Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಪ್ರಧಾನಮಂತ್ರಿಗಳಿಂದ ಗೌರವ ನಮನ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರಾಕ್ರಮ ದಿನದ ಅಂಗವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಚಳವಳಿಗೆ ನೇತಾಜಿಯವರ ಕೊಡುಗೆ ಅನನ್ಯ; ಅವರು ಶೌರ್ಯ ಮತ್ತು ಧೈರ್ಯದ ಪ್ರತೀಕ ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ. 

ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಅವರು ಹೀಗೆ ಬರೆದಿದ್ದಾರೆ:

“ಇಂದು ಪರಾಕ್ರಮ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ.  ಭಾರತದ ಸ್ವಾತಂತ್ರ್ಯ ಚಳವಳಿಗೆ ಅವರ ಕೊಡುಗೆ ಅನನ್ಯ.  ಅವರು ಸ್ಥೈರ್ಯ ಮತ್ತು ಧೈರ್ಯದ ಪ್ರತೀಕ. ಅವರ ದೂರದೃಷ್ಟಿಯ ಭಾರತ ನಿರ್ಮಾಣಕ್ಕೆ ನಾವು ಕಾರ್ಯ ನಿರ್ವಹಿಸುತ್ತಿರುವಾಗ ಅವರ ಚಿಂತನೆಗಳು ನಮ್ಮನ್ನು ಪ್ರೇರೇಪಿಸುತ್ತವೆ.”

“ಪರಾಕ್ರಮ ದಿನದ ಕಾರ್ಯಕ್ರಮದಲ್ಲಿ ನಾನು ಇಂದು ಬೆಳಗ್ಗೆ 11:25ರ ಸುಮಾರಿಗೆ ನನ್ನ ಸಂದೇಶವನ್ನು ಹಂಚಿಕೊಳ್ಳುತ್ತೇನೆ. ಸುಭಾಷ್ ಬಾಬು ಅವರು ಸವಾಲುಗಳನ್ನು ಎದುರಿಸಲು ಹೊಂದಿದ್ದ ಧೈರ್ಯವನ್ನು ನಮ್ಮ ಮುಂದಿನ ಪೀಳಿಗೆ ಆಲಿಂಗಿಸಿಕೊಳ್ಳಲು ಈ ದಿನ ಸ್ಫೂರ್ತಿ ತುಂಬಲಿ.”

 

 

*****