ಸ್ನೇಹಿತರೆ, ಇಂದು ನನ್ನ ಕೆಲಸ ನಿಮ್ಮ ಮಾತು ಕೇಳುವುದು, ಅದನ್ನು ತಿಳಿದುಕೊಳ್ಳುವುದಾಗಿದೆ. ನಿಮ್ಮ ಮಾತು ಕೇಳುವುದು ಮತ್ತು ನಿಮ್ಮನ್ನು ಅರಿತುಕೊಳ್ಳುವುದು ತುಂಬಾ ಅಗತ್ಯವಾಗಿದೆ ಏಕೆಂದರೆ, ನಾನು ಸಾರ್ವಜನಿಕ ರೂಪದಲ್ಲಿ ಹೇಳುತ್ತಿರುತ್ತೇನೆ ಮತ್ತು ಇದು ನನ್ನ ನಿರ್ಣಯವೂ ಆಗಿದೆ. ಏಕೆಂದರೆ ಇದು ಇಷ್ಟು ದೊಡ್ಡ ದೇಶ ಮತ್ತು ಸರ್ಕಾರ ತಾನು ದೇಶವನ್ನು ನಡೆಸುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದರೆ, ಆಗ ಈ ದೇಶದ ವಿಧಿಯ ಬಗ್ಗೆ ಹೇಳುವುದು ಕಷ್ಟವಾಗುತ್ತದೆ. ಶೈಲ್ ಚತುರ್ವೇದಿ ಎಂಬ ಹಿಂದಿನ ತಲೆಮಾರಿನ ಒಬ್ಬ ಕವಿ ಇದ್ದಾರೆ. ಅವರು ಉತ್ತಮವಾಗಿ ವಿಡಂಬನಾತ್ಮಕವಾಗಿ ಬರೆದಿದ್ದಾರೆ: ಒಮ್ಮೆ ಒಬ್ಬ ರಾಜಕಾರಣಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರಂತೆ, ಅವರು ತಮ್ಮ ಕಾರು ಚಾಲಕನಿಗೆ ಅದು ತಾವೇ ಕಾರು ಓಡಿಸುವುದಾಗಿ ಹೇಳಿದರಂತೆ. ಆಗ ಚಾಲಕ ತಾನು ಕಾರಿನಿಂದ ಇಳಿಯುವುದಾಗಿ ಹೇಳಿದನಂತೆ. ರಾಜಕಾರಣಿ ಕೇಳಿದರು ಏಕೆ ಎಂದು. ಚಾಲಕ ಹೇಳಿದನಂತೆ : ಸಾರ್, ಯಾರು ಬೇಕಾದರೂ ನಡೆಸುತ್ತಾರೆ ಎನ್ನಲು ಇದು ಸರ್ಕಾರ ಅಲ್ಲ. ಕಾರು. ಹೀಗಾಗಿ ನಮ್ಮ ದೇಶದಲ್ಲಿ ಇದು ಹೊಸ ಆಲೋಚನೆ ಏನಲ್ಲ. ನಾವು ಸ್ವಲ್ಪ ಹಿಂದೆ ಹೋದರೆ, ಅದೂ 50 ವರ್ಷಗಳಷ್ಟು ಹಿಂದೆ ಹೋದರೆ, ಆಗ ನಮಗೆ ಸರ್ಕಾರದ ಪಾತ್ರದ ಅರಿವಾಗುತ್ತದೆ, ಅದರ ಉಪಸ್ಥಿತಿ ಅತ್ಯಲ್ಪವಾಗಿತ್ತು ಎಂಬುದು ತಿಳಿಯುತ್ತದೆ. ಸಾಮಾಜಿಕ ರಚನೆಯೇ ಹಾಗಿತ್ತು. ಸಾಮಾಜಿಕ ವ್ಯವಸ್ಥೆಗೆ ಬಲ ನೀಡುತ್ತಿತ್ತು. ಹಲವು ಕಡೆಗಳಲ್ಲಿ ಗ್ರಂಥಾಲಯಗಳನ್ನು ಕಟ್ಟಲಾಗಿದೆ. ಯಾರಾದರೂ ಹೇಳಿ ಇದನ್ನು ಸರ್ಕಾರ ಕಟ್ಟಿದ್ದೇ? ಸಮಾಜದ ಹಲವು ನಾಯಕರು, ತಮ್ಮ ಇಚ್ಛಾನುಸಾರ ಈ ಸೌಲಭ್ಯ ಕಲ್ಪಿಸಿದ್ದಾರೆ. ಶಿಕ್ಷಣ ಸಹ, ನಮ್ಮ ದೇಶದಲ್ಲಿ ಶಿಕ್ಷಣದೊಂದಿಗೆ ಹಣ, ವ್ಯಾಪಾರ ಮತ್ತು ವಾಣಿಜ್ಯ ಹಿತ ಸೇರಿದಾಗ ಅದರ ಸ್ವರೂಪ ಸಂಪೂರ್ಣ ಬದಲಾಗಿ ಹೋಯಿತು. ಆದಾಗ್ಯೂ, ಒಂದು ಕಾಲವಿತ್ತು, ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ಜನರು ಅಭಿವೃದ್ಧಿಪಡಿಸಿದ್ದರು ಅದನ್ನು ಅವರು, ಸಮರ್ಪಣಾಭಾವದಿಂದ ಮಾಡಿದ್ದರು. ನೀರಿನ ಕೊರತೆ ಎದುರಿಸುತ್ತಿದ್ದ ಪ್ರದೇಶಗಳಿಗೆ ನೀರನ್ನು ಕೂಡ ಸಾಮಾಜಿಕ ಸ್ವರೂಪದಲ್ಲಿ ಪೂರೈಸಲಾಗುತ್ತಿತ್ತು. ನಾವು ರಾಜಾಸ್ಥಾನ ಅಥವಾ ಗುಜರಾತ್ ಕಡೆ ಹೋದರೆ, ಅಲ್ಲಿ ನಾವು ಕೆರೆಗಳನ್ನು ನೋಡುತ್ತೇವೆ. ಅವು ಸರ್ಕಾರ ಕಟ್ಟಿದ್ದಲ್ಲ. ಶ್ರೀಸಾಮಾನ್ಯರು ಈ ಆಂದೋಲನ ಮಾಡುತ್ತಿದ್ದರು. ಅವರು ಸಮಾಜದ ನಾಯಕರಾಗಿ ಈ ಕಾರ್ಯ ಮಾಡುತ್ತಿದ್ದರು. ಹೀಗಾಗಿ ನಮ್ಮ ದೇಶದಲ್ಲಿ, ಸರ್ಕಾರದ ಮೂಲಕ ವ್ಯವಸ್ಥೆ ಆಗಬಹುದು, ಆದರೆ, ಪ್ರಗತಿ ಸದಾ ಸಮಾಜದ ವಿಭಿನ್ನ ಸಾಮರ್ಥ್ಯ, ಸಮರ್ಪಣೆಯ ಮೂಲಕವೇ ಆಗುತ್ತದೆ. ಈಗ ಕಾಲ ಬದಲಾಗಿದೆ. ಬದಲಾದ ಪರಿಸ್ಥಿತಿಗೆ ನಾವೂ ಹೊಂದಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸಮಾಜದಲ್ಲಿ ಒಬ್ಬರು ಧನ ಸಂಪನ್ನರಾಗಿರುತ್ತಾರೆ,ಮತ್ತೊಬ್ಬರು ಜ್ಞಾನ ಸಂಪನ್ನರಾಗಿರುತ್ತಾರೆ, ಕೆಲವರಲ್ಲಿ ಅನುಭವ ಸಂಪನ್ನತೆ ಇರುತ್ತದೆ ಮತ್ತು ಇನ್ನೊಬ್ಬರಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಇರುತ್ತದೆ. ಈ ಶಕ್ತಿಗಳು ಚದುರಿಹೋಗಿರುತ್ತವೆ, ಅವುಗಳನ್ನು ಒಂದೇ ದಾರದಲ್ಲಿ ಪೋಣಿಸಿದರೆ, ಆಗ ಅದು ಈ ಭಾರತ ಮಾತೆಗೆ ಶೋಭೆ ತರುವಂಥ ಮಾಲೆ ಆಗುತ್ತದೆ. ಹೀಗಾಗಿ, ಸಮಾಜದ ಇಂಥ ಶಕ್ತಿಗಳನ್ನು ಹೇಗೆ ಜೋಡಿಸಬೇಕು ಎಂಬ ಪ್ರಯತ್ನ ಇದಾಗಿದೆ. ನೀವು ಸರ್ಕಾರದ ಕಾರ್ಯಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಇವು ಮಾಧ್ಯಮಗಳಲ್ಲಿ ಬರುವುದಿಲ್ಲ. ಕೆಲವು ಮೀಡಿಯಾಗೆ ಅಮುಖ್ಯವೆನಿಸುತ್ತದೆ, ಆದರೂ ಅದು ಮುಖ್ಯವಾಗಿರುತ್ತದೆ. ನೀವು ನೋಡಿರಬಹುದು, ಸರ್ಕಾರದಲ್ಲಿ ಪದ್ಮಶ್ರೀ, ಪದ್ಮವಿಭೂಷಣ್ ಪ್ರಶಸ್ತಿಯನ್ನು ಹೇಗೆ ನಿರ್ಧರಿಸಲಾಗುತ್ತಿತ್ತು ಎಂಬುದನ್ನು ನೀವು ನೋಡಿರಬಹುದು. ನೀವು ಪ್ರಶಸ್ತಿಗೆ ಪ್ರಯತ್ನ ಮಾಡಿದ್ದರೆ, ನಿಮಗೆ ದಾರಿಯೂ ತಿಳಿದಿರಬಹುದು. ನಾಯಕರೊಬ್ಬರು ಶಿಫಾರಸು ಮಾಡಿದರೆ, ಸರ್ಕಾರ ಶಿಫಾರಸು ಮಾಡಿದರೆ, ಅದು ಕೂಡ ರಾಜಕೀಯ ಶಿಫಾರಸೆ ಆಗಿರುತ್ತದೆ, ಬಹುತೇಕ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಪದ್ಮ ಪ್ರಶಸ್ತಿಗಳಿಗೆ ಅರ್ಹರೆಂದು ಪರಿಗಣಿತಗಿರುತ್ತಾರೆ.
