ಕ್ರಮ ಸಂಖ್ಯೆ |
ಒಡಂಬಡಿಕೆ/ಒಪ್ಪಂದ |
ಸಂಕ್ಷಿಪ್ತ ವಿವರ |
ಭಾರತದ ಪರ ಅಂಕಿತ ಹಾಕಿದವರು |
ನೇಪಾಳದ ಪರ ಅಂಕಿತ ಹಾಕಿದವರು |
1 |
ನೇಪಾಳದ ಭೂಕಂಪಪೀಡಿತ ಪ್ರದೇಶಗಳ ಪುನಾರಚನೆಗೆ ಭಾರತವು ನೀಡಿದ 250 ದಶಲಕ್ಷ ಡಾಲರ್ ನೆರವನ್ನು ಉಪಯೋಗಿಸಿಕೊಳ್ಳುವ ಸಂಬಂಧದ ಒಡಂಬಡಿಕೆ. |
ಇದಕ್ಕಾಗಿ ವಸತಿ, ಆರೋಗ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಪರಂಪರೆಯ ತಾಣ ಈ ನಾಲ್ಕು ವಲಯಗಳನ್ನು ಗುರುತಿಸಲಾಗಿದೆ. ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದ ತೀವ್ರ ಹಾನಿಗೊಳಗಾದ ಅಲ್ಲಿನ 14 ಜಿಲ್ಲೆಗಳಲ್ಲಿ 50,000 ಮನೆಗಳನ್ನು ಕಟ್ಟಲು 100 ದಶಲಕ್ಷ ಡಾಲರ್ ನೆರವನ್ನು ಬಳಸಿಕೊಳ್ಳಲಾಗುವುದು. ಮಿಕ್ಕ ನೆರವಿನಲ್ಲಿ ತಲಾ 50 ದಶಲಕ್ಷ ಡಾಲರುಗಳನ್ನು ಆರೋಗ್ಯ, ಶಿಕ್ಷಣ ಮತ್ತು ಭೂಕಂಪಪೀಡಿತ 31 ಜಿಲ್ಲೆಗಳ ಸಾಂಸ್ಕೃತಿಕ ಪರಂಪರೆ ತಾಣಗಳ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳಲಾಗುವುದು. |
ಶ್ರೀಮತಿ ಸುಷ್ಮಾ ಸ್ವರಾಜ್, ವಿದೇಶಾಂಗ ವ್ಯವಹಾರಗಳ ಸಚಿವರು.
|
ಕಮಲ್ ಥಾಪಾ, ಉಪಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು. |
2 |
ನೇಪಾಳದ ಥೇರಾಯಿ ವಲಯದಲ್ಲಿ ರಸ್ತೆ ಮೂಲಸೌಲಭ್ಯ ಬಲವರ್ಧನೆಗೆ ಸಂಬಂಧಿಸಿದಂತೆ ಒಡಂಬಡಿಕೆ. |
ಥೇರಾಯಿ ರಸ್ತೆ ಅಭಿವೃದ್ಧಿ ಯೋಜನೆಯ ಹಂತ1ರಲ್ಲಿ ಒಟ್ಟು 518 ಕಿ.ಮೀ. ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಈ ಯೋಜನೆಯ ಪ್ಯಾಕೇಜ್ ಸಂಖ್ಯೆ 2, 3, 4, 5 ಮತ್ತು 6ರ ಅಡಿಯಲ್ಲಿ 17 ರಸ್ತೆ ಮಾರ್ಗಗಳಲ್ಲಿ ಇನ್ನೂ ಮುಗಿಯದೆ ಉಳಿದಿರುವ ಕೆಲಸವನ್ನು ಕ್ಷಿಪ್ರವಾಗಿ ಕೈಗೆತ್ತಿಕೊಂಡು ಮುಗಿಸಲು ಈ ಒಡಂಬಡಿಕೆಯಿಂದ ಸಾಧ್ಯವಾಗಲಿದೆ. ಪ್ಯಾಕೇಜ್1ರ ಅಡಿಯಲ್ಲಿ ಎರಡು ರಸ್ತೆಗಳ ಬಲವರ್ಧನೆಯ ಕೆಲಸವನ್ನು ಕೈಗೆತ್ತಿಕೊಂಡು, 87 ಕಿ.ಮೀ. ರಸ್ತೆ ನಿರ್ಮಾಣವನ್ನು ಈಗಾಗಲೇ ಮುಗಿಸಲಾಗಿದೆ. |
