Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರಿಯಲ್ಲಿ ಪ್ರಧಾನಮಂತ್ರಿಗಳಿಂದ ಪೂಜೆ ಸಲ್ಲಿಕೆ

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರಿಯಲ್ಲಿ ಪ್ರಧಾನಮಂತ್ರಿಗಳಿಂದ ಪೂಜೆ ಸಲ್ಲಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮುದ್ರದಾಳಕ್ಕೆ ಹೊಕ್ಕು ಮುಳುಗಿದ ನಗರವಾದ ದ್ವಾರಕೆಯಲ್ಲಿ ಪೂಜೆ ಸಲ್ಲಿಸಿದರು. ಈ ಅನುಭವ ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮೂಲಗಳಿಗೆ ಅಪರೂಪದ ಮತ್ತು ಆಳವಾದ ಬಾಂಧವ್ಯ ನೀಡಿದೆ. 

ತನ್ನ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯೊಂದಿಗೆ ಸಮುದ್ರದಾಳದಲ್ಲಿ ಕಲ್ಪನಾಕರ್ಷಣೆಯನ್ನು ಮುಂದುವರಿಸಿರುವ ನಗರವಾದ ದ್ವಾರಕೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ಪ್ರಾರ್ಥನೆ ಸಲ್ಲಿಸಿದರು. ಗೌರವ ಸೂಚಕವಾಗಿ ಅವರು ನವಿಲುಗರಿ ಅರ್ಪಿಸಿದರು.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ:

“ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರಿಯಲ್ಲಿ ಪೂಜೆ ಸಲ್ಲಿಸಿದ್ದು ಅತ್ಯಂತ ದೈವೀಕ ಅನುಭವವಾಗಿತ್ತು. ಆಧ್ಯಾತ್ಮಿಕ ಭವ್ಯತೆ ಮತ್ತು ಸಮಯಾತೀತ ಭಕ್ತಿಯ ಪ್ರಾಚೀನ ಯುಗದೊಂದಿಗೆ ಸಂಪರ್ಕಿಸಿದ ಅನುಭೂತಿಯನ್ನು ನಾನು ಪಡೆದಂತೆ ಭಾಸವಾಯಿತು. ಭಗವಂತ ಶ್ರೀ ಕೃಷ್ಣನು ನಮ್ಮೆಲ್ಲರನ್ನೂ ಹರಸಲಿ”

***