ನಾವು ಒಂದು ಚಿಕ್ಕ ಸುಧಾರಣೆ ತಂದೆವು, ಇದಕ್ಕೆ ಯಾರೊಬ್ಬರ ಶಿಫಾರಸಿನ ಅಗತ್ಯವಿಲ್ಲ ಎಂದೆವು. ಯಾರು ಬೇಕಾದರೂ ಇದಕ್ಕೆ ಆನ್ ಲೈನ್ ಮೂಲಕ ಸ್ವತಃ ಅಥವಾ ಇತರರೊಬ್ಬರಿಂದ ವಿವರ ಕಳುಹಿಸಬಹುದು. ಯಾರಾದರೂ ಸುದ್ದಿ ಪತ್ರಿಕೆಗಳಲ್ಲಿ ಏನಾದರೂ ಓದಿದ್ದರೆ, ಅದರ ಪ್ರತಿಯನ್ನು, ನಾನು ಈ ವ್ಯಕ್ತಿಯ ಬಗ್ಗೆ ತಿಳಿದಿದ್ದೇನೆ, ನೀವೂ ನೋಡಿ ಎಂದು ಕಳುಹಿಸಬಹುದು. ಇಂಥ ಅಸಂಖ್ಯಾತ ಮಾಹಿತಿ ನಮಗೆ ಬಂದಿದೆ. ಯುವ ತಂಡಕ್ಕೆ ಪ್ರಚಾರದ ಅರಿವು ಇರಲಿಲ್ಲ, ಅವರಿಗೆ ಅವರ ಮುಖ ಪರಿಚಯವೂ ಇರಲಿಲ್ಲ. ಆದರೂ ಲಭ್ಯವಿರುವ ಮಾಹಿತಿಯಲ್ಲಿ ಅವರು ಅರ್ಹರ ಪಟ್ಟಿ ಸಿದ್ಧಮಾಡಿದರು. ಬಳಿಕ ರಚಿಸಲಾದ ಸಮಿತಿ ಈ ಕಾರ್ಯ ಮಾಡಿತು. ನೀವು ನೋಡಿರಬಹುದು ಈಗ ಪದ್ಮ ಪ್ರಶಸ್ತಿ ಪಡೆಯುವವರು ಅಪರಿಚಿತ ನಾಯಕರಾಗಿದ್ದಾರೆ. ನೀವು ನೋಡಿರಬಹುದು ಪದ್ಮಶ್ರೀ ಪ್ರಶಸ್ತಿಯನ್ನು ಈ ಬಾರಿ ಬಂಗಾಳದ ಮುಸ್ಲಿಂ ಹುಡುಗನಿಗೆ ನೀಡಲಾಗಿದೆ. ಅವನು ಮಾಡಿದ್ದೇನು? ಆತನ ತಾಯಿ ಮೃತಪಟ್ಟರು, ಕಾರಣ ಅವರಿಗೆ ವೈದ್ಯಕೀಯ ನೆರವು,ಚಿಕಿತ್ಸೆ ದೊರಕಲಿಲ್ಲ. ತನ್ನ ತಾಯಿಯ ಸಾವಿನಿಂದ ಆತನ ಮನ ಮರುಗಿತು. ಆಗ ಆತ ರೋಗಿಗಳನ್ನು ತನ್ನ ಮೋಟಾರು ಸೈಕಲ್ ನಲ್ಲಿ ವೈದ್ಯರ ಬಳಿಗೆ ಕರೆದೊಯ್ಯುವ ಕಾರ್ಯ ಮಾಡತೊಡಗಿದ. ಆತ ಶ್ರಮಪಟ್ಟ, ವೈದ್ಯರ ಬಳಿ ಹೋಗಿ ಬರುವ ಪೆಟ್ರೋಲ್ ವೆಚ್ಚವನ್ನೂ ತಾನೇ ಭರಿಸಿದ. ಇಡೀ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಅಂಕಲ್ ಎಂದೇ ಖ್ಯಾತನಾದ. ಆತ ಅಸ್ಸಾಂ ಮತ್ತು ಬಂಗಾಳದ ಪ್ರದೇಶದಲ್ಲಿ ಈ ನಿಸ್ವಾರ್ಥ ಸೇವೆ ಮಾಡುತ್ತಿದ್ದಾನೆ. ಇದು ಸರ್ಕಾರದ ಗಮನಕ್ಕೆ ಬಂತು. ಅಂಥ ವ್ಯಕ್ತಿಗಳಿಗೆ ಪದ್ಮಶ್ರೀ ದೊರಕಿತು. ನಾನು ಏನು ಹೇಳುತ್ತೇನೆ ಎಂದರೆ, ದೇಶದ ಪ್ರತಿಯೊಂದು ಮೂಲೆಯಲ್ಲೂ, ಪ್ರತಿಯೊಬ್ಬರೂ ಏನಾದರೊಂದು ಉಪಯುಕ್ತ ಕಾರ್ಯ ಮಾಡಿರುತ್ತಾರೆ. ಸರ್ಕಾರ ಅದನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ನಾವು ಕಡತಗಳಿಂದ ಹೊರಗೆಳೆದು ಸರ್ಕಾರವನ್ನು ಸಾಮಾನ್ಯ ಜನರೊಂದಿಗೆ ಸಂಪರ್ಕಿಸುವ ಕಾರ್ಯ ಮಾಡುತ್ತಿದ್ದೇವೆ. ಇದು ನಮ್ಮ ದ್ವಿಮುಖ ಪ್ರಯತ್ನವಾಗಿದೆ. ಇದರ ಫಲವಾಗಿ ನಾವು ಒಂದು ವ್ಯವಸ್ಥೆ ರೂಪಿಸಿದ್ದೇವೆ. ಅದು ಸರಿ, ಅದರಲ್ಲಿ ಪ್ರತಿಯೊಬ್ಬರಿಗೂ ಅನಿಸಬಹುದು, ಅವರು ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಇವರನ್ನು ಕರೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು. ಹಲವು ಸಲಹೆಗಳು ಬರುತ್ತವೆ. ಆದರೆ ಇದು ಪ್ರಥಮ ಪ್ರಯತ್ನವಾಗಿದೆ. ಇದು ಸಂಪೂರ್ಣವಾಗಿ ಸರ್ಕಾರದ ಪ್ರಯತ್ನವಾಗಿದೆ ಮತ್ತು ಇದರಲ್ಲಿ ಹಲವು ನ್ಯೂನತೆಗಳು ಇರಬಹುದು, ನಮ್ಮ ಚಿಂತನೆಗಳಲ್ಲಿಯೂ ನ್ಯೂನತೆ ಇರಬಹುದು. ಆದರೂ ಈ ಪ್ರಯೋಗವನ್ನು ನಾವು ಹೇಗೆ ಕಾರ್ಯಗತಗೊಳಿಸಬೇಕು? ಎಂದು ನಾನು ಚಿಂತಿಸುತ್ತೇನೆ. ಇದನ್ನು ಒಂದು ವಾರ್ಷಿಕ ಸಮಾರಂಭವಾಗಿ ಹೇಗೆ ಪರಿವರ್ತಿಸಬಹುದು?ಮತ್ತು ಇದನ್ನು ಒಂದು ರೀತಿಯಲ್ಲಿ ಸರ್ಕಾರದ ವಿಸ್ತರಣೆಯ ರೂಪದಲ್ಲಿ, ಹೇಗೆ ನೀವು ಆರು ಗುಂಪು ಮಾಡಿಕೊಂಡಿದ್ದೀರೋ, ಪ್ರತಿ ಗುಂಪೂ 5 ವಿವಿಧ ವಿಷಯಗಳ ಮೇಲೆ ಹೇಗೆ ಗಮನ ಹರಿಸಿದ್ದೀರಿ. ಈಗ ನನ್ನ ಮನಸ್ಸಿನಲ್ಲಿ ಬರುತ್ತಿದೆ. ಇದೆ ಗುಂಪುಗಳನ್ನು ಸಂಬಂಧಿತ ಸಚಿವಾಲಯಗಳಿಗೆ ಶಾಶ್ವತವಾಗಿ ಜೋಡಿಸಬಹುದೇ ಎಂದು. ಯಾರು ಡಿಜಿಟಲ್ ಮೇಲೆ ಕೆಲಸ ಮಾಡಿದ್ದಾರೋ, ಅವರು ತಮ್ಮ ಸಮಯ ನೀಡಲು ಸಿದ್ಧರಿದ್ದರೆ, ನಾನು ಸಂಬಂಧಿತ ಅಂದರೆ ಡಿಜಿಟಲ್ ಇಂಡಿಯಾ ಕಾರ್ಯ ನೋಡಿಕೊಳ್ಳುತ್ತಿರುವ ಸಚಿವಾಲಯದೊಂದಿಗೆ ಅವರನ್ನು ಸೇರಿಸಿ ಒಂದು ಗುಂಪು ರಚಿಸಬಹುದು. ಅವರು ಪ್ರತಿ ತಿಂಗಳೂ ಸೇರಿ, ಹೊಸ ಹೊಸ ವಿಚಾರದ ಬಗ್ಗೆ ಚರ್ಚಿಸಬಹುದು, ಇಲ್ಲಿರುವ ಪಟ್ಟಿ ಮಾಹಿತಿ ನೀಡುವಂತೆ, ಕೆಲವು ಜನರಿಗೆ ನಮಗೆ ಇದು ತಿಳಿದಿಲ್ಲ, ನನಗೆ ಈ ಡಿಜಿಟಲ್ ಎಂದರೇನು ಎಂದು ಅರಿವಾಗಿಲ್ಲ ಎಂಬ ಭಾವನೆ ಇದೆ. ಇದು ಕೇವಲ ಶ್ರೀಸಾಮಾನ್ಯನಿಗೆ ಮಾತ್ರ ಸೀಮಿತವಲ್ಲ, ಈ ಭಾವನೆ ಸರ್ಕಾರದಲ್ಲೂ ಇದೆ. ಸರ್ಕಾರದಲ್ಲಿ ಡಿಜಿಟಲ್ ಎಂದರೆ, ಯಂತ್ರಾಂಶವನ್ನು ದಾಸ್ತಾನು ಮಾಡುವುದಾಗಿದೆ. ಸರ್ಕಾರದಲ್ಲಿ ಡಿಜಿಟಲ್ ಎಂದರೆ, ಹೂದಾನಿಯ ಜಾಗದಲ್ಲಿ ಆಧುನಿಕ ಲ್ಯಾಪ್ ಟಾಪ್ ತಂದಿಡುವುದಾಗಿದೆ. ಯಾರಾದರೂ ಸಂದರ್ಶಕರು ಬಂದರೆ, ಆಗ ನಾವು ಆಧುನಿಕರಾಗಿ ಕಾಣಬಹುದು. ಇದು ಸರ್ಕಾರದಲ್ಲಿರುವ ಚಿಂತನೆ ಆಗಿದೆ. 50-55ರ ವಯೋಮಾನದಲ್ಲಿರುವವರು ಕೇಂದ್ರ ಸರ್ಕಾರಕ್ಕೆ ಬರುತ್ತಾರೆ. ನಿಮ್ಮ ಮೆದುಳನ್ನು ನೀವು 30ರ ವಯೋಮಾನದವರಿಗಿಂತ ಕೆಳಗೆ ಇರುತ್ತದೆ. ನಾನು ಈ ಎರಡನ್ನೂ ಸೇರಿಸಲು ಇಚ್ಛಿಸುತ್ತೇನೆ. ಇದು ಇದರ ಆರಂಭವಾಗಿದೆ. ಇದು ನನಗೆ ಸಂತೃಪ್ತಿ ತರುವ ವಿಷಯ ಎಂದರೆ, ಇಂದು ನನ್ನೊಂದಿಗೆ ಸರ್ಕಾರದಲ್ಲಿ ಇರುವ ತಂಡ ಎಂದರೆ, ಕಾರ್ಯದರ್ಶಿಗಳ, ಸಚಿವರುಗಳ ತಂಡ ಇದೆ. ನನ್ನೊಂದಿಗೆ 200 ಜನರ ತಂಡ ಇದೆ ಎಂದರೆ, ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಯುತ್ತಿರುತ್ತದೆ. ನಾನು ಅವರೊಂದಿಗೆ ಪ್ರಧಾನಿಯಾಗಿಯಲ್ಲ, ಸಹೋದ್ಯೋಗಿಯಾಗಿ ನನ್ನ ಸಮಯ ಕಳೆಯುತ್ತೇನೆ. ಕಳೆದ ಮೂರು ವರ್ಷಗಳ ಅನುಭವದ ಬಳಿಕ ನಾನು ಹೀಗೆ ಹೇಳ ಬಯಸುತ್ತೇನೆ, ರೈತರು ತಮ್ಮ ಜಮೀನನ್ನು ಉಳುತ್ತಾರೆ, ಅವರಿಗೆ ಮಳೆ ಬರುತ್ತದೋ ಇಲ್ಲವೋ ಗೊತ್ತಿರುವುದಿಲ್ಲ, ಯಾವ ಬೆಳೆ ಹಾಕಬೇಕು ತಿಳಿದಿರುವುದಿಲ್ಲ, ಅದು ಉತ್ತಮ ಇಳುವರಿ ತರುತ್ತದೋ ಇಲ್ಲವೋ ಗೊತ್ತಿರುವುದಿಲ್ಲ, ಸುಗ್ಗಿಯ ಬಳಿಕ ಅದಕ್ಕೆ ಸೂಕ್ತ ಬೆಲೆ ಸಿಗುತ್ತದೋ ಇಲ್ಲವೋ ತಿಳಿದಿರುವುದಿಲ್ಲ. ಆದರೂ ಅವರು ತಮ್ಮ ಜಮೀನು ಉಳುಮೆ ಮಾಡುತ್ತಾರೆ. ಅದೇ ರೀತಿ, ನಾನು ನನ್ನ 200 ಜನರ ತಂಡದ ಮನಸ್ಸಿನ ಉಳಿಮೆ ಮಾಡುವ ಕೆಲಸ ಸಾಕಷ್ಟು ಮಾಡಿದ್ದೇನೆ. ನಾನು ನನ್ನ ಅನುಭವದಿಂದ ಹೇಳ ಬಯಸುತ್ತೇನೆ. ಇಂದು ಅವರು ಯಾವುದೇ ವಿಷಯವನ್ನು ಒಪ್ಪಿಕೊಳ್ಳಲು, ಅದರೊಂದಿಗೆ ತಾವು ಹೊಂದಿಕೊಳ್ಳಲು ಉತ್ಸಾಹಿತರಾಗಿದ್ದಾರೆ. ಇದು ನಿಜಕ್ಕೂ ದೊಡ್ಡ ಬದಲಾವಣೆ. ಸರ್ಕಾರದಲ್ಲಿರುವ ನನ್ನ ಹಿರಿಯರ ತಂಡ, ಅವರು ತಡೆ ಆಗುವ ಬದಲು ಅವಕಾಶಕ್ಕಾಗಿ ನೋಡುತ್ತಿದ್ದಾರೆ, ಅವರು ಎಲ್ಲ ಹೊಸತನನ್ನೂ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಮತ್ತು ಒಪ್ಪಿಕೊಳ್ಳುತ್ತಿದ್ದಾರೆ. ಇದು ನಿಮ್ಮನ್ನು ನನ್ನೊಂದಿಗೆ ಸಂಪರ್ಕಕ್ಕೆ ತಂದುಕೊಳ್ಳಲು ಉತ್ತೇಜನ ನೀಡಿದೆ. ಅಲ್ಲಿ ಅಡ್ಡಿ ಇದ್ದರೆ, ನಾನು ಇದನ್ನು ಮಾಡುತ್ತಿರಲಿಲ್ಲ. ನಾನು ಆಗ ಇದರ ಬಗ್ಗೆ ಚಿಂತೆಯನ್ನೂ ಮಾಡುತ್ತಿರಲಿಲ್ಲ. ಏಕೆಂದರೆ ಆರು ತಿಂಗಳುಗಳ ಬಳಿಕ, ನೀವು ಆ ಸ್ಥಳ ಬಿಟ್ಟ ಮೇಲೆ ನೇತ್ಯಾತ್ಮಕತೆಯ ಅತಿ ದೊಡ್ಡ ಏಜೆಂಟರಾಗಿ ಬಿಡುತ್ತಿದ್ದಿರಿ. ಆಗ ನಾನೇ ಹೇಳುತ್ತಿದೆ. ಹೋಗಲಿ ಬಿಡಿ, ಅವರೆಲ್ಲರೂ ಹಾಗೆ. ಅವರು ಕೇವಲ ಮಾತನಾಡುತ್ತಾರೆ ಅಷ್ಟೇ. ಆದರೆ, ನಾನು ಏಕೆ ಇಷ್ಟು ಧೈರ್ಯ ಮಾಡುತ್ತಿದ್ದೇನೆ ಎಂದರೆ, ನನ್ನ ಪ್ರಧಾನ ತಂಡ, ಹೊಸ ವಿಚಾರಗಳನ್ನು ಅಂಗೀಕರಿಸಲು ಉತ್ಸುಕರಾಗಿದ್ದಾರೆ ಎಂಬ ಅಚಲ ವಿಶ್ವಾಸ ನನಗಿದೆ. ನೀವು ಹೇಳಿರುವ ಪ್ರತಿಯೊಂದು ವಿಚಾರವೂ, ನೀವು ನಿನ್ನೆ ಮತ್ತು ಇಂದು ಅವರೊಂದಿಗೆ ಚರ್ಚೆ ಮಾಡಿದ್ದೀರಿ. ಅವರು ಇಂದೂ ಇಲ್ಲಿದ್ದಾರೆ, ಈ ಪ್ರಯತ್ನ ಮುಂದುವರಿಯಬೇಕು. ನಾವು ಇದನ್ನು ಮುಂದೆ ತೆಗೆದುಕೊಂಡು ಹೋಗಬೇಕು.
