Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ: ಪ್ರಧಾನಿ ಮೋದಿ 


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ನೋಟಗಳನ್ನು ಹಂಚಿಕೊಂಡಿದ್ದಾರೆ. ತಾವು ಹಂಚಿಕೊಂಡ ವಿಡಿಯೋಗೆ ಧ್ವನಿ ರೂಪದಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. 

ಪ್ರಧಾನ ಮಂತ್ರಿಗಳು ತಮ್ಮ ಟ್ವೀಟ್ ನಲ್ಲಿ: ಸಂಸತ್ತಿನ ನೂತನ ಕಟ್ಟಡವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಈ ವೀಡಿಯೊ ಐತಿಹಾಸಿಕ ಕಟ್ಟಡದ ನೋಟವನ್ನು ನಮಗೆ ನೀಡುತ್ತದೆ.

ಈ ಸಂದರ್ಭದಲ್ಲಿ ನಿಮ್ಮಲ್ಲಿ ನಾನು ವಿಶೇಷ ಮನವಿಯೊಂದನ್ನು ಮಾಡುತ್ತೇನೆ, ಈ ವೀಡಿಯೊವನ್ನು ನಿಮ್ಮ ಸ್ವಂತ ಧ್ವನಿಯಲ್ಲಿ ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ಅವುಗಳಲ್ಲಿ ಕೆಲವನ್ನು ನಾನು ಮರು-ಟ್ವೀಟ್ ಮಾಡುತ್ತೇನೆ. http://”#MyParliamentMyPride” ಎಂಬ ಟ್ಯಾಗ್ ಲೈನ್ ಬಳಸಲು ಮರೆಯಬೇಡಿ ಎಂದು ಕೇಳಿಕೊಂಡಿದ್ದಾರೆ.

 

***