Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂಟನ್ ಝೈಲಿಂಗರ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ

ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂಟನ್ ಝೈಲಿಂಗರ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ  ಮೋದಿ ಖ್ಯಾತ ಆಸ್ಟ್ರಿಯಾ ಭೌತವಿಜ್ಞಾನಿ ಆಂಟನ್ ಝೈಲಿಂಗರ್ ಅವರನ್ನು ಭೇಟಿಯಾದರು‌. ಶ್ರೀ ಝೈಲಿಂಗರ್ ಅವರು ಕ್ವಾಂಟಮ್ ಭೌತಶಾಸ್ತ್ರಕ್ಕೆ ನೀಡಿರುವ ಕೊಡುಗೆಗಾಗಿ 2022  ರಲ್ಲಿ ಅವರಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಸಂದಿತು.

ಭಾರತೀಯ ಕ್ವಾಂಟಮ್ ಮಿಷನ್ ಬಗೆಗಿನ ತಮ್ಮ  ಆಲೋಚನೆಗಳನ್ನು ಭೌತವಿಜ್ಞಾನಿಯೊಂದಿಗೆ ಪ್ರಧಾನಿ ಹಂಚಿಕೊಂಡರು. ಸಮಕಾಲೀನ ಸಮಾಜದ ಮೇಲಡ ಕ್ವಾಂಟಮ್ ಕಂಪ್ಯೂಟಿಂಗ್‌ ಮತ್ತು ಕ್ವಾಂಟಮ್ ಟೆಕ್ ಪಾತ್ರದ ಬಗ್ಗೆ ಮತ್ತು ಈ ವಲಯ ಭವಿಷ್ಯಕ್ಕೆ ನೀಡಲಿರುವ ಭರವಸೆಯ ಬಗ್ಗೆ ಪ್ರಧಾನಿ ಮತ್ತು ಝೈಲಿಂಗರ್ ಪರಸ್ಪರ ವಿಚಾರಗಳನ್ನು ಹಂಚಿಕೊಂಡರು.

 

*****