ನಿಮಗೂ ನನ್ನ ಆಗ್ರಹ ಏನೆಂದರೆ, ಇಲ್ಲಿ ನೀವು ದೊಡ್ಡ ಸಂಖ್ಯೆಯಲ್ಲಿದ್ದೀರಿ. ನಿಮ್ಮಲ್ಲಿ ಹಲವು ಜನರು ಮುಖಾಮುಖಿ ಮೊದಲ ಬಾರಿ ಭೇಟಿ ಆಗಿದ್ದೀರಿ. ನೀನು ಪರಸ್ಪರರ ಬಗ್ಗೆ ಕೇಳಿರಬಹುದು, ಓದಿರಬಹುದು, ಸಾಮಾಜಿಕ ತಾಣದ ಮೂಲಕ ಪರಿಚಯ ಇರಬಹುದು. ಇಂಥ ಒಬ್ಬ ಸಜ್ಜನ ಈ ದಿಕ್ಕಿನಲ್ಲಿ ಇಂಥ ಕಾರ್ಯ ಮಾಡುತ್ತಿದ್ದಾನೆ ಎಂದು ಅರಿತಿರಬಹುದು. ನೀವು ಈಗ ಪರಸ್ಪರ ಪರಿಚಿತರಾಗಿದ್ದೀರಿ. ಮತ್ತು ಒಂದು ತಂಡ ಇಲ್ಲಿ ರಚನೆಯಾಗಿದೆ. ಎಲ್ಲ 212 ಜನರ ತಂಡ ಆಗುವ ಅಗತ್ಯವಿಲ್ಲ, 30-35 ಜನರ ಗುಂಪು, ಪರಸ್ಪರ ಪರಿಚಿತವಾದರೆ, ಅವರ ಚಿಂತನೆಗಳೇನು, ಅವರ ಕೊಡುಗೆ ಏನು ಎಂಬ ಎಲ್ಲ ವಿಷಯವನ್ನು ನೀವು ಮೌಲ್ಯ ಮಾಪನ ಮಾಡಬಹುದು.
ಯಾರು ಹೆಚ್ಚು ಸಮಯವನ್ನು ವ್ಯರ್ಥ ಮಾಡಿದರು ಎಂಬುದೂ ನಿಮಗೆ ತಿಳಿಯುತ್ತದೆ ಮತ್ತು ಯಾರು ತಮ್ಮ ವ್ಯಾಪಾರಕ್ಕಾಗಿ ನೆಟ್ ವರ್ಕ್ ರೂಪಿಸುತ್ತಿದ್ದಾರೆ ಎಂಬುದೂ ನಿಮಗೆ ತಿಳಿಯುತ್ತದೆ. ಎಲ್ಲವೂ ನಿಮ್ಮ ಗಮನಕ್ಕೆ ಬಂದಿರುತ್ತದೆ. ಹೀಗಾಗಿಯೇ ನಿಮಗೆ ಸಂಪೂರ್ಣ ಸಾಧಕ ಬಾಧಕದ ಅರಿವಿದೆ. ನೀವು ಈ ಬಗ್ಗೆ ನಿಮ್ಮದೇ ಮಾರ್ಗದಲ್ಲಿ ಗಮನ ಹರಿಸುತ್ತೀರಿ ಎಂಬ ವಿಶ್ವಾಸವೂ ನನಗಿದೆ. ಆದರೆ ವಿಷಯ ಮಾತ್ರ ಬದಲಿಸಬೇಡಿ. ಜಗತ್ತಿನ ಯಾವುದೋ ಮೂಲೆಯಲ್ಲಿ ಏನೋ ನಡೆಯಿತೆಂದು ನೀವು ಬೇರೆ ಮಾರ್ಗಕ್ಕೆ ಹೋಗಬೇಡಿ. ನೀವು ಹೊಸ ವಿಚಾರ ಸೇರಿಸುವುದನ್ನು ಮುಂದುವರಿಸಿ, ನಿಮ್ಮ ಕಾರ್ಯ ಕ್ಷೇತ್ರಕ್ಕೆ ಹೊಸ ವಿಚಾರಗಳನ್ನು ಸೇರಿಸುತ್ತಾ ಹೋಗಿರಿ. ನೀವು ಅದನ್ನು ಮಾರ್ಪಾಡು ಮಾಡಬಹುದು. ಹರಿತಗೊಳಿಸಬಹುದು ಮತ್ತು ಅದನ್ನು ಹೆಚ್ಚು ಗಮನಾರ್ಹಗೊಳಿಸಬಹುದು, ಇದೆಲ್ಲವೂ ಕಲ್ಪನೆಗಳು. ಆದರೆ, ನೀವು ಕಲ್ಪನೆಗಳೊಂದಿಗೆ ಹೊಸ ಮಾರ್ಗಸೂಚಿ ರೂಪಿಸಬಲ್ಲಿರಾ? ಈ ಸಾಧನೆಗೆ ನಿಮಗೆ ಯಾವ ಸಂಪನ್ಮೂಲದ ಅಗತ್ಯವಿದೆ ? ಇದಕ್ಕೆ ಯಾವ ರೀತಿಯ ಸಾಂಸ್ಥಿಕ ಸ್ವರೂಪ ಸಿದ್ಧತೆ ಏನು ಇರಬೇಕು? ಸರ್ಕಾರ ತನ್ನದೆ ಆದ ಕೆಲವು ನಿಯಮಗಳ ಅಡಿ ಕಾರ್ಯ ನಿರ್ವಹಿಸುತ್ತದೆ, ಯಾವುದಾದರೂ ನಿಯಮ ಬದಲಾವಣೆ ಮಾಡಬೇಕಾದ ಅಗತ್ಯವಿದ್ದರೆ, ಆಗ ಹೇಗೆ ನಿಯಮಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ಸರ್ಕಾರದಲ್ಲಿ ಕಾಗದದ ಮೇಲೆ ಬಾರದೆ ಏನೂ ಆಗಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಏನು ಮಾಡುತ್ತೀರಿ. ಏನು ಸೇರ್ಪಡೆ ಮಾಡುತ್ತೀರಿ. ನಿಮ್ಮಲ್ಲಿ ಯಾರಾದರೂ ಇದರ ನಾಯಕತ್ವ ತೆಗೆದುಕೊಳ್ಳುತ್ತೀರಾ, ಒಂದು ತಿಂಗಳ ಬಳಿಕ ಮತ್ತೆ ಎಲ್ಲಾದರೂ ಸೇರೋಣ ಎಂದು ನಿರ್ಧರಿಸುತ್ತೀರಾ. ನೋಡಿ ನೀವು ಅತಿ ದೊಡ್ಡ ಕೊಡುಗೆ ನೀಡಬಹುದಾಗಿದೆ. ನೀವು ನಿಮ್ಮದೇ ದಾರಿಯಲ್ಲಿ ಒಂದು ಡಿಜಿಟಲ್ ವೇದಿಕೆಯನ್ನು ಸೃಷ್ಟಿಸಬಹುದು. ನಿಮ್ಮ ತಂಡದ ಯಾರಾದರೂ ಒಬ್ಬ ಇದನ್ನು ಮುನ್ನಡೆಸಬಹುದು ಮತ್ತು ನಿಮ್ಮದೇ ಮಾರ್ಗದಲ್ಲಿ ವೇದಿಕೆಗೆ ಹೊಸಬರನ್ನು ಆಹ್ವಾನಿಸಬಹುದು. ನೀವು ಚರ್ಚೆ ನಡೆಸಬಹುದು, ಗೂಗಲ್ ಹ್ಯಾಂಗ್ ಔಟ್ ಮೂಲಕ ತಿಂಗಳಿಗೊಮ್ಮೆ ಸಮಾವೇಶ ಏರ್ಪಡಿಸಬಹುದು, ನೀವು ವರ್ಷದಲ್ಲಿ ಒಂದೆರೆಡು ಬಾರಿ ಭೇಟಿ ಮಾಡಬಹುದು. ನೀವು ಈ ಎಲ್ಲ ಕಾರ್ಯ ಮಾಡಿದರೆ, ಚರ್ಚೆಯನ್ನು ಮುಂದುವರಿಸಿದರೆ, ಆಗ ನೀವು ಸರ್ಕಾರಕ್ಕೆ ನೀವು ಸಕಾಲದಲ್ಲಿ ಏನಾದರೂ ನೀಡುವ ಶಕ್ತಿ ಪಡೆಯುತ್ತೀರಿ. ಯಾವಾಗ ಸಕಾಲದಲ್ಲಿ ಕೆಲಸ ಆಗುತ್ತದೋ, ಆಗ ಅವು ದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತವೆ.
ಕೆಲವೊಮ್ಮೆ, ಸರ್ಕಾರದ ವ್ಯವಸ್ಥೆಯಲ್ಲಿ ತನ್ನದೇ ಆದ ಕಾಠಿಣ್ಯ ಇರುತ್ತದೆ, ತನ್ನದೆ ಆದ ಅರ್ಹತೆಗಳೂ ಇರುತ್ತವೆ. ನೀವು ಈ ಕಾಠಿಣ್ಯತೆಯ ಹೊರತಾಗಿಯೂ ಬೆಂಬಲ ನೀಡಬಹುದು. ನಮ್ಮ ದೇಶಕ್ಕೆ ಅತಿಶಯವಾದ ವಸ್ತುವಿನ ಅಗತ್ಯವೇನಿಲ್ಲ. ಸಣ್ಣ ವಿಚಾರಗಳೂಇಡೀ ವ್ಯವಸ್ಥೆಗೆ ದೊಡ್ಡ ಬದಲಾವಣೆ ತರುತ್ತವೆ. ಅಂಥ ಸಣ್ಣ ವಿಚಾರಗಳಲ್ಲಿ, ಈ ದೇಶದ ಜನರು ತಮ್ಮ ಸರ್ಕಾದ ಮೇಲೆ ನಂಬಿಕೆ ಇಡಬೇಕೋ ಬೇಡವೋ ನೀವೇ ಹೇಳಿ. ನೇರ ಉತ್ತರ ಹೌದು ಎನ್ನುವುದು. ನೀವು ನಿಮ್ಮ ಸರ್ಕಾರವನ್ನು ನಂಬಬೇಕು.
ಆದರೆ ಸರ್ಕಾರ ಚುನಾಯಿತ ಪಾಲಿಕೆ ಸದಸ್ಯರ ಮೇಲೆ ವಿಶ್ವಾಸವಿಡುತ್ತದೆ, ಚುನಾಯಿತ ಶಾಸಕರನ್ನು ನಂಬುತ್ತದೆ, ಪತ್ರಾಂಕಿತ ಅಧಿಕಾರಿಯನ್ನು ನಂಬುತ್ತದೆ. ಒಂದು ಕಾನೂನಿದೆ. ನಿಮಗೆ ಪ್ರಮಾಣಪತ್ರ ಬೇಕಿದ್ದರೆ, ನೀವು ಎಲ್ಲಿಗಾದರೂ ಅರ್ಜಿ ಹಾಕಬೇಕಿದ್ದರೆ, ನೀವು ಅವರ ಮನೆಗೆ ಹೋಗಿ ಈ ಪ್ರಮಾಣಪತ್ರ ತರಬೇಕು. ಅಲ್ಲಿ ಅವರು ಅದನ್ನು ನೋಡದೆಯೇ ಸಹಿ ಹಾಕುತ್ತಾರೆ. ಹೊರಗೆ ಕುಳಿತ ಹುಡುಗನೊಬ್ಬ ಹಣ ಪಡೆದು, ಎಲ್ಲ ದಸ್ತಾವೇಜುಗಳಿಗೂ ಅದನ್ನು ನೋಡದೆಯೇ ಸೀಲು ಹಾಕುತ್ತಾ ಇರುತ್ತಾನೆ. ಪ್ರಮಾಣಪತ್ರ ಪಡೆದ ಬಳಿ, ನೀವು ಅದನ್ನು ಸರ್ಕಾರಕ್ಕೆ ಕಳುಹಿಸುತ್ತೀರಿ. ನಾನು ಅಧಿಕಾರಕ್ಕೆ ಬಂದ ಬಳಿಕ ಕೇಳಿದೆ, ಇದರಿಂದ ಏನು ಪ್ರಯೋಜನ? ಅವರು ಸ್ವಯಂ ಪ್ರಮಾಣೀಕರಿಸಲಿ, ಸ್ವಯಂ ದೃಢೀಕರಿಸಲಿ ಎಂದು, ನಾವು ಈ ಅಗತ್ಯವನ್ನು ತೆಗೆದು ಹಾಕಿದೆವು. ಇದು ಒಂದು ಸಣ್ಣ ವಿಚಾರ, ಆದರೆ, ಇದು ದೊಡ್ಡ ಸಂದೇಶವನ್ನು ಸಾರುತ್ತದೆ, ಅದೇನೆಂದರೆ ನಾನು ನನ್ನ ದೇಶದ ಜನರ ಮೇಲೆ ವಿಶ್ವಾಸ ಹೊಂದಿದ್ದೇನೆ ಹೀಗಾಗಿ ಯಾವುದೇ ಮಧ್ಯಸ್ಥಿಕೆದಾರನ ಅಗತ್ಯವಿಲ್ಲ. ಆದರೆ, ಯಾವಾಗ ನಿಮ್ಮ ಅಂತಿಮ ಸಂದರ್ಶನ ನಡೆಯುತ್ತದೋ ಅಥವಾ ನಿರ್ಧಾರ ಕೈಗೊಳ್ಳಲಾಗುತ್ತದೆಯೋ ಆಗ ನೀವು ಮೂಲ ದಾಖಲೆಗಳನ್ನು ತೋರಿಸಿ. ಕಳೆದ ಮೂರು ವರ್ಷಗಳಲ್ಲಿ ನೀವು ಇಂಥ ಬದಲಾವಣೆ ತಂದಿರುವ ಸಾವಿರಾರು ಸರ್ಕಾರಿ ಕ್ರಮಗಳನ್ನು ನೋಡಬಹುದು. ನೋಡಿ, ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು ಮತ್ತು ಕುಲೀನ್ ಹೇಳುತ್ತಾರೆ ನಾವು ನ್ಯಾಯಾಂಗವನ್ನು ಸರಿ ಪಡಿಸಿದರೆ ಎಲ್ಲವೂ ಸರಿಹೋಗುತ್ತದೆ. ಕುಲೀನ್ ಈ ಕಾರ್ಯ ಮಾಡಬಲ್ಲರೇ.
