Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳದ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ನೇಪಾಳದ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ವಿಶ್ವ ಸಂಸ್ಥೆಯ 79ನೇ ಸಾಮಾನ್ಯ ಅಧಿವೇಶನ ಹಿನ್ನೆಲೆಯಲ್ಲಿ ನೇಪಾಳದ ಗೌರವಾನ್ವಿತ ಪ್ರಧಾನಿ ಶ್ರೀ ಕೆ.ಪಿ. ಶರ್ಮಾ ಒಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ಮಾಡಿದರು.

ಭಾರತ – ನೇಪಾಳ ನಡುವಿನ ಅಸಾಧಾರಣ ಮತ್ತು ನಿಕಟ ದ್ವಿಪಕ್ಷೀಯ ಬಾಂಧವ್ಯ ಕುರಿತಂತೆ ಉಭಯ ನಾಯಕರು ಪ್ರಗತಿ ಪರಿಶೀಲನೆ ನಡೆಸಿದರು ಮತ್ತು ಅಭಿವೃದ್ಧಿಯಲ್ಲಿ ಪಾಲುದಾರಿಕೆ, ಜಲವಿದ್ಯುತ್ ವಲಯದಲ್ಲಿ ಸಹಕಾರ, ಜನರಿಂದ ಜನರ ಸಂಬಂಧಗಳು ಮತ್ತು ಭೌತಿಕ, ಡಿಜಿಟಲ್ ಮತ್ತು ಇಂಧನ ಕ್ಷೇತ್ರದಲ್ಲಿ ಸಂಪರ್ಕವನ್ನು ಹೆಚ್ಚಿಸುವುದು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸೌರ ಮೈತ್ರಿ [ಐಎಸ್ಎ]ಗೆ ನೇಪಾಳ 101 ನೇ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು ಮತ್ತು ಹವಾಮಾನ ಬದಲಾವಣೆ ವಲಯದಲ್ಲಿ ಪ್ರಾದೇಶಿಕ ಪ್ರತಿಕ್ರಿಯೆ ಕುರಿತಂತೆ ಒತ್ತಿ ಹೇಳಿದ್ದಾರೆ.

ನೆರೆ ಹೊರೆ ಮೊದಲು ನೀತಿಯಡಿ ನೇಪಾಳ ಆದ್ಯತೆಯ ಸಹಭಾಗಿ ದೇಶ. ನೆರೆ ಹೊರೆ ಮೊದಲು ನೀತಿಯ ಮೂಲಕ ಭಾರತ – ನೇಪಾಳದೊಂದಿಗೆ ಉನ್ನತ ಮಟ್ಟದ ನಿಯಮಿತ ಸಭೆಗಳನ್ನು ನಡೆಸಿ ಪರಸ್ಪರ ವಿನಿಮಯಮಾಡಿಕೊಳ್ಳುವ ಸಂಪ್ರದಾಯವನ್ನು ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.

 

*****