ರಂಜಿತ್ ರೇ ಭಾರತದ ರಾಯಭಾರಿ. |
ಅರ್ಜುನ್‍ಕುಮಾರ್ ಕರ್ಕಿ, ಕಾರ್ಯದರ್ಶಿ, ರಸ್ತೆ ಸಾರಿಗೆ ಸಚಿವಾಲಯ. |
3 |
ನೇಪಾಳ ಸಂಗೀತ ಮತ್ತು ನಾಟಕ ಅಕಾಡೆಮಿ ಹಾಗೂ ಭಾರತದ ಸಂಗೀತ ನಾಟಕ ಅಕಾಡೆಮಿ ನಡುವೆ ಆದ ಒಡಂಬಡಿಕೆ. |
ಈ ಒಡಂಬಡಿಕೆಯು ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಪರಿಣಿತರು, ವಿಮರ್ಶಕರು, ನೃತ್ಯಪಟುಗಳು, ವಿದ್ವಾಂಸರು ಮತ್ತು ಚಿಂತಕರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಭಾರತ ಮತ್ತು ನೇಪಾಳದ ನಡುವೆ ಸಾಂಸ್ಕೃತಿಕ ಸಂಬಂಧವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. |
ಹೆಲೆನ್ ಆಚಾರ್ಯ, ಕಾರ್ಯದರ್ಶಿ, ಸಂಗೀತ ನಾಟಕ ಅಕಾಡೆಮಿ. |
ದೀಪ್‍ಕುಮಾರ್ ಉಪಾಧ್ಯಾಯ, ನೇಪಾಳದ ರಾಯಭಾರಿ. |
4. |
ಪ್ರಯಾಣ ಮಾರ್ಗಗಳಿಗೆ ಸಂಬಂಧಿಸಿದ ಒಡಂಬಡಿಕೆಗಳು, (1) ಕಾಕರಿಬಿಟ್ಟಬಾಂಗ್ಲಾಬಂಧ್ ಕಾರಿಡಾರ್ (2) ವಿಶಾಖಪಟ್ಟಣ ಬಂದರಿನ ಮೂಲಕ ಕಾರ್ಯಾಚರಣೆ. |
(1)ಈ ಒಡಂಬಡಿಕೆಯು ನೇಪಾಳ ಮತ್ತು ಬಾಂಗ್ಲಾದೇಶದ ನಡುವಿನ ಸರಕು ಸಾಗಣೆಯನ್ನು ಸುಲಭಗೊಳಿಸಲಿದೆ. ಅಂದರೆ, ಈ ಒಡಂಬಡಿಕೆಯಿಂದಾಗಿ ಎರಡೂ ದೇಶಗಳ ಮಧ್ಯೆ ಇನ್ನುಮುಂದೆ ನೇಪಾಳದ ಕಾಕರಿಬಿಟ್ಟ ಮತ್ತು ಬಾಂಗ್ಲಾದೇಶದ ಬಾಂಗ್ಲಾಬಂಧ ಕಾರಿಡಾರ್ ನಡುವೆ ಭಾರತದ ಮೂಲಕ ಸರಕುಗಳ ಸಾಗಣೆ ನಡೆಯಲಿದೆ. (2) ಈ ಒಡಂಬಡಿಕೆಯು ಭಾರತದ ವಿಶಾಖಪಟ್ಟಣ ಬಂದರಿನ ಮೂಲಕ ನೇಪಾಳಕ್ಕೆ ಸರಕು ಸಾಗಣೆ ಸೌಲಭ್ಯ ಒದಗಿಸಲಿದೆ. |
ರೀಟಾ ಟಿಯೋಟಿಯಾ, ವಾಣಿಜ್ಯ ಕಾರ್ಯದರ್ಶಿ. (ಭಾರತದ ರಾಯಭಾರಿಯ ಮೂಲಕ ವಿನಿಮಯ ಮಾಡಿಕೊಳ್ಳಲಾಗಿದೆ). |
ನೈಂದ್ರಪ್ರಸಾದ್ ಉಪಾಧ್ಯಾಯ, ವಾಣಿಜ್ಯ ಕಾರ್ಯದರ್ಶಿ. |
5 |