ನೋಡಿ, ನಾವು ಕುಟುಂಬದಲ್ಲಿ ನಗದು ಅಥವಾ ಆಭರಣ ಇಟ್ಟುಕೊಳ್ಳುತ್ತೇವೆ. ನಾವು ಅದನ್ನು ಕಾಪಾಡಲು ಒಂದು ಬೀಗ ಹಾಕುತ್ತೇವೆ. ಆ ಬೀಗ ಕಳ್ಳರಿಂದ, ದರೋಡೆಕೋರರಿಂದ ರಕ್ಷಿಸಬಲ್ಲುದೇ? ಅವರು ಎಲ್ಲ ಖಜಾನೆಯನ್ನೂ ಹೊತ್ತೊಯ್ಯಬಲ್ಲ ಶಕ್ತಿ ಹೊಂದಿರುತ್ತಾರೆ. ಅವರು ನಿಮ್ಮ ಬೀಗವನ್ನು ಒಡೆದುಹಾಕುವ ಶಕ್ತಿ ಹೊಂದಿರುತ್ತಾರೆ. ಅದು ಅವರನ್ನು ತಡೆಯುತ್ತದೆಯೇ. ಈ ಬೀಗ ನಮ್ಮ ಮಕ್ಕಳು ತಪ್ಪು ದಾರಿಯಲ್ಲಿ ಹೋಗದಂತೆ ತಡೆಯುತ್ತದೆ. ನೀವು ನಿಮ್ಮ ಮಕ್ಕಳು ತಪ್ಪು ಹವ್ಯಾಸ ರೂಢಿಸಿಕೊಳ್ಳದ ಅಂಥ ವ್ಯವಸ್ಥೆ ಸೃಷ್ಟಿಸಿರುತ್ತೀರಿ. ಅಂದರೆ ಅವರು ಪೆಟ್ಟಿಗೆ ತೆಗೆದು ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಹೊಗದಂತೆ ಸ್ವಯಂ ಶಿಸ್ತು ರೂಪಿಸುವ ಕಾರ್ಯ ಮಾಡಿರುತ್ತೀರಿ. ದುರ್ದೈವವಷಾತ್ ಭ್ರಷ್ಟಾಚಾರ ಸ್ಥಾಂಸ್ಥೀಕರಣಗೊಂಡಿದೆ. ನೀವು ಇದಕ್ಕೆ ಪ್ರತಿ ಸಾಂಸ್ಥಿಕ ವ್ಯವಸ್ಥೆ ರೂಪಿಸುವ ತನಕ ಅದನ್ನು ತಡೆಯಲು ಸಾಧ್ಯವಿಲ್ಲ.
ನೋಡಿ, ಈ ದೇಶದಲ್ಲಿ ಹಲವು ಮಧ್ಯವರ್ತಿಗಳಿದ್ದಾರೆ. ಅವರಿಗೂ ಜೀವನೋಪಾಯ ಬೇಕು. ಅದೂ ಕೂಡ ಒಂದು ವೃತ್ತಿ. ಅವರು ಈಗ ಕೆಲಸ ಇಲ್ಲದೆ ಚೀರಾಡುತ್ತಿದ್ದಾರೆ. ನಮಗೆ ಏನೂ ಕೆಲಸ ಇಲ್ಲ, ಏನೂ ಕೆಲಸ ಇಲ್ಲ ಎಂದು ಕೂಗುತ್ತಿದ್ದಾರೆ. ಇಂಥ ಹಲವು ಜನರು, ಬಡ ಜನರ ಮನೆಗೆ ಹೋಗುತ್ತಾರೆ, 50 ಸಾವಿರ ಜೊತೆ ಮಾಡಿಕೊಡಿ, ನಿಮ್ಮ ಮಗನಿಗೆ ಜವಾನನ ಕೆಲಸ ಕೊಡಿಸುತ್ತೇವೆ ಎಂದು ಕೇಳುತ್ತಿದ್ದಾರೆ. ಕೇವಲ 20 ಸಾವಿರ ಕೊಡಿ ನಾವು ತಾತ್ಕಾಲಿಕ ಕೆಲಸ ಕೊಡಿಸುತ್ತೇವೆ ಎನ್ನುತ್ತಿದ್ದಾರೆ. ಇಂಥ ದಲ್ಲಾಳಿಗಳು ನಮ್ಮ ಸುತ್ತ ಸುತ್ತುತ್ತಿರುತ್ತಾರೆ.
ನಾವು ಅಧಿಕಾರಕ್ಕೆ ಬಂದ ಬಳಿಕ, 3ನೇ ಮತ್ತು 4ನೇ ದರ್ಜೆಯ ಕೆಲಸಕ್ಕೆ ಸಂದರ್ಶನ ಏಕೆ ಬೇಕು, ಈ ಸಂದರ್ಶನದ ಹಿಂದಿನ ತರ್ಕ ಏನು ಎಂದು ಯಾರಾದರೂ ಹೇಳಿ? ವಿಶ್ವದಲ್ಲಿ ಎಂಥ ಮನೋವಿಜ್ಞಾನ ತಯಾರಾಗಿದೆ ಎಂದರೆ, ಒಬ್ಬ ವ್ಯಕ್ತಿ ಬಾಗಿಲಿನಿಂದ ಬರುತ್ತಾನೆ, ಮೂರು ಜನರ ಸಮಿತಿ ಕುಳಿತಿರುತ್ತದೆ. ಅವನು 30 ಸೆಕೆಂಡ್ ನಲ್ಲಿ ಅಲ್ಲಿಂದ ತೆರಳುತ್ತಾನೆ. ಅವರು ಅವನನ್ನು ನೋಡುತ್ತಾರೆ, ಕಾಲಾವಕಾಶ ಇದ್ದರೆ ಪ್ರಶ್ನಿಸುತ್ತಾರೆ. ಓಕೆ, ಗುಡ್ ಸರಿ ಎನ್ನುತ್ತಾರೆ. ಅಲ್ಲಿಗೆ ಸಂದರ್ಶನ ಮುಗಿಯಿತು.
ನಾನು ಈವರೆಗೆ ಇಂಥ ಸ್ಕ್ಯಾನರ್ ಬಗ್ಗೆ ಎಲ್ಲೂ ಓದಿಲ್ಲ, ಕೇಳಿಲ್ಲ. ಅಂದರೆ, ಅಲ್ಲಿ ಏನೋ ಅಸಮರ್ಪಕತೆ ಇದೆ ಎಂದೇ ಅರ್ಥ. ಸರ್ಕಾರದಲ್ಲಿ, ಈ ವರ್ಗಗಳಿಗೇ ಶೇಕಡ 65ಕ್ಕೂ ಹೆಚ್ಚು ಉದ್ಯೋಗ ದೊರಕುತ್ತದೆ. ಹೀಗಾಗಿ ನಾವು ಎಲ್ಲ ರೀತಿಯ ಸಂದರ್ಶನವನ್ನೂ ರದ್ದು ಮಾಡಿದ್ದೇವೆ. ಕಂಪ್ಯೂಟರ್ ನಿಮ್ಮ ಅರ್ಹತೆಗೆ ಅನುಗುಣವಾಗಿ ಆಯ್ಕೆ ಮಾಡುತ್ತದೆ. ಯಾರು ಪಟ್ಟಿಯಲ್ಲಿ ಮೇಲಿರುತ್ತಾರೋ ಅವರು ಉದ್ಯೋಗ ಪಡೆಯುತ್ತಾರೆ. ಶೇಕಡ 2ರಿಂದ 5ರಷ್ಟು ಅರ್ಹರಲ್ಲದವರೂ ಕೂಡ ಉದ್ಯೋಗ ಪಡೆಯಬಹುದು. ಆದರೆ ಹಿಂದೆ ಇದ್ದ ಸಂದರ್ಶನ ವ್ಯವಸ್ಥೆಯಲ್ಲಿ ಈ ಪ್ರಮಾಣ ಶೇ.80ರಷ್ಟಿತ್ತು. ನಾನು ಹೇಳುವುದೇನೆಂದರೆ, ಈ ಸರ್ಕಾರ, ಎಂಥ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸುತ್ತಿದೆ ಎಂದರೆ, ಒಂದೊಮ್ಮೆ ವ್ಯಕ್ತಿ ತಪ್ಪೆಸಗಿದರೂ, ವ್ಯವಸ್ಥೆ ಅದನ್ನು ಸರಿದೂಗಿಸಿಕೊಂಡು ಹೋಗುತ್ತದೆ. ವ್ಯಕ್ತಿಗಳು ಹೆಜ್ಜೆ ತಪ್ಪುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಆದರೆ ವ್ಯವಸ್ಥೆ ಆ ಸ್ಥಿತಿಯನ್ನು ಸ್ಥಿರವಾಗಿಡುವಲ್ಲಿ ನೆರವಾಗುತ್ತವೆ. ಇಂದು ಜಗತ್ತು, ಎಲ್ಲಿ ಗ್ಯಾಪ್ ಇದೆಯೋ ಅಲ್ಲಿ ಆಪ್ ಒದಗಿಸುತ್ತಿದೆ. ಎಲ್ಲ ಆಪ್ ಮಯ ಆಗುತ್ತಿದೆ. ಮುಖತಃ ಭೇಟಿ ಮುಗಿದು ಹೋಗುತ್ತಿದೆ. ಇಂಥಕಡೆ ಮೋಸ ಮಾಡುವ ಸ್ವಭಾವದ ಮಂದಿ, ಅವರು ಒಂದು ಆಪ್ ನಲ್ಲಿ ತಮ್ಮ ಎಲ್ಲ ಕೆಲಸ ಮಾಡಿಕೊಂಡು, ಬಳಿಕ ತಮ್ಮ ಉಳಿವಿಗೆ ಮುಂದಿನ ತಿಂಗಳು ಮತ್ತೊಂದು ಆಪ್ ಸಿದ್ಧಪಡಿಸುತ್ತಾರೆ. ಈ ಎಲ್ಲ ಸಾಧ್ಯತೆಗಳ ನಡುವೆಯೂ ತಂತ್ರಜ್ಞಾನದ ಕ್ರಾಂತಿ ಏನಿದೆ, ಇದು ಮಾನವ ಜೀವನದ ಮೇಲೆ ಇದರ ಸ್ವೀಕೃತ ಪ್ರಭಾವ ಇದೆ. ಇಂದು ತಂತ್ರಜ್ಞಾನದ ಮೇಲೆ ಯಾವುದೇ ರೆಸಿಸ್ಟೆನ್ಸ್ ಇಲ್ಲ. ಯಾರು ತಾವು ಈ ತಂತ್ರಜ್ಞಾನ ನಮಗೆ ಅರ್ಥ ಆಗುವುದಿಲ್ಲ ಎನ್ನುತ್ತಾರೋ, ಅವರಲ್ಲಿ ಪುರುಷರೇ ಹೆಚ್ಚು, ಮಹಿಳೆಯರಲ್ಲ. ಅನಕ್ಷರಸ್ಥ ಮಹಿಳೆಯರೂ ಸೇರಿದಂತೆ ಎಲ್ಲ ಮಹಿಳೆಯರೂ, ತಮ್ಮ ಗೃಹ ಬಳಕೆಗೆ ಆಧುನಿಕ ಒಲೆ ಸೇರಿದಂತೆ ವಸ್ತುಗಳನ್ನು ಬಳಸಲು ಬಲ್ಲರು. ಅವರು ಎಲ್ಲ ತಂತ್ರಜ್ಞಾನದೊಂದಿಗೆ ಪರಿಚಿತರಾಗಿರುತ್ತಾರೆ.
