ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ನೂತನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ (ಎನ್‌ಐಟಿ) ಶಾಶ್ವತ ಕ್ಯಾಂಪಸ್‌ಗಳ ಸ್ಥಾಪನೆಗೆ 2021 – 2022 ರವೆರೆಗೆ ಒಟ್ಟು 4371.90 ಕೋ.ರೂ.ಗಳ ಪರಿಷ್ಕೃತ ವೆಚ್ಚ ಅಂದಾಜುಗಳಿಗೆ ಅನುಮೋದನೆ ನೀಡಿದೆ.
ಈ ಎನ್‌ಐಟಿಗಳನ್ನು 2009 ರಲ್ಲಿ ಸ್ಥಾಪಿಸಲಾಗಿತ್ತು. 2010-2011ರ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಸೀಮಿತ ಸ್ಥಳ ಮತ್ತು ಮೂಲಸೌಕರ್ಯಗಳೊಂದಿಗೆ ಇವು ಕಾರ್ಯನಿರ್ವಹಿಸುತ್ತಿವೆ. ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ತಡವಾಗಿ ಅಂತಿಮಗೊಳಿಸಿದ್ದರಿಂದ ಮತ್ತು ನಿರ್ಮಾಣ ಕಾರ್ಯಗಳ ಅನುಮೋದಿತ ವೆಚ್ಚವು ನೈಜತೆಯ ಅವಶ್ಯಕತೆಗಳಿಗಿಂತ ತೀರಾ ಕಡಿಮೆ ಇದ್ದುದರಿಂದ ಶಾಶ್ವತ ಕ್ಯಾಂಪಸ್‌ನಲ್ಲಿನ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.
ಅನುಮೋದಿತ ಪರಿಷ್ಕೃತ ವೆಚ್ಚದ ಅಂದಾಜುಗಳಿಂದಾಗಿ, ಈ ಎನ್ಐಟಿಗಳು ತಮ್ಮಶಾಶ್ವತ ಕ್ಯಾಂಪಸ್‌ಗಳಿಂದ 2022 ಮಾರ್ಚ್ 31 ರೊಳಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಈ ಕ್ಯಾಂಪಸ್‌ಗಳಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ಸಾಮರ್ಥ್ಯವು 6320 ಆಗಿರುತ್ತದೆ.
ಎನ್ಐಟಿಗಳು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಬೋಧನಾ ಸಂಸ್ಥೆಗಳಾಗಿವೆ. ಉತ್ತಮ-ಗುಣಮಟ್ಟದ ತಾಂತ್ರಿಕ ಶಿಕ್ಷಣದೊಂದಿಗೆ ಗಮನಾರ್ಹ ಉಪಸ್ಥಿತಿಯನ್ನು ಹೊಂದಿವೆ. ಈ ಸಂಸ್ಥೆಗಳು ಉತ್ತಮ ಗುಣಮಟ್ಟದ ತಾಂತ್ರಿಕ ಮಾನವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ, ಇದು ದೇಶಾದ್ಯಂತ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುತ್ತದೆ.
**********