಗುರು ಸಂಪ್ರದಾಯ, ಸಂತ ಸಂಪ್ರದಾಯ, ಋಷಿ ಸಂಪ್ರದಾಯವು ವಿವಿಧ ಅವಧಿಗಳಲ್ಲಿ ಸವಾಲುಗಳನ್ನು ಎದುರಿಸುವ ಮಾರ್ಗಗಳನ್ನು ಸೂಚಿಸಿದೆ. ಅವರು ತೋರಿಸಿದ ಹಾದಿಗಳು ಅಂದಿನಂತೆಯೇ ಇಂದಿಗೂ ಸಹ ಅರ್ಥಪೂರ್ಣವಾಗಿವೆ. ರಾಷ್ಟ್ರೀಯ ಏಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಗಾಗಿ ಪ್ರತಿಯೊಬ್ಬ ಸಂತರು, ಪ್ರತಿಯೊಬ್ಬ ಗುರುಗಳು ಮನವಿ ಮಾಡಿದ್ದಾರೆ. ಅದು ಮೂಢನಂಬಿಕೆ ಆಗಿರಲಿ, ಸಮಾಜದ ದುಷ್ಕೃತ್ಯಗಳಾಗಿರಲಿ, ಜಾತಿ ಭಿನ್ನತೆಗಳಾಗಳಿ, ನಮ್ಮ ಸಂತರು ಮತ್ತು ಗುರುಗಳು ಅದರ ವಿರುದ್ಧ ಬಲವಾಗಿ ಧ್ವನಿ ಎತ್ತಿದ್ದಾರೆ.
ಸ್ನೇಹಿತರೇ, ಗುರು ನಾನಕ್ ಜಿ ಹೇಳುತ್ತಿದ್ದರು –
“विच दुनिया सेवि कमाइये, तदरगिह बेसन पाइए”।
ಅಂದರೆ, ಜಗತ್ತಿನಲ್ಲಿ ಸೇವೆಯ ಮಾರ್ಗವನ್ನು ಅಳವಡಿಸಿಕೊಳ್ಳುವುದರ ಮೂಲಕವೇ ಜೀವನವು ಯಶಸ್ವಿಯಾಗುತ್ತದೆ. ಗುರುನಾನಕ್ ಅವರ ಮಾತುಗಳನ್ನು ನಮ್ಮ ಜೀವನದ ಭಾಗವನ್ನಾಗಿ ಮಾಡುತ್ತೇವೆ ಎಂದು ಈ ಮಹತ್ವದ ಮತ್ತು ಪವಿತ್ರ ವೇದಿಕೆಯ ಮೇಲೆ ಪ್ರತಿಜ್ಞೆ ಮಾಡೋಣ. ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಭಾರತಕ್ಕೆ ಹಾನಿ ಮಾಡುವ ಶಕ್ತಿಗಳ ಬಗ್ಗೆ ನಾವು ಜಾಗರೂಕರಾಗಿರುತ್ತೇವೆ. ನಾವು ಎಚ್ಚರವಾಗಿರುತ್ತೇವೆ. ನಾವು ಸಮಾಜದಿಂದ ಬಹಿಷ್ಕೃತವಾಗುವ ಮಾದಕ ದ್ರವ್ಯ ಸೇವನೆಯಂತಹ ಅಭ್ಯಾಸಗಳಿಂದ ದೂರವಿರುತ್ತೇವೆ ಮತ್ತು ಭವಿಷ್ಯದ ಪೀಳಿಗೆಯನ್ನು ಅದೇ ರೀತಿ ದೂರವಿರಿಸುತ್ತೇವೆ. ಪರಿಸರದೊಂದಿಗೆ ಹೊಂದಿಕೊಳ್ಳುವುದು ಅಭಿವೃದ್ಧಿಯ ಹಾದಿಯನ್ನು ಸಶಕ್ತಗೊಳಿಸುತ್ತದೆ. ಗುರುನಾನಕ್ ಅವರ ಈ ಸ್ಫೂರ್ತಿ ಮಾನವೀಯತೆಯ ಕಲ್ಯಾಣಕ್ಕೆ ಮತ್ತು ಇಂದಿಗೂ ವಿಶ್ವ ಶಾಂತಿಗೆ ಸಂಬಂಧಿಸಿದೆ.
नानक नाम चढ़दी कला, तेरे भाणे सरबत दा भला !!!
ಸ್ನೇಹಿತರೇ,
ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಪ್ರಪಂಚದಾದ್ಯಂತ ಹರಡಿರುವ ನಿಮ್ಮೆಲ್ಲರನ್ನೂ, ಇಡೀ ದೇಶವನ್ನು ಮತ್ತು ಸಿಖ್ ಸ್ನೇಹಿತರನ್ನು ಮತ್ತೊಮ್ಮೆ ನಾನು ಅಭಿನಂದಿಸುತ್ತೇನೆ ಮತ್ತು ಗುರುನಾನಕ್ ದೇವ್ ಜಿಯವರ 550 ನೇ ಪ್ರಕಾಶೋತ್ಸವದ ನನ್ನ ಶುಭಾಶಯಗಳು. ಗುರು ಗ್ರಂಥ ಸಾಹೀಬರ ಮುಂದೆ ನಿಂತು, ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು, ಇದೊಂದು ನನಗೆ ಸಿಕ್ಕ ಆಶೀರ್ವದ ಮತ್ತು ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು
सतनाम श्री वाहेगुरु !