ಬಳಕೆದಾರ ಸ್ನೇಹಿ ತಂತ್ರಜ್ಞಾನ ಜೀವನವನ್ನು ಪರಿವರ್ತಿಸಿದೆ. ಅದೇ ರೀತಿ ಸರ್ಕಾರದಲ್ಲಿ ತಂತ್ರಜ್ಞಾನ ಸರ್ಕಾರದ ಆಡಳಿತದ ಕಾರ್ಯಚಟುವಟಿಕೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲವೇ? ನೀವು ವಿವಿಧ ಕ್ಷೇತ್ರಗಳಿಂದ ಬಂದಿದ್ದೀರಿ. ಆದರೆ ಒಂದು ವಿಷಯ ಮಾತ್ರ ಸ್ಪಷ್ಟ. ನಾವಿನ್ಯತೆಯೇ ಜೀವನ. ನಾವಿನ್ಯತೆಯೇ ಇಲ್ಲದಿದ್ದರೆ, ಆಗ ನಿಶ್ಚಲತೆ ಇರುತ್ತದೆ. ನಿಶ್ಚಲತೆಯಲ್ಲಿ ಕೆಸರು ಸೇರುತ್ತದೆ. ನಾವಿನ್ಯತೆಯೊಂದರ ಮೂಲಕವೇ ಬದಲಾವಣೆ ತರಬಹುದು. ನೀವು ಆ ಕ್ಷೇತ್ರದಲ್ಲಿದ್ದೀರಿ. ನೀವು ನಾವಿನ್ಯತೆಯನ್ನು ಉತ್ತೇಜಿಸುತ್ತಿದ್ದೀರಾ, ಯಾರಾದರೂ ಕರಕುಶಲ ವಸ್ತುಗಳ ಮಾರುಕಟ್ಟೆ ಮಾಡುತ್ತಿದ್ದರೆ, ಅವರು ಕರಕುಶಲ ವಸ್ತು ತಯಾರಿಸುವವರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿಕೊಳ್ಳಲು ಕಲಿಸಿದ್ದೀರಾ? ಅವನು ತನ್ನ ಕೆಲಸ ಜೊತೆ ಜೊತೆಗೆ ಈ ಆಧುನಿಕ ತಂತ್ರಜ್ಞಾನ ಬಳಕೆ ತರಬೇತಿ ಪಡೆದರೆ, ಕರಕುಶಲ ಕ್ಷೇತ್ರದಲ್ಲಿ ಕೆಲಸ ಮಾಡುವ ಈ ಬಡ ಜನರು, ವೃತ್ತಿ ತರಬೇತಿ, ಕೌಶಲ ತರಬೇತಿ ಅಥವಾ ತಂತ್ರಜ್ಞಾನ ತರಬೇತಿ ಪಡೆದವರಾಗುತ್ತಾರೆ. ಅವರಿಗೆ ಮಾರುಕಟ್ಟೆಯ ಅಗತ್ಯ ಅರಿವಾದರೆ, ಆಗ ಅವರಿಂದ ಉತ್ತಮ ಫಲಿತಾಂಶ ಬರುತ್ತದೆ. ನಾವು ಬೆತ್ತದ ಕುರ್ಚಿಗಳನ್ನು ಮಾಡುವವರಿಗೆ ಬದಲಾದ ಕಾಲಘಟ್ಟದಲ್ಲಿನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ, ಬಳಕೆದಾರನ ಆರಾಮದಾಯಕ್ಕೆ ಅನುಗುಣವಾಗಿ ಸ್ಫೂರ್ತಿ ನೀಡಿದರೆ, ಸಹಜವಾಗಿಯೇ ಅವರು ಅವಕಾಶ ಪಡೆಯುತ್ತಾರೆ. ನಾವು ನಮ್ಮ ಗ್ರಾಮೀಣ ಆರ್ಥಿಕತೆ, ಕೇವಲ ಕೃಷಿಯ ಜೊತೆಗೆ ಮಾತ್ರವೇ ಜೋಡಿಸಿ ಹೇಳಬಾರದು. ಗ್ರಾಮೀಣ ಆರ್ಥಿಕತೆಯಲ್ಲಿ ಕೃಷಿಯ ಹೊರತಾಗಿಯೂ ಹಲವು ಅಂಶಗಳಿವೆ. ನಾವು ಈ ವಿಕೇಂದ್ರಿತವಾದ ವ್ಯವಸ್ಥೆಗೆ ಹೇಗೆ ಬಲ ಕೊಡಬಹುದು? ನಮ್ಮ ದೇಶದಲ್ಲಿ ಒಂದು ಕಾಲ ಇತ್ತು, ಗ್ರಾಮಗಳಲ್ಲಿ ಕಮ್ಮಾರರು, ಇಡೀ ಗ್ರಾಮದ ಅಗತ್ಯವನ್ನು ಪೂರೈಸುತ್ತಿದ್ದರು. ಮೋಚಿ ಆ ಗ್ರಾಮದ ಎಲ್ಲ ಅಗತ್ಯವನ್ನು ಪೂರೈಸುತ್ತಿದ್ದರು. ಹೀಗಾಗಿ ಗ್ರಾಮದಿಂದ ಹೊರಗೆ ಹೋಗುವ ಅಗತ್ಯವೇ ಬರುತ್ತಿರಲಿಲ್ಲ. ಆರ್ಥಿಕತೆ ಕ್ರಮೇಣ ಹೇಗೆ ಬದಲಾಯಿತೆಂದರೆ, ಟಾಟಾದವರು ದೊಡ್ಡ ಕಮ್ಮಾರರಾದರು, ಬಾಟಾದವರು ಅತಿ ದೊಡ್ಡ ಮೋಚಿಗಳಾದರು. ಹೀಗಾಗಿ ಗ್ರಾಮ ನಷ್ಟ ಅನುಭವಿಸುವಂತಾಯಿತು. ಹೀಗಾಗಿ ಬದಲಾವಣೆ ಬಂದಿದೆ. ಬದಲಾವಣೆ ಕೆಟ್ಟದಲ್ಲ. ನಾವು ಅದಕ್ಕೆ ವಿಕೇಂದ್ರೀಕೃತ ವ್ಯವಸ್ಥೆ ಹೇಗೆ ಅಳವಡಿಸುತ್ತೇವೆ ಎಂಬುದು ಮುಖ್ಯ. ನಮಗೆ ಇದನ್ನು ಜೋಡಿಸಲು ಸಾಧ್ಯವಾದರೆ, ಎಂಥ ಒಂದು ಬಲ ಬರುತ್ತದೆ ಎಂದರೆ, ದೇಶದ ಆರ್ಥಿಕತೆಯನ್ನು ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ನೀವು.. ಸ್ಟಾರ್ಟ್ ಅಪ್, ಈ ಸ್ಟಾರ್ಟ್ ಅಪ್, ಒಂದು ಫ್ಯಾಷನ್ ಸಾಧನ ಅಲ್ಲ. ನೀವು ಡಿಜಿಟಲ್ ಸಾಫ್ಟ್ ವೇರ್ ಗೆ ಹಲವು ರೀತಿಯ ಸ್ಟಾರ್ಟ್ ಅಪ್ ಗಳನ್ನು ನೋಡಿರಬಹುದು. ಅದು ಒಂದು. ಇನ್ನೊಂದು ರೀತಿಯ ಸ್ಟಾರ್ಟ್ ಅಪ್ಸ್ ಇದೆ. ಅದರಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿದೆ. ಅದು ಗ್ರಾಮೀಣ ನೆಲೆಯನ್ನು ಗುರಿಯಾಗಿಸಿಕೊಂಡಿದೆ.
ಸುಮಾರು ಒಂದು ವರ್ಷದ ಹಿಂದೆ, ನಾನು ಸಿಕ್ಕಿಂಗೆ ಹೋಗಿದ್ದೆ. ಸಿಕ್ಕಿಂ ದೇಶದ ಮೊದಲ ಸಾವಯವ ಕೃಷಿ ರಾಜ್ಯ. ಆದರೆ ಅದರ ಬಗ್ಗೆ ಕೆಲವೇ ಜನ ಮಾತ್ರ ಇದು ತಿಳಿದಿದೆ. ಸಿಕ್ಕಿಂ ಪೂರ್ಣ ಸಾವಯವ ರಾಜ್ಯ. 13-14 ವರ್ಷಗಳಿಂದ ಶ್ರದ್ಧೆಯಿಂದ ಕೆಲಸ ಮಾಡಿ, ಅವರು ಇಡೀ ರಾಜ್ಯವನ್ನು ಸಾವಯವ ರಾಜ್ಯವಾಗಿ ಅಭಿವೃದ್ಧಿ ಪಡಿಸಿದ್ದಾರೆ. ನಮ್ಮ ಹಿಮಾಲಯ ರಾಜ್ಯಗಳು ಸಾವಯವ ರಾಜಧಾನಿ ಅಭಿವೃದ್ಧಿ ಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ನಾನು ಸಿಕ್ಕಿಂಗೆ ಭೇಟಿ ನೀಡಿದಾಗ, ಸಾವಯವ ಕೃಷಿ ಉತ್ಸವಕ್ಕೆ ಹೋದಾಗ, ಸಿಕ್ಕಿಂ ಅನ್ನು ಸಾವಯವ ರಾಜ್ಯ ಎಂದು ದೇಶಕ್ಕೆ ಸಮರ್ಪಿಸುವ ಕಾರ್ಯಕ್ರಮ ಇತ್ತು.
ನಾನು ಇಬ್ಬರು ಯುವಕರನ್ನು ಅಲ್ಲಿ ಭೇಟಿ ಮಾಡಿದೆ – ಒಬ್ಬ ಹುಡುಗ ಮತ್ತೊಬ್ಬಳು ಹುಡುಗಿ. ಅವರು ಅಹಮದಾಬಾದ್ ಐಐಎಂನಿಂದ ಪಾಸಾದ ಕೂಡಲೇ ನೇರವಾಗಿ ಅಲ್ಲಿಗೆ ಹೋಗಿದ್ದಾರೆ. ನಾನು ಅವರನ್ನು ಅಲ್ಲಿ ನೋಡಿದಾಗ, ಅವರು ಪ್ರವಾಸಿಗರಾಗಿ ಬಂದಿರಬೇಕು ಅಂದುಕೊಂಡೆ, ನಾನು ಅವರನ್ನು ಕೇಳಿದಾಗ ಅವರು ನಕಾರಾತ್ಮಕವಾಗಿ ಉತ್ತರ ನೀಡಿದರು. ತಾವು ಅಲ್ಲಿ ಕಳೆದ ಆರು ತಿಂಗಳುಗಳಿಂದ ವಾಸ್ತವ್ಯ ಹೂಡಿರುವುದಾಗಿ ಹೇಳಿದರು. ಅಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ನಾನು ಕೇಳಿದಾಗ, ಅವರು ಹೇಳಿದ್ದು:ನಾವು ಸ್ಥಳೀಯ ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ವ್ಯಾಪಾರ ಅತಿ ಕಡಿಮೆ ಅವಧಿಯಲ್ಲಿ ತ್ವರಿತವಾಗಿ ಅಭಿವೃದ್ಧಿ ಸಾಧಿಸಿದೆ.
ಇದು ಹೊಸ ಜಗತ್ತು. ನಮ್ಮ ನವೋದ್ಯಮಗಳು ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ. ನಾವು ನಮ್ಮನ್ನು ಹೇಗೆ ಸಬಲೀಕರಿಸಬಹುದು ಎಂದು ನೋಡುತ್ತಿದ್ದಾರೆ. ಹೊಸ ವಿಷಯ ಸೇರಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸುತ್ತಿದ್ದಾರೆ. ತ್ಯಾಜ್ಯ ಸಂಪತ್ತಿನ ಕ್ಷೇತ್ರ ಭಾರತದಲ್ಲಿ ಎಷ್ಟು ದೊಡ್ಡದಾಗಿದೆ ಎಂದು ನೀವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅದರಲ್ಲಿ ಒಂದು ತಂತ್ರಜ್ಞಾನ ಇದೆ. ನಾವಿನ್ಯತೆ ಇದೆ, ಪುನರ್ಬಳಕೆ ಇದೆ, ಇದೆಲ್ಲವೂ ದೇಶಕ್ಕೆ ಬೇಕಾಗಿದೆ. ನಾವು ಇದನ್ನು ಬಲಪಡಿಸಬೇಕಿದೆ. ಪುನರ್ಬಳಕೆ ಭಾರತಕ್ಕೆ ಹೊಸದೇನೂ ಅಲ್ಲ; ನಮಗೆ ಶತಮಾನಗಳಿಂದ ಇದರ ಪರಿಚಯ ಇದೆ. ಅದಕ್ಕೆ ಹೊಂದಿಕೊಂಡಿದ್ದೇವೆ. ಬದಲಾವಣೆಯಿಂದಾಗಿ, ಮಧ್ಯಂತರ ಸಂಪರ್ಕ ಕಡಿತವಾಗಿದೆ. ಇದಕ್ಕೆ ಈಗ ನಾವು ಸಂಘಟಿತ ಸ್ವರೂಪ ನೀಡಬೇಕಾಗಿದೆ ಮತ್ತು ನಾವು ಈ ಕಾರ್ಯ ಮಾಡಿದರೆ, ಆಗ ನಾವು ಬದಲಾವಣೆ ತರಲು ಸಾಧ್ಯ.
