Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ನೆದರ್ಲ್ಯಾಂಡ್ ಪ್ರಧಾನಿ ಜೊತೆ ಪ್ರಧಾನ ಮಂತ್ರಿ ಮೋದಿ ಮಾತುಕತೆ

​​​​​​​ನೆದರ್ಲ್ಯಾಂಡ್ ಪ್ರಧಾನಿ ಜೊತೆ ಪ್ರಧಾನ ಮಂತ್ರಿ ಮೋದಿ ಮಾತುಕತೆ


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೆದರ್ಲ್ಯಾಂಡ್ ಪ್ರಧಾನಿ ಗೌರವಾನ್ವಿತ ಮಾರ್ಕ್ ರುಟ್ಟೆ ಅವರ ಜೊತೆ ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ ಜಿ20 ಶೃಂಗಸಭೆಯ ಬದಿಯಲ್ಲಿ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. 

ಭಾರತದ ಜಿ20 ಅಧ್ಯಕ್ಷತೆ ಮತ್ತು ಶೃಂಗಸಭೆಯ ಯಶಸ್ಸಿಗಾಗಿ ಈ ಸಂದರ್ಭದಲ್ಲಿ ನೆದರ್ಲ್ಯಾಂಡ್ ಪ್ರಧಾನಮಂತ್ರಿ ರುಟ್ಟೆ ಅವರು ಪ್ರಧಾನ ಮಂತ್ರಿ ಮೋದಿಯವರನ್ನು ಅಭಿನಂದಿಸಿದರು. ಚಂದ್ರಯಾನ ಮಿಷನ್‌ನ ಯಶಸ್ಸಿಗೆ ಭಾರತವನ್ನು ಅಭಿನಂದಿಸಿದರು ಮತ್ತು ಚಂದ್ರನಲ್ಲಿಗೆ ಆದಿತ್ಯ ಮಿಷನ್‌ಗೆ ಕೂಡ ತಮ್ಮ ಶುಭಾಶಯಗಳನ್ನು ತಿಳಿಸಿದರು.

ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶುದ್ಧ ಇಂಧನ ಮತ್ತು ಹಸಿರು ಜಲಜನಕ, ಸೆಮಿಕಂಡಕ್ಟರ್‌ಗಳು, ಸೈಬರ್ ಮತ್ತು ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸೇರಿದಂತೆ ದ್ವಿಪಕ್ಷೀಯ ಪಾಲುದಾರಿಕೆಯನ್ನು ಆಳಗೊಳಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಇಬ್ಬರೂ ನಾಯಕರ ಚರ್ಚೆಗಳು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳನ್ನು ಒಳಗೊಂಡಿದ್ದವು

***