सतनाम श्री वाहेगुरु !
सतनाम श्री वाहेगुरु !
ये मेरा सौभाग्य है कि मैं आज देश को करतारपुर साहिब कॉरिडोर समर्पित कर रहा हूं।
— PMO India (@PMOIndia) November 9, 2019
जैसी अनुभूति आप सभी को ‘कार सेवा’ के समय होती है, वही मुझे इस वक्त हो रही है।
मैं आप सभी को, पूरे देश को, दुनिया भर में बसे सिख भाई-बहनों को बहुत-बहुत बधाई देता हूं: PM @narendramodi
गुरु नानक देव जी के 550वें प्रकाश-उत्सव से पहले, इंटीग्रेटेड चेकपोस्ट, करतारपुर साहिब कॉरिडोर का खुलना, हम सभी के लिए दोहरी खुशी लेकर आया है।
— PMO India (@PMOIndia) November 9, 2019
इस कॉरिडोर के बनने के बाद, अब गुरुद्वारा दरबार साहिब के दर्शन आसान हो जाएंगे: PM @narendramodi
गुरु नानक देव जी, सिर्फ सिख पंथ की, भारत की ही धरोहर नहीं, बल्कि पूरी मानवता के लिए प्रेरणा पुंज हैं।
— PMO India (@PMOIndia) November 9, 2019
गुरु नानक देव एक गुरु होने के साथ-साथ एक विचार हैं, जीवन का आधार हैं: PM @narendramodi
अपनी यात्राओं का मकसद, गुरु नानक देव जी ने ही बताया था।
— PMO India (@PMOIndia) November 9, 2019
बाबे आखिआ, नाथ जी, सचु चंद्रमा कूडु अंधारा !!
कूडु अमावसि बरतिआ, हउं भालण चढिया संसारा !!
PM @narendramodi
उन्होंने सीख दी है कि सच्चाई और ईमानदारी से किए गए विकास से हमेशा तरक्की और समृद्धि के रास्ते खुलते हैं।
— PMO India (@PMOIndia) November 9, 2019
उन्होंने सीख दी है कि धन तो आता जाता रहेगा पर सच्चे मूल्य हमेशा रहते हैं: PM @narendramodi
कहते हैं शब्द हमेशा ऊर्जा बनकर वातावरण में विद्यमान रहते हैं।
— PMO India (@PMOIndia) November 9, 2019
करतारपुर से मिली गुरुवाणी की ऊर्जा, सिर्फ हमारे सिख भाई-बहनों को ही नहीं बल्कि हर भारतवासी को अपना आशीर्वाद देगी: PM @narendramodi
करतारपुर में ही उन्होंने प्रकृति के गुणों का गायन किया था। उन्होंने कहा था- “पवणु गुरु, पाणी पिता, माता धरति महतु”!!!
— PMO India (@PMOIndia) November 9, 2019
यानि हवा को गुरु मानो, पानी को पिता और धरती को माता के बराबर महत्व दो: PM @narendramodi
बीते एक साल से देश और विदेश में कीर्तन, कथा, प्रभात फेरी, लंगर, जैसे आयोजनों के माध्यम से गुरु नानक देव की सीख का प्रचार किया जा रहा है।
— PMO India (@PMOIndia) November 9, 2019
इससे पहले गुरु गोबिंद सिंह जी के 350वें प्रकाशोत्सव को भी इसी तरह भव्यता के साथ पूरी दुनिया में मनाया गया था: PM @narendramodi
सुल्तानपुर लोधी को हैरिटेज टाउन बनाने का काम चल रहा है।
— PMO India (@PMOIndia) November 9, 2019
हैरिजेट कॉम्प्लैक्स हो, म्यूजियम हो, ऑडिटोरियम हो, ऐसे अनेक काम यहां या तो पूरे हो चुके हैं या फिर जल्द पूरे होने वाले हैं: PM @narendramodi
केंद्र सरकार ने एक और महत्वपूर्ण फैसला लिया है, जिसका लाभ दुनियाभर में बसे अनेक सिख परिवारों को हुआ है।
— PMO India (@PMOIndia) November 9, 2019
कई सालों से, कुछ लोगों को भारत में आने पर जो दिक्कत थी, अब उन दिक्कतों को दूर कर दिया गया है: PM @narendramodi
हमारी गुरु परंपरा, संत परंपरा, ऋषि परंपरा, ने अलग-अलग कालखंड में, अपने-अपने हिसाब से चुनौतियों से निपटने के रास्ते सुझाए हैं।
— PMO India (@PMOIndia) November 9, 2019
उनके रास्ते जितने तब सार्थक थे, उतने ही आज भी अहम हैं।
राष्ट्रीय एकता और राष्ट्रीय चेतना के प्रति हर संत, हर गुरु का आग्रह रहा है: PM @narendramodi
आइए, इस अहम और पवित्र पड़ाव पर हम संकल्प लें कि गुरु नानक जी के वचनों को अपने जीवन का हिस्सा बनाएंगे।
— PMO India (@PMOIndia) November 9, 2019
हम समाज के भीतर सद्भाव पैदा करने के लिए हर कोशिश करेंगे: PM @narendramodi