ಶಿಕ್ಷಣ, ನಿಜ, ಶಿಕ್ಷಣ ರಂಗದಲ್ಲಿ ಐಐಎಂಗಳಲ್ಲಿ ಕಾಲೇಜಿನಲ್ಲೇ ಉದ್ಯೋಗ (ಕ್ಯಾಂಪಸ್ ಪ್ಲೇಸ್ ಮೆಂಟ್) ಸಿಗುತ್ತದೆ. ಒಂದು ಕೋಟಿ, ಎರಡು ಕೋಟಿ, ಮೂರು ಕೋಟಿ, ದೊಡ್ಡ ಮೊತ್ತ ನೀಡಿ ವಿದ್ಯಾರ್ಥಿಗಳನ್ನು ಕಂಪನಿಗಳು ಕೆಲಸಕ್ಕೆ ಸೇರಿಸಿಕೊಳ್ಳುತ್ತವೆ. ನಾವು ಎಂದಾದರೂ ಕನಸು ಕಂಡಿದ್ದೀವಿಯೇ, ಶಿಕ್ಷಕರು ಕೂಡ ಕ್ಯಾಂಪಸ್ ನಲ್ಲಿ ಉದ್ಯೋಗಕ್ಕೆ ಆಯ್ಕೆ ಆಗಬೇಕು, ಅವರೂ ಒಂದು ಕೋಟಿ, ಎರಡು ಕೋಟಿ ಅಥವಾ 5 ಕೋಟಿ ಪಡೆಯಬೇಕು ಎಂದು. ಇದೂ ಸಾಧ್ಯ. ಇದು ಖಂಡಿತಾ ಸಾಧ್ಯ. ನೀವು ಯಾವುದೇ ಭಾರತೀಯನ ಭೇಟಿ ಮಾಡಿ, ಶ್ರೀಮಂತ ಅಥವಾ ಬಡವ, ಅತಿ ಶಿಕ್ಷಿತ ಅಥವಾ ಅಶಿಕ್ಷಿತ, ಅವರಿಗೆ ಒಂದು ಪ್ರಶ್ನೆ ಕೇಳಿ: ನಿಮ್ಮ ಬದುಕಿನ ಗುರಿ ಏನು? ನಿಮಗೆ ಸರ್ವೇ ಸಾಮಾನ್ಯ ಉತ್ತರ ಸಿಗುತ್ತದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು. ನೀವು ಯಾರನ್ನಾದರೂ ಕೇಳಿ, ನಿಮ್ಮ ಚಾಲಕನನ್ನು ಕೇಳಿ, ಅವನು ಏನು ಚಿಂತಿಸುತ್ತಾನೆ ಎಂದು. ಅವನು ಹೇಳುವುದೂ ನಾನು ಕೂಡ ಹೇಗೋ ನನ್ನ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸುತ್ತಿದ್ದೇನೆ. ನಾನು ನನ್ನ ಜೀವನವನ್ನು ಡ್ರೈವರ್ ಆಗಿ ಕಳೆದೆ, ಆದರೆ, ನನ್ನ ಮಕ್ಕಳು ಯಶಸ್ವಿಯಾಗಬೇಕು ಎಂದು ಬಯಸುತ್ತೇನೆ.
ಸಾಹೇಬ್, ನಾನು ಹಲವು ಜನರನ್ನು ಕೇಳಿದ್ದೇನೆ, ಅವರು ಡ್ರೈವರ್ ಇರಬಹುದು, ಲಿಫ್ಟ್ ಮ್ಯಾನ್ ಇರಬಹುದು, ನಾನು ಅವರನ್ನು ಕೇಳುತ್ತೇನೆ. ಅವರಿಗೆ ಸಾಲ ಇದೆಯೋ ಇಲ್ಲವೋ ಎಂದು. ಅವರು ಹೇಳುತ್ತಾರೆ – ಸಾರ್ ನಾವು ಸಾಲ ತೆಗೆದುಕೊಂಡಿದ್ದೇವೆ. ನೀವು ಏಕೆ ಸಾಲ ಪಡೆದಿರಿ ಎಂದು ಕೇಳುತ್ತೇನೆ. ಅವರು ತಮ್ಮ ಮಗುವನ್ನು ಉತ್ತಮ ಶಾಲೆಗೆ ಸೇರಿಸಲು ಸಾಲ ಮಾಡಿದ್ದಾರೆ. ಅಂದರೆ, ನಮ್ಮ ದೇಶದಲ್ಲಿ ತುಂಬಾ ಬೇಡಿಕೆ ಇರುವುದು ಏನಾದರೂ ಇದ್ದರೆ, ಅದು ಉತ್ತಮ ಶಿಕ್ಷಕರನದು. ನಾವು ಇಂಥ ಉತ್ತಮ ಶಿಕ್ಷಕರನ್ನು ರೂಪಿಸಬೇಕಾಗಿದೆ ಮತ್ತು ಶ್ರೀಸಾಮಾನ್ಯ ಶಿಕ್ಷಕನಾಗುವುದು ತುಂಬಾ ಗೌರವದ ವಿಷಯ ಎಂದು ಭಾವಿಸುವಂತಾಗಬೇಕು. ಅದರ ಮೂಲಕ ಅವರು ಅತಿ ದೊಡ್ಡ ಕೊಡುಗೆ ನೀಡಬಹುದಾಗಿದೆ. ಕೆಲವು ಹೊಸ ಮಾದರಿಗಳು ಹೊರಹೊಮ್ಮುತ್ತಿವೆ. ಹತ್ತಾರು ಹೊಸ ಹೊಸ ಮಾದರಿಗಳು. ಪ್ರಾಯೋಗಿಕ ಮತ್ತು ಉತ್ತಮ ಮಾದರಿಗಳು ಇದಕ್ಕೆಹೊರಹೊಮ್ಮಿವೆ ಮತ್ತು ತಂತ್ರಜ್ಞಾನ ಈ ನಿಟ್ಟಿನಲ್ಲಿ ಅತಿ ದೊಡ್ಡ ಪಾತ್ರ ವಹಿಸಬಲ್ಲುದಾಗಿದೆ.
ನಾವು ಹಲವು ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಇದು ನಮ್ಮ ಹೆಮ್ಮೆಕೂಡ. ಆದರೆ, ಹಲವು ಟ್ರಾನ್ಸ್ ಪಾಂಡರ್ ಗಳು ಗಾಳಿಯಲ್ಲಿ ಉಪಯೋಗವಾಗದೆ ತೇಲಾಡುತ್ತಿವೆ. ನಾವು ಅಧಿಕಾರಕ್ಕೆ ಬಂದ ಬಳಿಕ ಈ ಕಂದಕ ಮುಚ್ಚಿದ್ದೇವೆ. ನಾವು ಬಾಹ್ಯಾಕಾಶ ಮತ್ತು ಶಿಕ್ಷಣ ಹಾಗೂ ತಂತ್ರಜ್ಞಾನ ವಲಯವನ್ನು ಒಟ್ಟಿಗೆ ತಂದಿದ್ದೇವೆ. ಇತ್ತೀಚೆಗೆ, ನಾನು 32 ಟ್ರಾನ್ಸ್ ಪಾಂಡರ್ ಗಳನ್ನು ಶಿಕ್ಷಣ ಕ್ಷೇತ್ರವೊಂದಕ್ಕೇ ಸಮರ್ಪಿಸಿದ್ದೇನೆ. ಅವು ನಿಮಗೆ, ನಿಮ್ಮ ಮಕ್ಕಳಿಗೆ ಮನೆಯಲ್ಲೇ ಉಚಿತವಾಗಿ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲುವಾಗಿವೆ. ಅಂದರೆ, ತಂತ್ರಜ್ಞಾನ ನಮಗೆ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲುದಾಗಿದೆ. ಬಡವರಲ್ಲೇ ಬಡವರಿಗೂ ಇದು ಸಿಗುತ್ತದೆ.
ನಾವು ಹೇಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬಹುದು, ಹೇಗೆ ಗುಣಮಟ್ಟದ ಶಿಕ್ಷಣದಲ್ಲಿ ಬದಲಾವಣೆ ತರಬಹುದು, ಶಿಕ್ಷಣದ ಗುಣಮಟ್ಟದಲ್ಲಿ ತಳಮಟ್ಟದಲ್ಲಿ ಬದಲಾವಣೆ ಬಂದರೆ, ಆಗ ಶಿಕ್ಷಕರ ಮೇಲೆ ಎಂಥ ಒತ್ತಡ ಬರುತ್ತದೆ ಎಂದರೆ ಆಗ ಅವರು ಬದಲಾಗಲೇಬೇಕಾಗುತ್ತದೆ. ಆ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿಯೇ ಈ ಸರ್ಕಾರ ಈ ಕ್ಷೇತ್ರದಲ್ಲಿ ಬದಲಾವಣೆಯ ಪ್ರಯತ್ನ ಮಾಡುತ್ತಿದೆ. ನಿಮ್ಮಂಥವರು, ಜಗತ್ತಿನ ವಿವಿಧ ಆಯಾಮ ಬಲ್ಲವರು, ಸಿಕ್ಸ್ತ್ ಸೆನ್ಸ್ ಇರುವವರು, ಉತ್ಸುಕತೆ ಇರುವವರು, ಉತ್ಸಾಹ ಇರುವವರು, ನಾವಿನ್ಯತೆಗೆ ತುಡಿಯುವವರು, ಚಿಂತಿಸಿ, ಕಲ್ಪನೆ ಕೊಡಿ. ಇದು ನನ್ನ ಪ್ರಯತ್ನ, ಹೇಗೆ ಈ ವಿಷಯಗಳನ್ನು ಸರ್ಕಾರದೊಂದಿಗೆ ಜೋಡಿಸುವುದು ಎಂಬುದು ನನ್ನ ಪ್ರಯತ್ನದ ಭಾಗವಾಗಿದೆ.
ಅದೇ ರೀತಿ, ನಾವು ಸರ್ಕಾರದ ಯೋಜನೆಯ ಮೂಲಕ ನವ ಭಾರತ ನಿರ್ಮಾಣ ಮಾಡುತ್ತೇವೆ ಎಂಬುದು, ಇದು ನನ್ನ ಚಿಂತನೆಯೂ ಅಲ್ಲ, ಅಥವಾ ಸರ್ಕಾರದ ಚಿಂತನೆಯೂ ಅಲ್ಲ. ನೀವು ಮತ್ತು ನಿಮ್ಮಂಥ ದೇಶದ ಜನತೆ, ಅಂದರೆ ನಿಮ್ಮಂಥ ಹಲವು ಜನರು, ದೇಶದ 125 ಕೋಟಿ ಜನರು ನವ ಭಾರತಕ್ಕೆ ಸಂಕಲ್ಪ ಮಾಡದಿದ್ದರೆ, ನವ ಭಾರತದಲ್ಲಿ ಅವರು ತಮ್ಮ ಪಾತ್ರ ನಿರ್ಧರಿಸದಿದ್ದರೆ, ಅವರು ಅದನ್ನು ಪೂರೈಸದಿದ್ದರೆ, ಸ್ವಯಂಪ್ರಯತ್ನಶೀಲರಾಗದಿದ್ದರೆ, ಈ ಕಾರ್ಯ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ.
ಹೀಗಾಗಿಯೇ, ಇದು ನಮ್ಮ ಪ್ರಯತ್ನ, ಇದು ನಿಮ್ಮಂದ ನನ್ನ ನಿರೀಕ್ಷೆ, ನೀವು ಎಲ್ಲೇ ಇರಿ, ನೀವು ಇದನ್ನು ನಿಮ್ಮ ಜನರಿಗೆ ಹೇಳುತ್ತೀರಾ? ನಿಮ್ಮ ಬಳಿ 20 ಉದ್ಯೋಗಿಗಳಿರಬಹುದು, 50, 100 ಅಥವಾ ಸಾವಿರ ಉದ್ಯೋಗಿಗಳಿರಬಹುದು, ನೀವು ಎಂದಾದರೂ ಈ ವಿಚಾರಗಳನ್ನು ಕೇಳಿದ್ದೀರಾ. ಅವರನ್ನು ಕೂರಿಸಿಕೊಂಡು, 2022ರ ಹೊತ್ತಿಗೆ ನಾವು ದೇಶವನ್ನು ಈ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು, ಇದಕ್ಕೆ ನಿಮ್ಮ ಕೊಡುಗೆ ಏನು ಎಂದು ವಿಚಾರಿಸಿದ್ದೀರಾ? ಇದಕ್ಕೆ ನೀವೇನು ಮಾಡುತ್ತೀರಿ ಎಂದು ಕೇಳಿದ್ದೀರಾ? ನಾವು ಇಂಥ ವಾತಾವರಣ ಸೃಷ್ಟಿಸಿದರೆ, ಪ್ರತಿಯೊಬ್ಬರೂ ಸಾಕಷ್ಟು ಕೊಡುಗೆ ನೀಡಬಹುದು.