ರೈಲು ಸೌಲಭ್ಯಕ್ಕೆ ಸಂಬಂಧಿಸಿದ ಒಡಂಬಡಿಕೆಗಳು (1) ವಿಶಾಖಪಟ್ಟಣಕ್ಕೆ / ವಿಶಾಖಪಟ್ಟಣದಿಂದ ರೈಲು ಸಂಚಾರ ಸೌಲಭ್ಯ (2) ನೇಪಾಳವು ಬಾಂಗ್ಲಾದೇಶದೊಂದಿಗೆ ಮತ್ತು ಬಾಂಗ್ಲಾದೇಶದ ಮೂಲಕ ವ್ಯಾಪಾರ ವಹಿವಾಟು ನಡೆಸಲು ಸಿಂಗಾಬಾದ್ ಮೂಲಕ ರೈಲು ಸೌಲಭ್ಯ. |
(1) ಈ ಒಡಂಬಡಿಕೆಯು ವಿಶಾಖಪಟ್ಟಣದಿಂದ ನೇಪಾಳಕ್ಕೆ/ನೇಪಾಳದಿಂದ ವಿಶಾಖಪಟ್ಟಣಕ್ಕೆ ರೈಲು ಸಂಚಾರ ಸೌಲಭ್ಯ ಒದಗಿಸಲು ಅನುವು ಮಾಡಿಕೊಡಲಿದೆ. (2) ಈ ಒಪ್ಪಂದವು ನೇಪಾಳವು ಭಾರತದ ಸಿಂಗಾಬಾದ್ ಮೂಲಕ ಬಾಂಗ್ಲಾದೇಶದೊಂದಿಗೆ ಮತ್ತು ಬಾಂಗ್ಲಾದೇಶದ ಮುಖಾಂತರ ವ್ಯಾಪಾರ ವಹಿವಾಟು ನಡೆಸಲು ಅಗತ್ಯವಾದ ರೈಲು ಸೌಲಭ್ಯ ಒದಗಿಸಲು ನೆರವು ನೀಡಲಿದೆ. |
ಎ.ಎಸ್. ಉಪಾಧ್ಯಾಯ ಸಲಹೆಗಾರರು (ಸಂಚಾರ ಮತ್ತು ಸಾಗಣೆ), ರೈಲ್ವೆ ಮಂಡಲಿ, |
ಎ.ಎಸ್. ಉಪಾಧ್ಯಾಯ ಸಲಹೆಗಾರರು (ಸಂಚಾರ ಮತ್ತು ಸಾಗಣೆ), ರೈಲ್ವೆ ಮಂಡಲಿ, |
6 |
ಮುಜಫ್ಫರಪುರ-ಧಲ್ಕೆಬಾರ್ ವಿದ್ಯುತ್ ಪೂರೈಕೆ ಮಾರ್ಗದ ಉದ್ಘಾಟನೆ. [ಆರಂಭದಲ್ಲಿ ಈ ಮಾರ್ಗದ ಮೂಲಕ 80 ಮೆಗಾವ್ಯಾಟ್ ವಿದ್ಯುತ್ತನ್ನು ಪೂರೈಸಲಾಗುವುದು. 2016ರ ಅಕ್ಟೋಬರ್ ಹೊತ್ತಿಗೆ ಇದು 200 ಮೆಗಾವ್ಯಾಟ್ ಆಗಲಿದ್ದು, 2017ರ ಡಿಸೆಂಬರ್ ವೇಳೆಗೆ ಈ ಪ್ರಮಾಣವನ್ನು 600 ಮೆಗಾವ್ಯಾಟ್ ಗಳಿಗೆ ಹೆಚ್ಚಿಸಲಾಗುವುದು] |
ಮುಜಫ್ಫರಪುರ -ಧಲ್ಕೆಬಾರ್ ವಿದ್ಯುತ್ ಪ್ರಸರಣ ಮಾರ್ಗವನ್ನು ನೇಪಾಳದ ಭೂಪ್ರದೇಶದಲ್ಲಿ ಅಲ್ಲಿನ ಸರಕಾರವು 13.5 ದಶಲಕ್ಷ ಡಾಲರ್ ಅಂದಾಜು ವೆಚ್ಚದಲ್ಲಿ ನಿರ್ಮಿಸಲಿದೆ. ಈ ಮಾರ್ಗದಲ್ಲಿ ಮೊದಲಿಗೆ 132 ಕಿಲೋವ್ಯಾಟ್ ವಿದ್ಯುತ್ತನ್ನು ಹರಿಸುವ ಮೂಲಕ ಮೊದಲ ಹಂತದಲ್ಲಿ ತಕ್ಷಣವೇ 80 ಮೆಗಾವ್ಯಾಟ್ ವಿದ್ಯುತ್ತನ್ನು ಪೂರೈಸಲಾಗುವುದು. ನಂತರ, 2016ರ ಅಕ್ಟೋಬರ್ ಹೊತ್ತಿಗೆ ಈ ಮಾರ್ಗದ ಮೂಲಕ 200 ಮೆಗಾವ್ಯಾಟ್ ವಿದ್ಯುತ್ತನ್ನೂ, 2017ರ ಡಿಸೆಂಬರ್ ಹೊತ್ತಿಗೆ 222 ಕಿಲೋವ್ಯಾಟ್ ನೊಂದಿಗೆ ಆರಂಭಿಸಿ, ಅಂತಿಮವಾಗಿ ಈ ಮಾರ್ಗದ ಮೂಲಕ 200 ಮೆಗಾವ್ಯಾಟ್ ವಿದ್ಯುತ್ತನ್ನು ಪ್ರಸರಣ ಮಾಡಲಾಗುವುದು. |
