Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಿವೃತ್ತ ಸೇನಾ ಹಿರಿಯ ಹವಾಲ್ದಾರ್ ಬಲದೇವ್ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ನಿವೃತ್ತ ಸೇನಾ ಹಿರಿಯ ಹವಾಲ್ದಾರ್ ಬಲದೇವ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ ಮತ್ತು  ಭಾರತಕ್ಕೆ ಸಿಂಗ್ ಅವರ ಅನನ್ಯ ಸೇವೆಯನ್ನು ಮುಂದಿನ ವರ್ಷಗಳಲ್ಲಿ ಸ್ಮರಿಸಲಾಗುವುದು ಎಂದು ಹೇಳಿದ್ದಾರೆ.  ಸಿಂಗ್ ಅವರು ಶೌರ್ಯ ಮತ್ತು ಧೈರ್ಯದ ನಿಜವಾದ ಪ್ರತಿರೂಪವಾಗಿದ್ದು, ರಾಷ್ಟ್ರಕ್ಕೆ ಅವರ ಅಚಲವಾದ ಸಮರ್ಪಣೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

 ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

“ಹವಾಲ್ದಾರ್ ಬಲದೇವ್ ಸಿಂಗ್ (ನಿವೃತ್ತ) ಅವರ ನಿಧನದಿಂದ ದುಃಖವಾಗಿದೆ.  ಭಾರತಕ್ಕೆ ಅವರ ಅನನ್ಯ ಸೇವೆಯು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯಲಿದೆ. ಅವರು ಶೌರ್ಯ ಮತ್ತು ಧೈರ್ಯದ ನಿಜವಾದ ಪ್ರತಿರೂಪವಾಗಿದ್ದು, ರಾಷ್ಟ್ರಕ್ಕಾಗಿ ಅವರ ಅಚಲವಾದ ಸಮರ್ಪಣೆಯು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲಿದೆ. ಕೆಲವು ವರ್ಷಗಳ ಹಿಂದೆ ನೌಶೇರಾದಲ್ಲಿ ಅವರನ್ನು ಭೇಟಿಯಾಗಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ.  ಅವರ ಕುಟುಂಬದವರು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು.”

 

 

*****