ಕೆಲವೊಮ್ಮೆ, ನನಗೆ ನೆನಪಿದೆ, ನಾವು ಆಗ ರಾಜಕೀಯದಲ್ಲಿ ಇರಲಿಲ್ಲ. ಆಗ ಒಬ್ಬ ದೊಡ್ಡ ಉದ್ಯಮಿ, ಅವರು ಗಾಂಧಿ ಮಾದರಿಯಂತೆ ಜೀವನ ನಡೆಸುತ್ತಿದ್ದರು. ಅವರದು ನಿಸ್ವಾರ್ಥ ಸೇವಾ ಭಾವನೆಯಾಗಿತ್ತು. ಅವರ ಕುಟುಂಬದ ಒಬ್ಬರು ಸದಸ್ಯರು, ರಾಮಕೃಷ್ಣ ಮಿಷನ್ ಜೊತೆ ಸಂಪರ್ಕ ಹೊಂದಿದ್ದರು. ನನಗೂ ರಾಮಕೃಷ್ಣ ಮಿಷನ್ ಜೊತೆ ಸಂಪರ್ಕ ಇದ್ದ ಕಾರಣ, ಅವರ ಕುಟುಂಬದ ಜೊತೆಗೂ ನಂಟಿತ್ತು. ಅವರು ಒಮ್ಮೆ ಒಂದು ಮುಚ್ಚಿದ್ದ ಹಳೆಯ ಗಿರಣಿ ಖರೀದಿಸಿದರು. ಏಕೆ ಆ ಮುಚ್ಚಿದ್ದನ್ನು ಕೊಂಡರು? ಅದು ಮುಷ್ಕರದ ಫಲವಾಗಿ ಮುಚ್ಚಿಹೋಗಿತ್ತು. ಇದನ್ನು ಕಾರ್ಮಿಕ ಸಂಘಟನೆಗಳು ಮಾಡಿದ್ದವು. ನಾನು ಅವರನ್ನು ಒಮ್ಮೆ ಕೇಳಿದೆ. ನೀವು ಏಕೆ ಈ ರಿಸ್ಕ್ ತೆಗೆದುಕೊಂಡಿರಿ ? ಅದರ ಫಲಿತಾಂಶ ಏನಾಯಿತು?ಮುಂದೇನಾಯಿತು ? ಅವರು ನನಗೆ ಸರಳ ಉತ್ತರ ನೀಡಿದರು: “ನಾವು ಅದನ್ನು ಖರೀದಿಸಿದೆವು ಮತ್ತು ಖರೀದಿಸಿದ ಮೊದಲ ದಿನದಿಂದಲೂ ಆ ಜಾಗಕ್ಕೆ ಭೇಟಿ ನೀಡುತ್ತಿದ್ದೆವು. ಆರು ತಿಂಗಳವರೆಗೆ ಅಲ್ಲಿಗೆ ನಿರಂತರವಾಗಿ ಹೋಗಿ ಬರಬೇಕು ಎಂದು ನಿರ್ಧರಿಸಿದೆ. ನಾನು ಅಲ್ಲಿ ಹೋಗಿ ಕಾರ್ಮಿಕರ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದೆ. ನಾನು ಅಲ್ಲಿ ಹೋಗಿ ಕೂರುತ್ತಿದ್ದೆ. ಊಟ ಮಾಡುತ್ತಿದೆ. ನನ್ನ ಈ ಒಂದು ಸಣ್ಣ ನಿರ್ಧಾರ, ನನ್ನ ಬಗ್ಗೆ ಅಲ್ಲಿನ ಕಾರ್ಮಿಕರ ಚಿಂತನೆಯನ್ನೇ ಬದಲು ಮಾಡಿತು. ಅವರು ನನ್ನನ್ನು ಮಾಲೀಕ ಎಂದು ನೋಡುತ್ತಿರಲಿಲ್ಲ. ನಾನೂ ಕೂಡ ಅವರನ್ನು ಕಾರ್ಮಿಕರಂತೆ ನೋಡುತ್ತಿರಲಿಲ್ಲ. ನಾನು ಕೂಡ ಅವರ ಟೇಬಲ್ ನಲ್ಲಿ ಅವರು ಏನು ತಿನ್ನುತ್ತಾರೋ ಅದನ್ನೇ ತಿನ್ನುತ್ತಿದ್ದೆ. ಇದು ಮಾನಸಿಕ ಬದಲಾವಣೆ ತಂದಿತು. ಅವರು ನನ್ನ ಕುಟುಂಬದ ಸದಸ್ಯರಂತಾಗಿದ್ದರು. ಅವರು ಎಷ್ಟು ಕಷ್ಟಪಟ್ಟು ಕೆಲಸ ಮಾಡಿದರು ಎಂದರೆ ಆರು ತಿಂಗಳುಗಳಲ್ಲಿ ನಾನು ಖರೀದಿಸಿದ್ದ ಮುಳುಗಿ ಹೋಗಿದ್ದ ಆ ಕಾರ್ಖಾನೆ ಲಾಭದಾಯಕವಾಯಿತು.”
ನಾನು ಹೇಳಿದ ಅರ್ಥ ಏನೆಂದರೆ, ನೀವು ನಿಮ್ಮ ಸಹೋದ್ಯೋಗಿಗಳನ್ನು ಕೇಳಿರಿ, ನಿಮ್ಮ ಬಳಿ ಕೆಲಸ ಮಾಡುವವರ ಮನೆಯಲ್ಲಿ 12, 15, 18 ವರ್ಷದ ಮಕ್ಕಳಿರುತ್ತಾರೆ. ವರ್ಷದಲ್ಲಿ ಒಂದೆರೆಡು ಬಾರಿ ಅವರನ್ನು ಒಗ್ಗೂಡಿಸಿದ್ದೀರಾ. ಹೀಗೆ ಅವರೆಲ್ಲರನ್ನೂ ಒಂದು ಕಡೆ ಸೇರಿಸಿ ಉತ್ತೇಜನಕಾರಿ, ಪ್ರೋತ್ಸಾಹಕಾರಿ ಮಾತುಗಳನ್ನು ಆಡಿದ್ದೀರಾ? ದೇಶಕ್ಕೆ ಕೆಡಕು ಮಾಡಬಾರದು ಎಂದು ಹೇಳಿದ್ದೀರಾ? ನೋಡಿ, ಹೇಗೆ ನೀವು ಅವರ ಮಕ್ಕಳೊಂದಿಗೆ ನಿಮ್ಮ ಸಂಪರ್ಕ ಬೆಳೆಸುತ್ತೀರೋ, ಅವರಿಗೆ ಬೋನಸ್ ಸಿಕ್ಕಿದೆಯೋ ಇಲ್ಲವೋ, ಬಡ್ತಿ ಸಿಕ್ಕಿದೆಯೋ ಇಲ್ಲವೋ, ಅವರು ಜೀವನಪೂರ್ತಿ ನಿಮಗೆ ಸಮರ್ಪಿತರಾಗಿ ಹೋಗಿರುತ್ತಾರೆ. ನಾನು ಈ ಬದಲಾವಣೆ ತರಲು ಬಯಸುತ್ತೇನೆ. ನೀವು ಹೇಳಿ, ಭಾರತ ಸರ್ಕಾರ ಒಂದು ವಿಮಾ ಯೋಜನೆ ಮಾಡಿದೆ. ಒಂದು ದಿನಕ್ಕೆ ಒಂದು ರೂಪಾಯಿ ಪ್ರೀಮಿಯಂ. ಸರ್ಕಾರ ನಿಮ್ಮ ಕಾರ್ಮಿಕರಿಗಾಗಿ ಇಂಥ ಒಂದು ಒಳ್ಳೆ ಯೋಜನೆ ರೂಪಿಸಿದೆ. ಇದು ಒಂದು ಉತ್ತಮ ವಿಮೆ. ನೀವು 500 ರೂಪಾಯಿ ಠೇವಣಿಯನ್ನು ಬ್ಯಾಂಕಲ್ಲಿಟ್ಟರೆ, ಅದು ಪ್ರತಿ ವರ್ಷ ಅವರ ಪ್ರೀಮಿಯಂ ಭರಿಸುತ್ತದೆ. ಅವರ ಬದುಕಿನಲ್ಲಿ ಏನಾದರೂ ಅನಾಹುತ ನಡೆದರೆ, ಆಗ ವಿಮೆಯ ಮೊತ್ತ 2 ಲಕ್ಷ, ಎರಡೂ ವಿಮೆ ಇದ್ದರೆ 4 ಲಕ್ಷ ರೂಪಾಯಿ ಆ ಬಡ ಕಾರ್ಮಿಕನ ಕುಟುಂಬಕ್ಕೆ ದೊರಕುತ್ತದೆ.
ಸರ್ಕಾರದ ಈ ಯೋಜನೆಗಳು, ನೇರವಾಗಿ ಕಾರ್ಮಿಕರಿಗೆ ಸಂಬಂಧಿಸಿದ್ದಾಗಿವೆ. ನೀವು ಈ ಯೋಜನೆಗಳನ್ನು ಪ್ರೋತ್ಸಾಹಿಸುತ್ತೀರಾ? ನೀವು ನಮ್ಮ ಗೌರವ್ ಅನ್ನು ನೋಡಿ, ಅದು ನಿಮಗೆ ನಮ್ಮ ಸರ್ಕಾರದ ಡಿಜಿಟಲ್ ವೇದಿಕೆಯ ಬಗ್ಗೆ ತಿಳಿಸುತ್ತದೆ. ನಿಮ್ಮಲ್ಲಿ ಅನೇಕರು ಡಿಜಿಟಲ್ ಕ್ಷೇತ್ರದಿಂದ ಬಂದವರಾಗಿದ್ದೀರಿ. ನೀವು ದೊಡ್ಡ ಪ್ರಮಾಣದಲ್ಲಿ ಈ ಕ್ಷೇತ್ರ ಪ್ರವೇಶಿಸುವ ಮೂಲಕ ಸರ್ಕಾರಕ್ಕೆ ಒತ್ತು ನೀಡುತ್ತೀರಾ. ? ನೀವು ಸರ್ಕಾರ ನಡೆಸುವಲ್ಲಿ ಅದರ ಪಾಲುದಾರರಾಗುತ್ತೀರಾ? ನಾವು ಬದಲಾವಣೆಯ ದಿಕ್ಕಿನಲ್ಲಿ ಸಾಗಿದ್ದೇವೆ. ನಾವು ಹೆಚ್ಚು ಹೆಚ್ಚು ಸಂಪರ್ಕಿತರಾದಂತೆ ಆ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಸಾಗಬಹುದು. ನಾವು ಎಲ್ಲೇ ಇರಲಿ, ನಾವು ಭಾರತೀಯ ಪ್ರಜೆಗಳು. ನಾವು ಕಚೇರಿಯಲ್ಲಿರಲಿ, ಯಾವುದೇ ವ್ಯವಸ್ಥೆಯಲ್ಲಿರಲಿ, ಯಾವುದೇ ಮಳಿಗೆಯಲ್ಲಿ ಕುಳಿತಿರಲಿ, ಯಾವುದೇ ರೀತಿಯ ಕಾರ್ಖಾನೆಯನ್ನು ನಾವು ನಡೆಸುತ್ತಿರಲಿ, ಒಟ್ಟಾರೆಯಾಗಿ, ನಾವೆಲ್ಲರೂ ಒಂದು ಭಾರತ. 125 ಕೋಟಿ ಜನರಲ್ಲಿ ಈ ಭಾವನೆ ಬರಬೇಕು. ಇದು ನನ್ನ ಪ್ರಯತ್ನ. ಇದಕ್ಕಾಗಿ ನನಗೆ ನಿಮ್ಮ ಬೆಂಬಲ ಬೇಕು. ನಾನೂ ಕೂಡ ಹಲವಾರು ವಿಷಯ ಚಿಂತಿಸುತ್ತೇನೆ, ಪ್ರಧಾನಮಂತ್ರಿಯಾಗಿ ಆ ಎಲ್ಲವನ್ನೂ ಮಾಡುತ್ತೇನೆ ಎಂದರೆ ಅದು ನಿಜವಲ್ಲ. ನಾನೂ ಕೂಡ ಒಂದು ವ್ಯವಸ್ಥೆಯ ಮೂಲಕ ಸಾಗಬೇಕು. ಹೀಗಾಗಿ, ನೀವು ನೀಡಿರುವ 59 ಕಲ್ಪನೆಗಳ ಪೈಕಿ 40 ಕಲ್ಪನೆಗಳು ಮುಂದೆ ಸಾಗದೇ ಇರಬಹುದು. ಆದರೆ, ನೀವು ನೀಡಿರುವ 10 ಕಲ್ಪನೆಗಳು ಮುಂದೆ ಸಾಗಿದರೂ, ಅದು ಈ ದೇಶಕ್ಕೆ ನೀವು ಕೊಟ್ಟ ಅಮೂಲ್ಯ ಕೊಡುಗೆ. ಈ ಭಾವನೆಯೊಂದಿಗೆ ನಮ್ಮ ಪ್ರಯತ್ನ ಸಾಗಬೇಕು. ಇದರಲ್ಲಿ ನಿರಾಶೆ ಮೂಡಬಾರದು.
ಸ್ನೇಹಿತರೇ,
ಹಲವು ನಿರ್ಧಾರ ಆಗುತ್ತದೆ, ಆಲೋಚನೆಗಳು ಮೂಡುತ್ತವೆ, ನಾನು ಹೇಳಿದ್ದು, ಆಗಲಿಲ್ಲ, ಅವರು ಹೇಳಿದ್ದು ಆಗಲಿಲ್ಲ ಎಂದು ನೀವು ಚಿಂತಿಸಬಹುದು, ಆದರೆ, ಹಲವು ಕ್ರಮಗಳು ನೀವು ಹೇಳಿದ್ದರ ಆಧಾರದ ಮೇಲೆ, ಅಥವಾ ಬೇರೆಯವರು ಹೇಳಿದ್ದರ ಮೇಲೆ ಆಗಿರುತ್ತದೆ, ಇದರಿಂದಲೇ ಬದಲಾವಣೆ ಆಗುತ್ತಿರುತ್ತದೆ. ವ್ಯವಸ್ಥೆಯಲ್ಲಿ ಕೆಲವೊಮ್ಮೆ ಉತ್ತಮ ಕಲ್ಪನೆಯಿದ್ದರೂ ಅದನ್ನು ಅಳವಡಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಆದರೆ ಕಾಲಕ್ರಮೇಣ, ಅದರ ಜೀರ್ಣಶಕ್ತಿ ಹೆಚ್ಚುತ್ತದೆ, ಹೊಸ ಹೊಸ ಉತ್ತಮ ಯೋಜನೆಗಳು ಬರುತ್ತವೆ. ಸ್ವೀಕಾರವಾಗುತ್ತವೆ. ನೀವು ಈ ಭಾವನೆಯೊಂದಿಗೆ ನಮ್ಮೊಂದಿಗೆ ನಿಮ್ಮನ್ನು ಸಂಪರ್ಕಿತಗೊಳಿಸಬೇಕು.