ಎರಡೂ ದೇಶದ ಮಾನ್ಯ ಪ್ರಧಾನಮಂತ್ರಿಗಳಿಂದ ಉದ್ಘಾಟನೆ. |
|
7 |
ಉನ್ನತ ವ್ಯಕ್ತಿಗಳ ತಂಡದ ರಚನೆ |
2014ರ ಜುಲೈನಲ್ಲಿ ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿ ನಡೆದ ಭಾರತ-ನೇಪಾಳ ಜಂಟಿ ಆಯೋಗದ ಸಭೆಯಲ್ಲಿ `ಉನ್ನತ ವ್ಯಕ್ತಿಗಳ ತಂಡ’ (ಎಮಿನೆಂಟ್ ಪರ್ಸನ್ಸ್ ಗ್ರೂಪ್- ಇಪಿಜಿ)ವನ್ನು ರಚಿಸಲು ತೀರ್ಮಾನಿಸಲಾಗಿತ್ತು. ಇದರಲ್ಲಿ ಎರಡೂ ದೇಶಗಳಿಂದ ತಲಾ ನಾಲ್ಕು ಜನರಂತೆ, ಒಟ್ಟು ಎಂಟು ಜನ ಸದಸ್ಯರಿರಬೇಕೆಂದೂ ಆ ಸಭೆ ನಿರ್ಧರಿಸಿತ್ತು. ಸದಸ್ಯರನ್ನು ನೇಮಿಸುವಾಗ ಆದಷ್ಟೂ ಮಟ್ಟಿಗೆ ಒಬ್ಬ ಸಂಸದೀಯ ಪಟು, ಒಬ್ಬ ನ್ಯಾಯವಾದಿ, ಒಬ್ಬ ಆರ್ಥಿಕ ತಜ್ಞರು ಮತ್ತು ಒಬ್ಬ ನಾಗರಿಕ ಸಮಾಜದ ಸಕ್ರಿಯ ಕಾರ್ಯಕರ್ತರಿಗೆ ಆದ್ಯತೆ ಕೊಡಲು ಒಪ್ಪಿಕೊಳ್ಳಲಾಗಿದೆ. ಈಗ ಇದರಂತೆ ಇಪಿಜಿ ಯನ್ನು ರಚಿಸಲಾಗಿದೆ. ದ್ವಿಪಕ್ಷೀಯ ಬಾಂಧವ್ಯವನ್ನು ಪರಾಮರ್ಶಿಸುವುದು ಮತ್ತು ಪರಸ್ಪರ ಬಾಂಧವ್ಯ ಬಲಪಡಿಸಲು ಸಾಂಸ್ಥಿಕ ವ್ಯವಸ್ಥೆಯ ರಚನೆಯೂ ಸೇರಿದಂತೆ ಅಗತ್ಯ ಶಿಫಾರಸುಗಳನ್ನು ಮಾಡುವುದು ಈ ತಂಡದ ಜವಾಬ್ದಾರಿಯಾಗಿದೆ. |
ಇಪಿಜಿ ಯಲ್ಲಿರುವ ನೇಪಾಳದ ಸದಸ್ಯರು: ಸಂಸತ್ ಸದಸ್ಯರಾದ ಶ್ರೀ ರಾಜನ್ ಭಟ್ಟಾರಾಯ್, ಮಾಜಿ ಹಣಕಾಸು ಸಚಿವರಾದ ಶ್ರೀ ಭೇಕ್ ಬಹದ್ದೂರ್ ಥಾಪಾ, ಸಿಐಎಎ ಮಾಜಿ ಅಧ್ಯಕ್ಷರಾದ ಶ್ರೀ ಸೂರ್ಯನಾಥ್ ಉಪಾಧ್ಯಾಯ ಮತ್ತು ಮಾಜಿ ಕಾನೂನು ಸಚಿವರಾದ ಶ್ರೀ ನೀಲಾಂಬರ್ ಆಚಾರ್ಯ. ಇಪಿಜಿ ಯಲ್ಲಿರುವ ನೇಪಾಳದ ಸದಸ್ಯರು: ಸಂಸತ್ ಸದಸ್ಯರಾದ ಶ್ರೀ ಭಗತ್ ಸಿಂಗ್ ಕೋಶಿಯಾರಿ, ಸಿಕ್ಕಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಮಹೇಂದ್ರ ಲಾಮಾ, ಐಡಿಎಸ್ಎ ಮಹಾನಿರ್ದೇಶಕರಾದ ಶ್ರೀ ಜಯಂತ್ ಪ್ರಸಾದ್ ಮತ್ತು ವಿಐಎಫ್ ಹಾಗೂ ಹಿರಿಯ ಫೆಲೋ ಶ್ರೀ ಬಿ.ಸಿ.ಉಪ್ರೇತಿ. |