Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳದ ಉಪ ಪ್ರಧಾನಿ ಹಾಗೂ ಗೃಹ ವ್ಯವಹಾರಗಳ ಸಚಿವ ಶ್ರೀ ಬಿಮಲೇಂದ್ರ ನಿಧಿ ಅವರಿಂದ ಪ್ರಧಾನಮಂತ್ರಿ ಭೇಟಿ

ನೇಪಾಳದ ಉಪ ಪ್ರಧಾನಿ ಹಾಗೂ ಗೃಹ ವ್ಯವಹಾರಗಳ ಸಚಿವ ಶ್ರೀ ಬಿಮಲೇಂದ್ರ ನಿಧಿ ಅವರಿಂದ ಪ್ರಧಾನಮಂತ್ರಿ ಭೇಟಿ


ನೇಪಾಳದ ಉಪ ಪ್ರಧಾನಮಂತ್ರಿ ಹಾಗೂ ಗೃಹ ವ್ಯವಹಾರಗಳ ಖಾತೆ ಸಚಿವ ಶ್ರೀ ಬಿಮಲೇಂದ್ರ ನಿಧಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರು ನೇಪಾಳದ ಉಪ ಪ್ರಧಾನಮಂತ್ರಿಯಾಗಿ ಹಾಗೂ ಗೃಹ ವ್ಯವಹಾರಗಳ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಬಿಮಲೇಂದ್ರ ನಿಧಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಪ್ರಧಾನಮಂತ್ರಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ನೇತೃತ್ವದ ನೇಪಾಳದ ಹೊಸ ಸರ್ಕಾರಕ್ಕೆ ಪ್ರಧಾನಿ ಶುಭಾಶಯಗಳನ್ನೂ ಸಲ್ಲಿಸಿದರು.

ನೇಪಾಳದಲ್ಲಿನ ಬೆಳವಣಿಗೆಗಳ ಬಗ್ಗೆ ಶ್ರೀ ಬಿಮಲೇಂದ್ರ ನಿಧಿ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು.

ಭಾರತ ಮತ್ತು ನೇಪಾಳದ ನಡುವಿನ ಬಾಂಧವ್ಯದ ಬಗ್ಗೆ ಪ್ರಸ್ತಾಪಿಸಿ, ಇದು ಕೇವಲ ಎರಡು ಸರ್ಕಾರಗಳ ನಡುವಿನ ಬಾಂಧವ್ಯವಲ್ಲ, ಅದು ಎರಡೂ ದೇಶಗಳ ಜನರ ನಡುವಿನ ಬಾಂಧವ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಾಂಪ್ರದಾಯಿಕ ಬಾಂಧವ್ಯ ಮತ್ತು ಗೆಳೆತನವನ್ನು ಹಾಗೂ ನೇಪಾಳ ಜನತೆಯೊಂದಿಗಿರುವ ಆತ್ಮೀಯತೆಯನ್ನು ಬಲಪಡಿಸಲು ಭಾರತ ಬದ್ಧವಾಗಿದೆ ಎಂದೂ ಹೇಳಿದರು.

ಭೂಕಂಪಾನಂತರದ ನಿರ್ಮಾಣ ಪ್ರಯತ್ನದಲ್ಲಿ ನೇಪಾಳದ ಜನತೆಗೆ ಮತ್ತು ಸರ್ಕಾರಕ್ಕೆ ಬೆಂಬಲ ನೀಡಲು ಭಾರತ ಸಂಪೂರ್ಣ ಬದ್ಧ ಎಂದೂ ಪ್ರಧಾನಮಂತ್ರಿಗಳು ತಿಳಿಸಿದರು.

ನೇಪಾಳದ ಪ್ರಧಾನಮಂತ್ರಿಯವರಿಗೆ ತಮ್ಮ ಅನುಕೂಲದ ಹತ್ತಿರದ ದಿನಾಂಕದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿಯವರು ಆಹ್ವಾನವನ್ನು ನೀಡಿದರು.

***

AKT/SH