ನಾನು ಈ ಎಲ್ಲ ಅಂಶಗಳನ್ನು ಸಾಂಸ್ಥಿಕ ವ್ಯವಸ್ಥೆಯ ರೂಪದಲ್ಲಿ ಅಭಿವೃದ್ಧಿಪಡಿಸಲು ಇಚ್ಛಿಸುತ್ತೇನೆ. ನೀವು ನಮಗೆ ಹೆಚ್ಚಿನ ಸುಧಾರಣೆಗಾಗಿ ಫೀಡ್ ಬ್ಯಾಕ್ ನೀಡುತ್ತೀರಿ. ಇ ಮೇಲ್ ಮೂಲಕ ಕೂಡ ನಂತರ ನೀವು ನಿಮ್ಮ ಸಲಹೆ ಕಳುಹಿಸಬಹುದು. ನೀವು ಈ ಕಾರ್ಯಕ್ರಮದ ಸ್ವರೂಪದ ಬದಲಾವಣೆಗೂ ಸಲಹೆ ನೀಡಬಹುದು, ನನಗೆ ವಿಶ್ವಾಸವಿದೆ. ಏಕೆಂದರೆ ನಾನು ನಿನ್ನೆ ಸಂಜೆಯೇ ಇಲ್ಲಿ ಬಂದೆ, ನಿಮ್ಮನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ನಿಮ್ಮ ಕಲ್ಪನೆಗಳನ್ನು ಅರಿಯುವ ಅವಕಾಶವೂ ಆಯಿತು. ನೀವು ಹೇಗೆ ಹೊಸ ದಾರಿಯಲ್ಲಿ ಚಿಂತಿಸುತ್ತೀರಿ ಎಂಬುದೂ ತಿಳಿಯಿತು. ಸರ್ಕಾರದಲ್ಲಿ ಏನೆಲ್ಲಾ ವಿಷಯಗಳಿವೆ., ನಾನು ಒಂದು ಚಿಕ್ಕ ಪ್ರಯತ್ನ ಮಾಡಿದ್ದೇನೆ. ನಾನು ಹ್ಯಾಕಥಾನ್ ಆಯೋಜಿಸುವ ಮೂಲಕ ಒಂದು ಪುಟ್ಟ ಪ್ರಯತ್ನ ಮಾಡಿದೆ. ಇದನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾಡಲಾಯಿತು. ನಾವು ಎಲ್ಲ ಐಐಟಿಗಳಿಂದ ವಿದ್ಯಾರ್ಥಿಗಳನ್ನು ಭಾಗಿಯಾಗಲು ಆಹ್ವಾನಿಸಿದ್ದೆವು. 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ಭಾಗಿಯಾದರು. ನಾನು ಸರ್ಕಾರಿ ಇಲಾಖೆಗಳಿಗೆ ಸೂಚಿಸಿದೆ ನೀವು ಕೆಲಸ ಮಾಡುತ್ತಾ ಮಾಡುತ್ತಾ ಏನೆಲ್ಲಾ ಕಷ್ಟಗಳು ಎದುರಾಗುತ್ತವೆ. ಯಾವುದಕ್ಕೆ ಪರಿಹಾರ ಇಲ್ಲ ಅನಿಸುತ್ತದೋ ಅದನ್ನು ಪಟ್ಟಿ ಮಾಡಿ ಎಂದು. ಆರಂಭದಲ್ಲಿ ಇದಕ್ಕೆ ಪ್ರತಿರೋಧ ಬಂತು. ನಾನು ಕಾರ್ಯದರ್ಶಿ, ನಾನು ಜಂಟಿ ಕಾರ್ಯದರ್ಶಿ, ನಾನು ಇಂತಿಂಥ ಸಮಸ್ಯೆಗೆ ಪರಿಹಾರ ಇಲ್ಲ ಎಂದು ಹೇಗೆ ಹೇಳಲಿ ಎಂದು ಪ್ರತಿರೋಧ ವ್ಯಕ್ತಪಡಿಸಿದರು. ಅದು ಅವರಿಗೆ ಮುಜುಗರದ ಸಂಗತಿಯಾಗಿತ್ತು. ಆರಂಭದಲ್ಲಿ ಇದರ ಬಗ್ಗೆ ಹೇಳುವುದು ಕಷ್ಟವಾಗಿತ್ತು. ಆದಾಗ್ಯೂ, ನನ್ನ ಕಚೇರಿ ಮತ್ತು ನಾನು, ಅವಿರತವಾಗಿ ಶ್ರಮಿಸಿ, ಈವರೆಗೆ ಪರಿಹಾರ ಸಿಗದೆ ಇದ್ದ ಇಂಥ 400 ಸಮಸ್ಯೆಗಳನ್ನು ಪಟ್ಟಿ ಮಾಡಿದರು. ಆರಂಭದಲ್ಲಿ ಅವರಿಗೆ ಅನಿಸಿದ್ದು, ಯಾವುದೇ ಸಮಸ್ಯೆಯೇ ಇಲ್ಲ. ಆಗ ನಾನು ಅದನ್ನು ವಿದ್ಯಾರ್ಥಿಗಳಿಗೆ ನೀಡಿ, ಹ್ಯಾಕಥಾನ್ ಆಯೋಜಿಸುವಂತೆ ತಿಳಿಸಿದೆ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲೂ ಸೂಚಿಸಿದೆ. ಅವರು 40 ಗಂಟೆಗಳ ಕಾಲ ತಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಅವಿಶ್ರಾಂತ ಕೆಲಸ ಮಾಡಿದರು, 40 ಸಾವಿರ ಭಾರತೀಯ ವಿದ್ಯಾರ್ಥಿಗಳು, ಅದರಲ್ಲೂ 16ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳು, ತಮ್ಮ ಬುದ್ಧಿ ಖರ್ಚು ಮಾಡಿದರು. ನಿಮಗೆ ಕೇಳಿ ಸಂತೋಷವಾಗುತ್ತದೆ, ಅವರು ಅದ್ಭುತ ಪರಿಹಾರಗಳನ್ನು ಈ ಸಮಸ್ಯೆಗಳಿಗೆ ನೀಡಿದರು. ರೈಲ್ವೆ ಇಲಾಖೆಯವರು ಮಾರನೆ ದಿನ ಅವರನ್ನು ಸಭೆಗೆ ಕರೆದರು ಮತ್ತು ಅವುಗಳನ್ನು ರೈಲ್ವೆ ಇಲಾಖೆಯಲ್ಲಿ ಅಳವಡಿಸಿಕೊಂಡರು. ಎಲ್ಲ ಇಲಾಖೆಗಳೂ ಅವರು ನೀಡಿದ ಪರಿಹಾರಗಳನ್ನು ತಮ್ಮ ಕಾರ್ಯವಿಧಾನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
ನೀವು ನಮ್ಮ ದೇಶದ 16-18 ವಯಸ್ಸಿನ ಯುವಜನರ ತಂದೆಯನ್ನು ಅವರ ಮಕ್ಕಳ ಬಗ್ಗೆ ಕೇಳಿದರೆ, ಅವರು ಮೈನಸ್ 10 ಅಂಕ ನೀಡುತ್ತಾರೆ. ಆದರೆ, ಅದೇ ಯುವಕ ದೇಶಕ್ಕೆ ಬಹಳ ಫಲಕಾರಿಯಾಗುತ್ತಾನೆ. ಈ 40 ಸಾವಿರ ವಿದ್ಯಾರ್ಥಿಗಳ ಕಾರ್ಯವನ್ನುವನ್ನು ಅಳವಡಿಸುವುದು ಇದು ನನ್ನ ಪ್ರಯತ್ನವಾಗಿದೆ. ನಿಮಗೂ ಈ ಸಾಮರ್ಥ್ಯವಿದೆ. ದೇಶಭಕ್ತಿಯಲ್ಲಿ ನಿಮಗೂ ನನಗೂ ಯಾವುದೇ ವ್ಯತ್ಯಾಸವಿಲ್ಲ. ನಮ್ಮಲ್ಲಿ ಸಮಾನವಾದ ದೇಶಾಭಿಮಾನವಿದೆ. ನಮ್ಮಲ್ಲಿ ಪ್ರತಿಯೊಬ್ಬರೂ, ನಮ್ಮ ಚಿಂತನೆಯಲ್ಲಿ, ನಮಗೆ ದೇಶ ಪ್ರಗತಿ ಸಾಧಿಸಬೇಕು ಎಂಬ ಭಾವನೆ ಇದೆ. ಇದು ಎಲ್ಲರ ಆಸೆ. ಕೆಲಸ ಮಾಡಲು ಅಪಾರ ಅವಕಾಶಗಳಿವೆ.
ನನ್ನ ಪ್ರಕಾರ, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ, ಉತ್ತಮ ಫಲಿತಾಂಶ ಸಾಧ್ಯ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೇಳುತ್ತೇನೆ, ಸಮಯ ಅತ್ಯಂತ ಅಮೂಲ್ಯವಾದದ್ದು, ಬೇರೆಯವರಿಗೆ ಅಮೂಲ್ಯ ಅಲ್ಲವೋ ಹೌದೋ ಗೊತ್ತಿಲ್ಲ, ಆದರೆ, ಹಣವಂತರಿಗೆ ಖಂಡಿತಾ ಇದು ಅಮೂಲ್ಯ. ಆದಾಗ್ಯೂ ನೀವು ನಿಮ್ಮ ಅಮೂಲ್ಯ ಸಮಯ ನೀಡಿದ್ದೀರಿ. ಇದಕ್ಕಾಗಿ ನಾನು ಸರ್ಕಾರದ ವತಿಯಿಂದ ಹಾಗೂ ಹೃದಯ ಪೂರ್ವಕವಾಗಿ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ನೀವು ನಮ್ಮೊಂದಿಗೆ ಸಂಪರ್ಕದಲ್ಲಿರುತ್ತೀರಿ ಎಂಬ ವಿಶ್ವಾಸ ಹೊಂದಿದ್ದೇನೆ. ನಾವು ನಮ್ಮ ಗಾಥೆಯನ್ನು ಮುಂದೆ ತೆಗೆದುಕೊಂಡು ಹೋಗೋಣ. ನಾವು ಮತ್ತೆ ವಿಷಯಾಧಾರಿತವಾಗಿ ಭೇಟಿ ಆಗೋಣ, ವಲಯವಾರು ಸಿಗೋಣ, ಬೇರೆ ಬೇರೆ ವಿಧಾನದಿಂದ ಸಿಗಬಹುದು. ಈ ಅಂಶಗಳನ್ನು ಮುಂದುವರಿಸಿಕೊಂಡು ಹೋಗಬಹುದು. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಧನ್ಯವಾದಗಳು.
****
With changing times, we have to change our processes and systems: PM @narendramodi addresses young CEOs https://t.co/nXflnTuU2V
— PMO India (@PMOIndia) August 17, 2017
Important to integrate the strengths of society with our systems: PM @narendramodi https://t.co/nXflnTuU2V
— PMO India (@PMOIndia) August 17, 2017
Remember how Padma Awards were given earlier? We brought in a 'small' change- people can recommend names for awards, unlike the past: PM
— PMO India (@PMOIndia) August 17, 2017
The Padma Awards given this year include exemplary success stories, who have been working silently and tirelessly on the ground: PM
— PMO India (@PMOIndia) August 17, 2017
We believe every citizen has something or the other to contribute to the nation & we want to integrate these strengths with our growth: PM
— PMO India (@PMOIndia) August 17, 2017
Policy makers in Government are relatively senior...the group I am meeting today is young. I want both to work together for India's good: PM
— PMO India (@PMOIndia) August 17, 2017
I have found senior officials in the Government seeing opportunities in the new ideas shared: PM https://t.co/nXflnTuU2V
— PMO India (@PMOIndia) August 17, 2017
Along with good ideas, let us work towards the roadmap and institutional arrangements to fulfil the ideas: PM https://t.co/nXflnTuU2V
— PMO India (@PMOIndia) August 17, 2017
It is unfortunate that corruption was institutionalised. The time has come to change this. The time for middlemen is over: PM
— PMO India (@PMOIndia) August 17, 2017
Middlemen are out of work in this Government and they are the ones who are most unhappy: PM @narendramodi
— PMO India (@PMOIndia) August 17, 2017
Innovation is life. When there is no innovation, there is stagnation: PM @narendramodi
— PMO India (@PMOIndia) August 17, 2017
We have big placements in leading business schools, the same way why can't we have placements recruiting teachers with good pay packages: PM
— PMO India (@PMOIndia) August 17, 2017
We need to create an atmosphere where our youngsters want to be teachers and educate others: PM @narendramodi https://t.co/nXflnTuU2V
— PMO India (@PMOIndia) August 17, 2017
An effective means to improve quality of education is technology: PM @narendramodi https://t.co/nXflnTuU2V
— PMO India (@PMOIndia) August 17, 2017
Only Governments & Government initiatives will not make a New India. Change will be powered by each and every citizen of India: PM
— PMO India (@PMOIndia) August 17, 2017
As CEOs, you can sit with your teams and discuss with them- what can we do for the next five years, for a New India: PM @narendramodi
— PMO India (@PMOIndia) August 17, 2017
Every one of us is equally patriotic and wants India to scale new heights of progress. There is no difference in our love for the nation: PM
— PMO India (@PMOIndia) August 17, 2017